Political News: 30 ದಿನ ಕಳೆದರೂ ಕೂಡ ರಾಜ್ಯ ಸರ್ಕಾರ ರೈತರಿಗೆ ನೆರೆ ಪರಿಹಾರ ನೀಡಲಿಲ್ಲವೆಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಖುರ್ಚಿ ಗಲಾಟೆಯಲ್ಲಿ ಮಗ್ನವಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನಿದ್ದೆಯಿಂದ ಎದ್ದು ರೈತರ ಕಡೆ ಗಮನ ನೀಡಿ ಎಂದಿದ್ದಾರೆ.
ದಿನನಿತ್ಯ ಬೆಲೆ ಏರಿಕೆ, ಅಧಿಕಾರ ಹಸ್ತಾಂತರ, ಸಂಪುಟ ವಿಸ್ತರಣೆ, ಬುರಡೆ ಪ್ರಕರಣ ಸೇರಿದಂತೆ ವಿವಿಧ ಹಗರಣಗಳಲ್ಲಿಯೇ ಮುಳಗಿ ಹೋಗಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಅಳಲು ಕಣ್ಣಿಗೆ ಕಾಣುತ್ತಿಲ್ಲವೆ? ಕಂಡರು ಜಾಣ ಮೌನವೇ..? ಎಂದು ನಿಖಿಲ್ ಪ್ರಶ್ನಿಸಿದ್ದಾರೆ.
ನಿಮ್ಮ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರೈತರನ್ನು ಬೀದಿಗೆ ತಂದಿರುವುದೇ ನಿಮ್ಮ ದೊಡ್ಡ ಸಾಧನೆ. ಇನ್ನಾದರು ಖುರ್ಚಿ ಗಲಾಟೆಯಿಂದ ಎದ್ದು, ರೈತರ ಅಳಲನ್ನು ಆಲಿಸುವ ಕಾರ್ಯ ಮಾಡಿ. ಅತಿವೃಷ್ಟಿಯಿಂದ ಕಂಗಾಲಾಗಿರುವ ರೈತರಿಗೆ ಪರಿಹಾರ ನೀಡಿ ಎಂದು ಆಗ್ರಹಿಸುತ್ತೇನೆ ಎಂದು ನಿಖಿಲ್ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

