Hubli News: ಹುಬ್ಬಳ್ಳಿ: ಗೃಹಸಚಿವ ಜಿ.ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿದ್ದು, ಹುಬ್ಬಳ್ಳಿಯ ನೇಹಾ ಮತ್ತು ಅಂಜಲಿ ಕೊಲೆ ಕೇಸ್ ಬಗ್ಗೆ ಮಾತನಾಡಿದ್ದಾರೆ.
ಏ.18 ರಂದು ನೇಹಾ ಎಂಬ ಹೆಣ್ಣು ಮಗಳನ್ನ ಫಯಾಜ್ ಕೊಲೆ ಮಾಡುತ್ತಾನೆ. ಈ ಕುರಿತು ನಾನು ಹೇಳುವುದಿಲ್ಲ. ತನಿಖೆ ನಡೆಯುತ್ತಿದೆ. ಈ ಘಟನೆ ಸರ್ಕಾರ ಗಮನಕ್ಕೆ ಬಂದ ಒಂದು ಗಂಟೆಯಲ್ಲಿ ಆರೋಪಿಯನ್ನು ಬಂಧನ ಮಾಡಲಾಗಿತ್ತು. ಇದನ್ನು ಎಸ್.ಐ ಟಿ ಗೆ ಸರ್ಕಾರ ಪ್ರಕರಣ ಒಪ್ಪಿಸಲಾಯಿತು. ಇದನ್ನು ಅನೇಕರು ರಾಜಕೀಯ ಬಣ್ಣ ಬಳೆದರು. ಅನೇಕ ಜನ ಅನೇಕ ರೀತಿ ವ್ಯಾಖ್ಯಾನ ಮಾಡಿದ್ದಾರೆ. ಇದನ್ನು ಸರ್ಕಾರ ಗಮನಿಸಿದೆ. ಇದರ ಮೂಲಕ ಸತ್ಯಾಂಶ ಹೊರತರಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ.
ಆರೋಪಿಗೆ ಶಿಕ್ಷೆಯಾಗ ಬೇಕು ಎನ್ನುವುದು ನಮ್ಮಮೂಲ ಉದ್ದೇಶ. ಮಾರ್ಚ್ 15 ರಂದು ಎರಡನೇ ಕೊಲೆಯಾಗುತ್ತೆ. ಅಂಜಲಿ ಎಂಬ ಯುವತಿ ಕೊಲೆಯಾಗಿದೆ. ಗಿರೀಶ್ ಸಾವಂತ್ ಎನ್ನುವ ವ್ಯಕ್ತಿ ಮಾಡಿರುತ್ತಾನೆ. ಇದನ್ನು ಗಂಭೀರವಾಗಿ ಪರಗಣಿಸಿ, ಈ ಪ್ರಕರಣವನ್ನು ಸಿ.ಐ.ಡಿ ನೀಡಲಾಗುತ್ತೆ. ಇಂದು ಸಾಯಂಕಾಲ ಅಥವಾ ನಾಳೆ ಅಧಿಸೂಚನೆ ಹೊರಡಿಸಲಾಗುವುದು. ಅಂಜಲಿ ಕುಟುಂಬ ಅತ್ಯಂತ ಬಡ ಕುಟುಂಬ. ಅಂಜಲಿಯನ್ನು ಯಾವ ಉದ್ದೇಶಕ್ಕೆ ಕೊಲೆ ಯಾಗಿದೆ ಎಂಬ ಬಗ್ಗೆ ಕಂಡು ಹಿಡಿಯಬೇಕಾಗುತ್ತೆ . ಇಂತಹ ಘಟನೆಗಳು ಆಗಬಾರದು. ಸಮಾಜದಲ್ಲಿ ಇಂತಹ ಘಟನೆ ಆಗಬಾರದು. ಎಲ್ಲ ಮುಖಂಡರು ಮೃತರ ಕುಟುಂಬಕ್ಕೆ ಭೇಟಿನೀಡಿದ್ದಾರೆ. ನಾನು ಇವತ್ತು ಎರಡು ಕುಟುಂಬಕ್ಕೆ ಭೇಟಿನೀಡಿದ್ದೇನೆ ಎಂದು ಗೃಹಸಚಿವರು ಹೇಳಿದ್ದಾರೆ.
