Political News: ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಇಂದು ಪ್ರತಿಭಟನೆ ನಡೆಸಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ವಿಜಯೇಂದ್ರ, ಬಿಜೆಪಿಯಿಂದ ಜನವಿರೋಧಿ ವಿರುದ್ಧದ ಹೋರಾಟ ಹಮ್ಮಿಕೊಂಡಿದ್ದೇವೆ. ಅವಿವೇಕ ನಿರ್ಧಾರವನ್ನ ವಿರೋಧಿಸಿದ್ದೇವೆ. ಸಿಎಂ ಏಕಾಏಕಿ ಪೆಟ್ರೋಲ್ ,ಡೀಸೆಲ್ ಬೆಲೆ ಏರಿಕೆ ಮಾಡಿದಾರೆ. ಇದಕ್ಕೆ ಕಾರಣ ಲೋಕ ಚುನಾವಣೆಗೆ ಮುನ್ನ ಕೈ ಶಾಸಕರು ಹೇಳಿಕೆ ನೀಡ್ತಿದ್ರು. 15-20 ಸ್ಥಾನ ಗೆಲ್ಲದೇ ಹೋದರೆ, ಗ್ಯಾರಂಟಿ ನಿಲ್ಲಿಸಬೇಕೆಂಬ ಹೇಳಿಕೆ ನೀಡಿದ್ರು. ಲೋಕಸಭಾ ಫಲಿತಾಂಶದ ಬಳಿಕ ಸಿಎಂ,ಡಿಕೆಶಿ ಅವರಿಗೆ ಮುಖಭಂಗ ಆಯ್ತು. ಗ್ಯಾರಂಟಿ ನಿಲ್ಲಿಸಿದ್ರೆಜನ ಧಂಗೆ ಏಳ್ತಾರೆ ಎಂದು ಸಿಎಂ ಪಿತೂರಿ ಮಾಡಿದ್ದಾರೆ. ಹೀಗಾಗಿ ಸಂಪುಟ ಸದಸ್ಯರ ಜೊತೆ ಸೇರಿ ಪೆಟ್ರೋಲ್, ಡೀಸೆಲ್ ಬೆಲ ಏರಿಕೆ ಮಾಡುವ ನಿರ್ಧಾರ ಮಾಡಿದ್ದಾರೆಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಡಾ. ಸಿ. ಎನ್. ಅಶ್ವತ್ಥ ನಾರಾಯಣ ಮಾತನಾಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಯಡವಟ್ಟು ಮಾಡ್ತಿದೆ. ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ್ರು. ಅಧಿಕಾರಕ್ಕೆ ಬಂದ ನಂತರ ಎಲ್ಲಾ ಬೆಲೆ ಏರಿಕೆ ಮಾಡಿದ್ರು. ಆಸ್ತಿ ತೆರಿಗೆ, ನೀರಿನ ದರ, ಕರೆಂಟ್ ದರ, ಬಿತ್ತನೆ ಬೀಜ ಸೇರಿದಂತೆ ಎಲ್ಲಾ ದರ ಏರಿಕೆ ಮಾಡಿದ್ದಾರೆ. ಆರ್ಥಿಕ ತಜ್ಞರಾಗಿರುವ ಸಿದ್ದರಾಮಯ್ಯ ನೇತೃತ್ಬದಲ್ಲಿ ಹಣದುಬ್ಬರ ಆಗ್ತಿದೆ. ಪ್ರತಿ ಮಾಡ್ತಿದೇವೆ. ಇದು ದಪ್ಪ ಚರ್ಮದ ಸರ್ಕಾರ. ಎಷ್ಟು ಕಿವಿ ಹಿಂಡಿದ್ರೂ ಕೇಳ್ತಾ ಇಲ್ಲಾ. ಬೆಲೆ ಏರಿಕೆ ಬಗ್ಗೆ ಅಕ್ಕಪಕ್ಕದ ರಾಜ್ಯದ ಉದಾಹರಣೆ ಕೊಡ್ತಾರೆ. ಸಮಜಾಯಿಸಿ ಕೊಡ್ತಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗಿದ್ದಾಗನಾವು ಕೋವಿಡ್ ಸಂದರ್ಭ 1. ರೂ ಹೆಚ್ಚಿಸಿದ್ವು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತಾಡಿದ್ದು ನಿಮ್ಗೆ ಗೊತ್ತೇ ಇದೆ. ಎಲ್ಲಾ ಬೆಲೆ ಏರಿಕೆ ಆಗುತ್ತೆ ತಿಳಿ ಹೇಳಿದ ಸಿದ್ದರಾಮಯ್ಯ ಈಗ 3 ರೂ. ಏರಿಕೆಮಾಡಿದ್ದಾರೆ. ಮಾರ್ಚ್ ನಲ್ಲಿ ಹಣದ ಕೊರತೆ ಇಲ್ಲಾ ಅಂದ್ರು. ಮೇ ದಲ್ಲೂ ಕೂಡ ಹಣದ ಕೊರತೆ ಇಲ್ಲಾ ಅಂದ್ರು. ಬೆಲೆ ಏರಿಕೆ ಮಾಡ್ತಿರುವ ಕೆಟ್ಟ ಸರ್ಕಾರಕ್ಕೆ ಪಾಠ ಕಲಿಸಬೇಕು. ಕಾಂಗ್ರೆಸ್ ಒಂದು ವರ್ಷದಲ್ಲಿ ಒಂದೆ ಒಂದು ಒಳ್ಳೇ ಕೆಲ್ಸಾ ಮಾಡಿಲ್ಲಾ. ಬರೀ ಲೂಟಿ ಹೊಡಿಯಲು ತಯಾರಾಗಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡಿದ್ದಾರೆ. ಜೈಲಿನಲ್ಲಿ ಇರಬೇಕಾದ ಸರ್ಕಾರ ಇದು. ಇಷ್ಟುವೀಕ್, ಬಲಹೀನ, ಅಸಹಾಯಕ ಚೀಫ್ ಮಿನಿಸ್ಟರ್ ಅಂದ್ರೆ ಸಿದ್ದರಾಮಯ್ಯ. ಸ್ವಾತಂತ್ರ್ಯ ಬಂದ ನಂತರದ ಮುಖ್ಯಂತ್ರಿಗಳಲ್ಲಿ ಸಿದ್ದರಾಮಯ್ಯ ವೀಕ್ ಚೀಫ್ ಮಿನಿಸ್ಟರ್. ಎಲ್ಲರೂ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಅಸಹಾಯಕ ಆಗಿದ್ದಾರೆ. ಅಸಹಾಯಕ ಮುಖ್ಯಮಂತ್ರಿ ಇಂದ ರಾಜ್ಯದ ಅಭಿವೃದ್ಧಿ ಸಾಧ್ಯ ಇಲ್ಲ. ನನಗೆ ಬೆಂಬಲ ಕೊಡಯ್ಯಾ, ನನ್ನ ಜೊತೆ ಇರಯ್ಯಾ ಅಂತಾ ಮಂತ್ರಿಗಳಿಗೆ ಸಿಎಂ ದಮ್ಮಯ್ಯ ಹೊಡೆಯುತ್ತಿದ್ದಾರೆ ಎಂದದು ವ್ಯಂಗ್ಯವಾಡಿದ್ದಾರೆ.