ಮೋದಿ ಅವರ ಹೆಸರಲ್ಲಿ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವುದನ್ನು ಸಿಎಂ ಮೊದಲು ನಿಲ್ಲಿಸಲಿ: ತೇಜಸ್ವಿ ಸೂರ್ಯ

Political News: ಬಿಡದಿಯಲ್ಲಿ ರೈತರ ಭೂಮಿಯಲ್ಲಿ ಟೌನ್‌ಶಿಪ್ ನಿರ್ಮಿಸಲು ಸಿದ್ಧರಾಗಿರುವ ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಸ್ವಾರ್ಥದ ಬಿಡದಿ ಟೌನ್‌ಶಿಪ್ ಯೋಜನೆಯ ನೆಪದಲ್ಲಿ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಹೆಸರಲ್ಲಿ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವುದನ್ನು ಶ್ರೀ ಡಿ.ಕೆ. ಶಿವಕುಮಾರ್ ಮೊದಲು ನಿಲ್ಲಿಸಲಿ!

ಈ ಬಿಡದಿ ಟೌನ್‌ಶಿಪ್ ಯೋಜನೆ ಬೇರೇನೂ ಅಲ್ಲ, ಇದು ಕೇವಲ ಸಿಎಂ ಡಿ.ಕೆ.ಶಿವಕುಮಾರ್ ಅವರ ಅಹಂಕಾರದ, ಸ್ವಪ್ರತಿಷ್ಠೆಯ ಹಠದ ಯೋಜನೆ! ಅನ್ನ ಕೊಡುವ ರೈತರನ್ನು ಸೌಜನ್ಯಕ್ಕೂ ಮಾತನಾಡಿಸಿಲ್ಲ, ಅವರ ವಿಶ್ವಾಸವಂತೂ ಮೊದಲೇ ಇಲ್ಲ ಎಂದು ಸಿಎಂ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಇತ್ತ ಭೂಸ್ವಾಧೀನದ ಕಾನೂನುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ರೈತರ ಭೂಮಿಗೆ ಕೈ ಹಾಕುವ ಮುನ್ನ ಅವರ ಜೊತೆ ಸಮಾಲೋಚನೆ ನಡೆಸಬೇಕು ಮತ್ತು ಪಾರದರ್ಶಕತೆ ಇರಲೇಬೇಕು. ರೈತರ ಭೂಮಿ ಇವರ ಜಾಗೀರಲ್ಲ! ನಿನ್ನೆ ನಾನು ಶ್ರೀ ನಿಖಿಲ್ ಕುಮಾರ್ ಅವರೊಂದಿಗೆ ನೇರವಾಗಿ ಮಾತನಾಡಿ, ಈ ಅನ್ಯಾಯದ ವಿರುದ್ಧದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

About The Author