ಇನ್ನು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಫೋನ್ ಟ್ಯಾಪ್ ಆರೋಪ ಮಾಡಿದ್ದು, ಇದಕ್ಕೆ ಗೃಹಸಚಿವರು ಪ್ರತಿಕ್ರಿಯಿಸಿದ್ದಾರೆ. ಗೃಹ ಇಲಾಖೆಯಿಂದಲೇ ಯಾವುದೇ ಪೋನ್ ಟ್ಯಾಪ್ ಆಗಿಲ್ಲ. ಯಾರೊಬ್ಬರ ಪೋನ್ ಟ್ಯಾಪ್ ಆಗಿಲ್ಲ, ಮಾಡೋದು ಇಲ್ಲ. ಪೋನ್ ಟ್ಯಾಪ್ ಆಗುವುದಕ್ಕೆ ಅದರದೇಯಾದ ನಿಯಮಗಳಿವೆ. ಸರ್ಕಾರದ ಆದೇಶದ ಮೇರೆಗೆ ಟ್ಯಾಪ ಮಾಡಬೇಕಾಗುತ್ತದೆ. ಕುಮಾರಸ್ವಾಮಿಯವರಿಗೆ ಪೋನ್ ಟ್ಯಾಪ್ ಆಗುತ್ತಿವೆ ಅನ್ನಿಸಿದ್ದರೆ ಅವರು ಡಿಟೇಲ್ಸ ಕೊಡಲಿ. ಅವರ ಪೋನ್ ಟ್ಯಾಪ್ ಡಿಟೇಲ್ಸ್ ನೀಡಲಿ ಕೊಡಲಿ ಕ್ರಮ ಕೈಗೊಳ್ಳುತ್ತೇವೆ. ಇದರ ಬಗ್ಗೆ ಕುಮಾರಸ್ವಾಮಿಯವರಿಗೆ ನಾನು ಮನವಿ ಮಾಡುತ್ತೇನೆ. ಇಲಾಖೆಯಿಂದ ಆಗುತ್ತಿದೇಯಾ ಅಥವಾ ಪ್ರೈವೇಟ್ ಆಗಿ ಆಗತ್ತಿದೇಯಾ ನೋಡತ್ತೇವೆ. ತಕ್ಷಣವೇ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರದಿಂದ ಮಾಡುತ್ತಿದ್ದಾರೆ ಅಂದ್ರೆ ಅದಕ್ಕೆ ಮಾಹಿತಿ ನೀಡಬೇಕಲ್ವಾ..? ಎಂದು ಗೃಹಸಚಿವರು ಪ್ರಶ್ನಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಈಗಾಗಲೇ ಪ್ರಜ್ವಲ್ ರೇವಣ್ಣ ಬಧನಕ್ಕೆ ಬ್ಲೂ ಕಾರ್ನ್‌ರ್ ಮೋಟಿ ನೀಡಲಾಗಿದೆ. ಯಾವ ದೇಶದಲ್ಲಿದ್ದಾರೆ ಎನ್ನುವುದನ್ನು ಒತ್ತೆಗಾಗಿ ಈ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗುತ್ತದೆ. ಇಲ್ಲಿವರೆಗೂ ನಮ್ಮಗೆ ಇಂಟರ್ ಪೋಲಿಂದ ಯಾವುದೇ ಮಾಹಿತಿ ಬಂದಿಲ್ಲ. ಇನ್ನೂ ಅಧಿಕೃತವಾಗಿ ಬ್ಲೂ ಕರ್ನರ್ ನೋಟಿಸಗೆ ಉತ್ತರ ಬಂದಿಲ್ಲ. ನೆಕ್ಸ್ಟ್ ಸ್ಟೆಂಪ್ ಅಂದ್ರೆ ಅವರ ಡಿಪ್ಲೊಮೆಟ್ರಕ್ ಪಾಸಪೋರ್ಟ್ ರದ್ದು ಮಾಡುವುದು. ಈಗ ಕೋರ್ಟ ಕೂಡಾ ವಾರೆಂಟ್ ನೀಡಿದೆ. ವಾರೆಂಟ್ ಮಾಹಿತಿ ಪಾಸಪೋರ್ಟ್ ಕಚೇರಿಗೆ ಕಳುಹಿಸಲಾಗುವುದು. ಪಾಸ್ ಪೋರ್ಟ್ ರದ್ದಾದ ಮೇಲೆ ಅವರು ದೇಶಕ್ಕೆ ಮರಳಲೇಬೇಕು. ಯಾವ ದೇಶವು ಅವರನ್ನು ಅಲ್ಲಿ ಇಟ್ಕೊಳ್ಳುವುದಿಲ್ಲ. ಎಲ್ಲ ಕಡೆಯಿಂದಲೂ ಅಧಿಕಾರಿಗಳು ನಿಗಾವಹಿಸಿದ್ದಾರೆ. ಸಿಕ್ಕ ತಕ್ಷಣವೇ ಅವರನ್ನು ವಶಕ್ಕೆ ಪಡೆಯುತ್ತಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಕ್ರಿಮಿನಲ್‌ಗಳ ಜೊತೆ ಹುಬ್ಬಳ್ಳಿ ಪೊಲೀಸರ ಸಂಪರ್ಕ: ಅರವಿಂದ ಬೆಲ್ಲದ್ ಶಾಕಿಂಗ್ ಹೇಳಿಕೆ!
ಹ*ತ್ಯೆಯಾದ ಯುವತಿ ಅಂಜಲಿ ಸಹೋದರಿ ಆತ್ಮಹ*ತ್ಯೆಗೆ ಯತ್ನ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹುಬ್ಬಳ್ಳಿಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್ ತಲೆದಂಡ