Political News: ಕಲಿಯುಗದ ಕಾಮಧೇನು, ಕೇಳಿದ್ದನ್ನು ನೀಡುವ ಕಲ್ಪವೃಕ್ಷ, ಕಲಿಯುಗದಲ್ಲಿ ಭಕ್ತಿ ಮಾಡಿದರೆ, ಮಗುವಿನಂತೆ ಬರುವ ದೇವರು ಅಂದ್ರೆ ಅದು ಗುರು ರಾಘವೇಂದ್ರರು ಅಂತಾರೆ ರಾಯರ ಭಕ್ತರು.
ಏಕೆಂದರೆ ಈ ಘೋರ ಕಲಿಯುಗದಲ್ಲೂ ರಾಯರ ಇರುವಿಕೆಯನ್ನು ಅವರ ಅನೇಕ ಭಕ್ತರು ಕಂಡಿದ್ದಾರೆ. ಹಾಗಾಗಿಯೇ ಅವರು ರಾಯರಿದ್ದಾರೆ ಎನ್ನುತ್ತಾರೆ. ಕಷ್ಟದಲ್ಲಿರುವ ಭಕ್ತರನ್ನು ರಾಯರು ಯಾವುದಾದರೂ 1 ರೂಪದಲ್ಲಿ ಬಂದು ಸಹಾಯ ಮಾಡುತ್ತಾರೆ.
ಆದರೆ ನಮ್ಮ ಸಿಎಂ ಸಿದ್ದರಾಮಯ್ಯನವರಿಗೆ ಹಿಂದೂ ದೇವರನ್ನು ಕಂಡರೆ ಅದ್ಯಾಕೆ ಅಷ್ಟು ಕೋಪವೋ ತಿಳಿದಿಲ್ಲ. ಅಭಿಮಾನಿ ನೀಡಿದ ರಾಯರ ಫೋಟೋವನ್ನು ತಳ್ಳಿ, ತಿರಸ್ಕರಿಸಿದ್ದಾರೆ. ಯಾವುದೋ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದಾಗ, ಅಲ್ಲಿ ಅಭಿಮಾನಿಗಳು ನೀಡಿದ ಬುಕ್, ಪತ್ರ, ಅರ್ಜಿ ಎಲ್ಲವನ್ನೂ ಸಿಎಂ ಸ್ವೀಕರಿಸಿದ್ದಾರೆ. ಆದರೆ ಯಾವುದೋ ಓರ್ವ ರಾಯರ ಭಕ್ತ, ತನ್ನ ನೆಚ್ಚಿನ ನಾಯಕನಿಗೆ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿ, ಗುರು ರಾಯರ ಫೋಟೋ ನೀಡಿದ್ದಾರೆ. ಆದರೆ ಸಿಎಂ ಅದನ್ನು ತಿರಸ್ಕರಿಸಿದ್ದಾರೆ.
ಇನ್ನು ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯರ ಫೋಟೋವನ್ನು ಸಿಎಂ ತಿರಸ್ಕರಿಸಿಲ್ಲ, ಬದಲಾಗಿ ರಾಯರೇ ಸಿದ್ದರಾಮಯ್ಯನನ್ನು ತಿರಸ್ಕರಿಸಿದ್ದಾರೆ. ವಿನಾಶ ಕಾಲೇ ವಿಪರೀತ ಬುದ್ಧಿ ಅಂತಾ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಜಗ್ಗೇಶ್, ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲಾ! ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪ ತಪ ವೈರಾಗ್ಯ ಉಪವಾಸದಿಂದ ಸೇವೆಮಾಡುತ್ತಾರೆ. ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯೆಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡದ್ದು. ರಾಯರಿದ್ದಾರೆ .ಎದ್ದುಬರುತ್ತಾರೆ. ಜೈಹಿಂದ್ ಎಂದು ಜಗ್ಗೇಶ್ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಕೋಟ್ಯಂತರ ಭಕ್ತರ ಆರಾಧ್ಯ ದೈವ ಶ್ರೀ ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ತಿರಸ್ಕರಿಸುವ ಮೂಲಕ ಸಿಎಂ @siddaramaiah ನವರು ತಮ್ಮ ಹಿಂದೂ ವಿರೋಧಿ ಮನಸ್ಥಿತಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.
ಮುಖ್ಯಮಂತ್ರಿಗಳೇ ಇದು ಕೇವಲ ಫೋಟೋ ತಿರಸ್ಕಾರವಲ್ಲ ಬದಲಿಗೆ ಸನಾತನ ಧರ್ಮ ಮತ್ತು ಹಿಂದೂ ಸಂಸ್ಕೃತಿಯ ಮೇಲಿನ ನಿಮ್ಮ ತಾತ್ಸಾರಕ್ಕೆ ಸಾಕ್ಷಿ.… pic.twitter.com/3AmibAY6XN
— BJP Karnataka (@BJP4Karnataka) January 19, 2026




