Tuesday, April 29, 2025

Latest Posts

ಹುಬ್ಬಳ್ಳಿಯ ಕೊ* ಕೇಸ್: ನೇಹಾ ಮತ್ತು ಅಂಜಲಿ ಮನೆಗೆ ಭೇಟಿ ನೀಡಿದ ಗೃಹಸಚಿವ ಜಿ.ಪರಮೇಶ್ವರ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಬಿವಿಬಿ‌ ಕಾಲೇಜಿನಲ್ಲಿ ಹತ್ಯೆಯಾಗಿದ್ದ ನೇಹಾ ನಿವಾಸಕ್ಕೆ ಸಚಿವ ಜೀ ಪರಮೇಶ್ವರ ಭೇಟಿ ನೀಡಿ, ಅಪ್ಪ ಅಮ್ಮನಿಗೆ ಸಾಂತ್ವನ ಹೇಳಿದ್ದಾರೆ.

ನಗರದ ಬಿಡ್ನಾಳ‌ ಕ್ರಾಸ್ ನೇಹಾ ಹಿರೇಮಠ‌ ನಿವಾಸಕ್ಕೆ ಗೃಹ‌ ಸಚಿವರ‌ು ಭೇಟಿ ನೀಡಿದ್ದು, ನೇಹಾ ತಂದೆ ನಿರಂಜನ ಹಿರೇಮಠ ಹಾಗೂ ತಾಯಿಗೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ನೇಹಾ ತಂದೆ ನಿರಂಜನ್ ಮಗಳ ಸಾವಿನ ಬಗ್ಗೆ ಎಳೆಎಳೆಯಾಗಿ ಗೃಹ‌ಸಚಿವರ ಮುಂದೆ ಮಾತನಾಡಿದ್ದಾರೆ.

ಮಗಳ‌ ಸಾವಿನ ನಂತರ‌ ಸ್ಥಳೀಯ ಶಾಸಕರು ನಿಮ್ಮಗೆ ತಪ್ಪು ‌ಮಾಹಿತಿ ನೀಡಿದ್ದಾರೆ. ಅವರ ವಿರುದ್ಧ ಪಕ್ಷದಲ್ಲಿ ಕ್ರಮ ಕೈಗೊಳ್ಳಬೇಕು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನನ್ನ ಮಗಳ ಸಾವಿನ ಬಗ್ಗೆ ನಮ್ಮ‌ ಸ್ಥಳೀಯ ಶಾಸಕರ ನಿಮ್ಮಗೆ ತಪ್ಪು ಮಾಹಿತಿ ನೀಡೋದು‌ ಎಷ್ಟು ಸರಿ ಎಂದು ನಿರಂಜನ್ ಪ್ರಶ್ನಿಸಿದ್ದಾರೆ. ಬಿವಿಬಿ ಕಾಲೇಜಿನ ಆವರಣಜಲ್ಲಿ ಏ.18ರಂದು ನೇಹಾಳ ಕೊಲೆಯಾಗಿತ್ತು.ಅದಾದ ಬಳಿಕ ಗೃಹಸಚಿವರು ಇದೇ ಮೊದಲ ಬಾರಿ ನೇಹಾ ನಿವಾಸಕ್ಕೆ ಬಂದಿದ್ದರು. ಗೃಹ‌ ಸಚಿವರಿಗೆ ಶಾಸಕ ಎನ್ ಹೆಚ್ ಕೊನರೆಡ್ಡಿ ಹಾಗೂ ಕಾಂಗ್ರೆಸ್ ನಗರ ಹಾಗೂ ಗ್ರಾಮೀಣ ಜಿಲ್ಲಾಧ್ಯಕ್ಷರು ಸಾಥ್ ನೀಡಿದ್ದಾರೆ.

ವೀರಾಪುರ ಅಂಜಲಿ ನಿವಾಸಕ್ಕೆ ಬಂದಿದ್ದ ಶಾಸಕ ಪ್ರಸಾದ್ ಅಬ್ಬಯ್ಯ ನೇಹಾ ನಿವಾಸಕ್ಕೆ ಗೈರಾಗಿದ್ದಾರೆ. ನೇಹಾ ತಂದೆ ನಿರಂಜನ್ ಪ್ರಸಾದ್ ಅಬ್ಬಯ್ಯ ಬಗ್ಗೆ ಅಸಮಾಧಾನ ಹೊಂದಿದ್ದು ಈ ಗೈರಿಗೆ ಕಾರಣವೆನ್ನಲಾಗಿದೆ.

ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ವೀರಾಪುರ ಓಣಿಯಲ್ಲಿ ಹತ್ಯೆಯಾಗಿದ್ದ ಅಂಜಲಿ ಅಂಬಿಗೇರ ನಿವಾಸಕ್ಕೂ ಗೃಹಸಚಿವರು ಭೇಟಿ ನೀಡಿದ್ದಾರೆ. ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾತನಾಡಿರುವ ಅಂಜಲಿ ಅಜ್ಜಿ ಮತ್ತು ಸಹೋದರಿ, ಆರೋಪಿಗೆ ಗಲ್ಲು ಶಿಕ್ಷೆಯಾಗಲೇಬೇಕು ಎಂದು ಹೇಳಿದ್ದಾರೆ. ಇನ್ನು ಈ ಭೇಟಿ ವೇಳೆ, ಗೃಹ‌ ಸಚಿವರಿಗೆ ಶಾಸಕ ಪ್ರಸಾದ್ ಅಬ್ಬಯ್ಯ, ಕಾಂಗ್ರೇಸ್ ಮಹಾನಗರ ಜಿಲ್ಲಾಧ್ಯಕ್ಷ‌ ಹಾಗೂ ಗ್ರಾಮೀಣ ಅಧ್ಯಕ್ಷ ಸಾಥ್ ನೀಡಿದ್ದಾರೆ.

ಕ್ರಿಮಿನಲ್‌ಗಳ ಜೊತೆ ಹುಬ್ಬಳ್ಳಿ ಪೊಲೀಸರ ಸಂಪರ್ಕ: ಅರವಿಂದ ಬೆಲ್ಲದ್ ಶಾಕಿಂಗ್ ಹೇಳಿಕೆ!

ಹ*ತ್ಯೆಯಾದ ಯುವತಿ ಅಂಜಲಿ ಸಹೋದರಿ ಆತ್ಮಹ*ತ್ಯೆಗೆ ಯತ್ನ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹುಬ್ಬಳ್ಳಿಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್ ತಲೆದಂಡ

- Advertisement -

Latest Posts

Don't Miss