Sunday, September 8, 2024

Latest Posts

ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ; ಅಡಿಕೆ ಬೆಳೆಗಾರರ ಅಳಲು

- Advertisement -

ಹುಬ್ಬಳ್ಳಿ: ಕೈಗೆ ಬಂದ ಅಡಿಕೆ ಬೆಳೆಯನ್ನು ಕಳ್ಳತನ ಮಾಡಿಕೊಂಡು ಹೋದಾಗ ಪೊಲೀಸರಿಗೆ ದೂರು ನೀಡಿದಾಗಲೂ ಪೊಲೀಸರು ನ್ಯಾಯ ದೊರಕಿಸಿ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲವಾಗಿದೆ. ಸಾಲ ಮಾಡಿ ಬೆಳೆದ ಬೆಳೆಯನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ ಎಂದು ರೈತರು ಕಣ್ಣೀರಿನ ಕಥೆಯನ್ನು ಹೇಳುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತೆರೆಗಾಳ ಗ್ರಾಮದಲ್ಲಿ ಶೇಷಗಿರಿ ನಾರಾಯಣ ಭಟ್ ಎನ್ನುವವರ ಸುಮಾರು ಏಳು ಎಕರೆ ಜಾಗದಲ್ಲಿ ಸಾಲ ಮಾಡಿ ಬೆಳೆಸಿದ ಅಡಿಕೆ ಬೆಳೆಯನ್ನು ಕಳ್ಳರು ರಾತ್ರೋ ರಾತ್ರಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಇದು ಹಬ್ಬದ ಆಚರಣೆಯಂತೆ ಪ್ರತಿವರ್ಷವೂ ಬೆಳೆ ಕೈಗೆ ಬಂದ ಸಮಯದಲ್ಲಿ ಕಳ್ಳರು ತೋಟಕ್ಕೆ ಲಗ್ಗೆ ಇಟ್ಟು ಮನೆಯವರನ್ನು ಕೂಡಿಹಾಕಿ ಜೀವಬೆದರಿಕೆ ನೀಡಿ ಫಸಲನ್ನು ಕದ್ದು ಪರಾರಿಯಾಗುತ್ತಿದ್ದಾರೆ . ಈ ಘಟನೆ ಕುರಿತು ಸಾಕಷ್ಟು ಬಾರಿ ಠಾಣೆಗೆ ದೂರು ನೀಡಿದರೂ ಪೊಲೀಸರು ಆಸಕ್ತಿ ತೋರದೆ ನಿರ್ಲಕ್ಷಿಸುತ್ತಿದ್ದಾರೆ. ಸಿದ್ರಾಮಯ್ಯ ಸರ್ಕಾರ ಬಂದಾಗಿನಿಂದ ರೈತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಮಾಧ್ಯಮದ ಮುಂದೆ ಶೇಷಗಿರಿ ನಾರಾಯಣ ಭಟ್ ನೋವನ್ನು ಹೇಳಿಕೊಂಡರು.

2018 ರಿಂದ ಅಡಿಕೆ ತೋಟಕ್ಕೆ ಲಗ್ಗೆ ಇಡುತ್ತಿರುವ ಖತರ್ನಾಕ ಕಳ್ಳರು, ಕೈಗೆ ಸಿಕ್ಕ ಪಸಲನ್ನು ದೋಚಿಕೊಂಡು ಎಸ್ಕೇಪ್ ಆಗುತ್ತಿದ್ದಾರೆ. ಕಳ್ಳರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ.

ಒಟ್ಟಿನಲ್ಲಿ ವಿಡಿಯೋ ಸಮೇತ ಸಾಕ್ಷಿ ನೀಡಿದರೂ ಕೂಡ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.‌ಇದರಿಂದಾಗಿ ಪ್ರತಿ ವರ್ಷವೂ ಕಳ್ಳರ ಕಾಟಕ್ಕೆ ಬೇಸತ್ತು ದಿಕ್ಕು ತೋಚದಂತಾಗಿದೆ.‌ಯಲ್ಲಾಪುರ ಪೊಲೀಸರ ನಿಷ್ಜಾಳಜಿಗೆ ಬೇಸತ್ತ ಶೇಷಗಿರಿ ಕುಟುಂಬ, ಗೃಹ ಸಚಿವರಿಗೆ ದೂರು ನೀಡುವ ತೀರ್ಮಾನ ತೆಗೆದುಕೊಂಡದ್ದಾರೆ.

ಆಂಗ್ಲ ಭಾಷೆಯಲ್ಲಿ ಏಳು ಸಾವಿರ ವ್ಯಾಕರಣ ಬರೆದ ಗ್ರಾಮೀಣ ಪ್ರತಿಭೆ .!

ಗಣತಿಯಲ್ಲಿ ಯಾವ ಜಾತಿ ಸಮೀಕ್ಷೆ ಅನ್ನೋ ಸ್ಟಷ್ಟತೆ ಇಲ್ಲ; ಬೊಮ್ಮಾಯಿ..!

ಹಿಂಡಲಗಾ ಜೈಲು, ಪರಪ್ಪನ ಅಗ್ರಹಾರವನ್ನು ಸ್ಪೋಟಿಸುತ್ತೇನೆಂದು ಬೆದರಿಕೆ..

- Advertisement -

Latest Posts

Don't Miss