ಬೆಂಗಳೂರು: ವಿಧಾನಸಭೆಯಲ್ಲಿನ ಇಂದಿನ ಕಲಾಪ ನಿನ್ನೆಗಿಂತಲೂ ತೀವ್ರ ಕುತೂಹಲಕಾರಿಯಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸೋ ಸಲುವಾಗಿ ಬಿಜೆಪಯವರು ಷಡ್ಯಂತ್ರ ನಡೆಸುತ್ತಿದ್ದು ಶಾಸಕರನ್ನು ಸೆಳೆಯೋ ಪ್ರಯತ್ನ ಮಾಡ್ತಿದ್ದಾರೆ. ತಾತ್ಕಾಲಿಕವಾಗಿ ಖುಷಿ ಪಡುತ್ತಿದ್ದೀರಿ, ಆದ್ರೆ ನಿಮಗೆ ಮುಂದೆ ಕಾದಿದೆ ಅಂತ ಸಿಎಂ ಪ್ರತಿಪಕ್ಷಕ್ಕೆ ಮಾತಿನ ಚಾಟಿ ಬೀಸಿದ್ರು.
ವಿಶ್ವಾಸಮತ ಯಾಚನೆ ಕುರಿತಾಗಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಇಂದೂ ಸಹ ಸಾಕಷ್ಟು ವಿಚಾರಗಳು ಚರ್ಚೆಗೆ ಬರುತ್ತಿವೆ. ಮೊದಲಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಿಮ್ಮ ಶಾಸಕರನ್ನು ಕರೆತರುವುದು ಅಷ್ಟು ಸುಲಭವಲ್ಲ ಅನ್ನೋದು ಗೊತ್ತಿರುವ ವಿಚಾರ. ಬಿಜೆಪಿಯವರಿಗೆ ಬಹುಮತವಿದ್ದರೆ ಅವರಿಗೇಕೆ ಆತುರ ಅಂತ ಪ್ರಶ್ನಿಸಿದ ಸಿಎಂ, ಲೋಕಸಭೆಯಲ್ಲಿ 10 ದಿನಗಳ ಕಾಲ ವಿಶ್ವಾಸಮತ ನಡೆಯಿತು ಆದರೆ ಈಗೆ ಏಕೆ ಇಷ್ಟು ಆತುರಪಡುತ್ತಿದ್ದಾರೆ ಇಲ್ಲಿ ಪಕ್ಷ ಬೇಧ ಮಾಡಬೇಡಿ ಅಂತ ಹೇಳಿದ್ರು.
ಬಳಿಕ ಮಾತನಾಡಿದ ಸಿಎಂ, ಅತೃಪ್ತ ಶಾಸಕರು ಮುಂಬೈನಲ್ಲೇ ಶಾಶ್ವತವಾಗಿರಲು ಸಾಧ್ಯವಿಲ್ಲ. ನನಗೆ ನೀವೆಲ್ಲರೂ 10 ವರ್ಷಗಳ ರಾಜಕೀಯ ಅನುಭವ ನೀಡಿ ಬದುಕು ಕಲಿಸಿದ್ದೀರಿ ಹೀಗಾಗಿ ನಾನು ಯಾರ ಮೇಲೂ ಆಪಾದನೆ ಮಾಡೋದಿಲ್ಲ ಎಂದರು. ಇನ್ನು ಶಾಸಕರನ್ನು ನೀವು ವಿಶೇಷ ವಿಮಾನಗಳಲ್ಲಿ ಇಲ್ಲಿಂದ ಓಡಿಸಿದ್ದೀರಿ. ವಿಶೇಷ ವಿಮಾಗಳು ಓಡಿದಷ್ಟು ಆಟೋಗಳೂ ಓಡಿರುವುದಿಲ್ಲ ಅಂತ ಸಿಎಂ ಲೇವಡಿ ಮಾಡಿದ್ರು. ನೀವು ತಾತ್ಕಾಲಿಕವಾಗಿ ಖುಷಿ ಪಡುತ್ತಿದ್ದೀರಿ. ನಿಮಗೆ ಮುಂದೆ ಕಾದಿದೆ ಅಂತ ಪ್ರತಿಪಕ್ಷಕ್ಕೆ ಸಿಎಂ ಕುಮಾರಸ್ವಾಮಿ ಚಾಟಿ ಬೀಸಿದ್ರು.