Tuesday, May 21, 2024

Latest Posts

ಬಾಕಿ ಹಣ ಪಾವತಿ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ; ಡಿ.ಕೆಂಪಣ್ಣ

- Advertisement -

ಬೆಂಗಳೂರು: ಕಾಮಗಾರಿ ಮುಗಿದರೂ ಗುತ್ತಿಗೆದಾರರಿಗೆ ಬಾಕಿ ಉಳಿದಿರುವ ಮೊತ್ತ ಪಾವತಿಯಾಗದ ಕಾರಣ ಆಡಳಿತ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇನ್ನು 30 ದಿನಗಳಲ್ಲಿ ಬಾಕಿ ಮೊತ್ತ ಪಾವತಿ ಮಾಡದಿದ್ದರೆ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುವುದಾಗಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಅವರು ಗುತ್ತಿಗೆದಾರರಿಗೆ ಕಾಮಗಾರಿಯ ಬಾಕಿ ಉಳಿದಿರುವ ಹಣವನ್ನು ಇನ್ನು 30 ದಿನಗಳೋಳಗಾಗಿ ಪಾವತಿ  ಮಾಡದಿದ್ದರೆ ಸಂಘದಿಂದ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಆಯ್ದ ಗುತ್ತಿಗೆದಾರರ ಬಾಕಿ ಹಣವನ್ನು ಮಾತ್ರ ಸಂಪೂರ್ಣ ಪಾವತಿ ಮಾಡಿದ್ದೀರಿ ಆದರೆ ಹಿರಿತನದ ಲೆಕ್ಕದಲ್ಲಿ ಪಾವತಿ ಮಾಡಿಲ್ಲ. ಕನಿಷ್ಟ ಪಕ್ಷದಲ್ಲಿ ಶೇ 50 ರಷ್ಟು ಬಾಕಿ ಮೊತ್ತವನ್ನು ಮಾತ್ರ ಪಾವತಿ ಮಾಡಿ ಎಂದು ಒತ್ತಾಯಿಸಿದರು.

ಈಗಾಗಲೆ ಸರ್ಕಾರಕ್ಕೆ ನಾಲ್ಕು ಬಾರಿ ಲಿಖಿತ ಪತ್ರ ಬರೆದು ಬಾಕಿ ಹಣವನ್ನು ಪಾವತಿ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ. ಕೆಲವೇ ಗುತ್ತಿಗೆದಾರರ ಹಣವನ್ನುಮಾತ್ರ ಪಾವತಿ ಮಾಡಿದ್ದು ಸರಿಯಾದ ರೀತಿಯಲ್ಲಿ ಹಣ ಬಂದಿಲ್ಲ ಎಂದು ಅಧ್ಯಕ್ಷ ಡಿ. ಕೆಂಪಣ್ಣ ಆರೋಪ ಮಾಡಿದ್ದಾರೆ.

ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಧಾರವಾಡದ ಇಬ್ಬರು

ಸರ್ವೀಸ್ ರೋಡ್ ಬಂದ್ ಮಾಡಿದ ಪ್ರತಿಭಟನಾಕಾರರು: ಬಿಸಿಲಿನಲ್ಲಿ ಸಾರ್ವಜನಿಕರ ಪರದಾಟ

Income Tax : ಐಟಿ ದಾಳಿ : 40 ಕೋಟಿಗೂ ಅಧಿಕ ಹಣ ಲಭ್ಯ…!

- Advertisement -

Latest Posts

Don't Miss