Saturday, July 27, 2024

Latest Posts

Health Tips: ಪೇನ್ ಕಿಲ್ಲರ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.. ಇದೇ ಚಟವಾಗದಿರಲಿ..

- Advertisement -

Health Tips: ದೇಹದ ಯಾವುದೇ ಭಾಗದಲ್ಲಿ ನೋವಾದರೂ ಕೆಲವರು ಪಟ್ ಅಂತಾ ಪೇನ್ ಕಿಲ್ಲರ್ ತೆಗೆದುಕೊಳ್ಳುತ್ತಾರೆ. ಆ ತಕ್ಷಣ ನೋವು ಹೊರಟು ಹೋಗುತ್ತದೆ. ಮತ್ತೊಮ್ಮೆ ಇದೇ ರೀತಿಯಾದಾಗ, ಮತ್ತೆ ಪೇನ್ ಕಿಲ್ಲರ್ ಮೊರೆ ಹೋಗುತ್ತಾರೆ. ಆದರೆ ಇದೇ ಚಟವಾದರೆ, ಆರೋಗ್ಯ ಹದಗೆಡುವ ಸಾಧ್ಯತೆ ಇದೆ ಅಂತಾರೆ ವೈದ್ಯರು.

ವೈದ್ಯರು ಹೇಳುವ ಪ್ರಕಾರ, ಅಗತ್ಯಕ್ಕಿಂತ ಹೆಚ್ಚು, ಅಥವಾ ಪದೇ ಪದೇ ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುವುದು ತಪ್ಪು. ಸಾಮಾನ್ಯವಾಗಿ ಬಿದ್ದು ಪೆಟ್ಟಾದಾಗ, ಅದರ ನೋವು ಹೋಗಲು ಹಲವರು ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ವಯಸ್ಸಾಗುತ್ತಿದ್ದಂತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನೋವಿಗೆಲ್ಲ ಪೇನ್ ಕಿಲ್ಲರ್ ತೆಗೆದುಕೊಂಡರೆ, ಅದು ಚಟವಾಗಿ ಬದಲಾಗುತ್ತದೆ ಅಂತಾರೆ ವೈದ್ಯರು.

ಏಕೆಂದರೆ, ಇಂಥ ನೋವುಗಳಿಗೆ ಪೇನ್ ಕಿಲ್ಲರ್ ತೆಗೆದುಕೊಳ್ಳದೇ ಸಮಾಧಾನವಾಗುವುದಿಲ್ಲ. ಆದರೆ ಇದಕ್ಕೆ ಪೇನ್ ಕಿಲ್ಲರ್ ಪರಿಹಾರವಲ್ಲ. ಇಂಥ ನೋವುಗಳಿಗೆ, ವೈದ್ಯರ ಬಳಿ ಹೋಗಿಯೇ ನೀವು ಪರಮ್‌ನೆಂಟ್‌ ಚಿಕಿತ್ಸೆ ಪಡೆಯಬೇಕಾಗುತ್ತದೆ. ಅಲ್ಲದೇ ನಾವು ಯಾವ ವಯಸ್ಸಿನಲ್ಲಿ ಪೇನ್ ಕಿಲ್ಲರ್ ತೆಗೆದುಕೊಳ್ಳುತ್ತಿದ್ದೇವೆ. ಇದರಿಂದೇನಾದರೂ ಸೈಡ್ ಎಫೆಕ್ಟ್ ಇದೆಯಾ ಮತ್ತು ಇದನ್ನು ಎಷ್ಟು ಬಾರಿಯಷ್ಟೇ ತೆಗೆದುಕೊಳ್ಳಬಹುದು.? ಹೀಗೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ಬಳಿಕವಷ್ಟೇ ನೀವು ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss