BENGALURU : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ಅಷ್ಟು ಸುಲಭ ಅಲ್ಲ. ಮುಟ್ಟಿದರೆ ಕಾಂಗ್ರೆಸ್‌ಗೆ ಸಂಕಷ್ಟ ತಪ್ಪಿದ್ದಲ್ಲ, ಸಿದ್ದರಾಮಯ್ಯ 11 ಕೆವಿ ಕರೆಂಟಲ್ಲ. ಅದು 660 ಕೆವಿ ಕರೆಂಟ್. ಅದನ್ನು ಮುಟ್ಟುವುದು ಅಷ್ಟು ಸುಲಭ ಅಲ್ಲ. ಅದನ್ನು ಮುಟ್ಟಿ ಗೆಲ್ಲುತ್ತೇವೆ. ಚಲಾವಣೆ ಆಗ್ತೀವಿ ಅಂದುಕೊಂಡರೆ ಅದು ಭ್ರಮೆ ಅಂತ ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ ನೀಡಿ ಸಿದ್ದರಾಮಯ್ಯ ಪರ ಬ್ಯಾಟ್ ಬಿಸಿದ್ದಾರೆ.
ಕಾಂಗ್ರೆಸ್‍ನಲ್ಲಿ ಕಣ್ಣಿಲ್ಲದ ಮೈತ್ರಿ ಇದೆ. ಅಂದು ಸಿಎಂ, ಡಿಸಿಎಂ ಎರಡು ಪಕ್ಷದ ಮೈತ್ರಿಯಲ್ಲಿದ್ದ ಪರಿಸ್ಥಿತಿ ಇದೆ. ಇಂದು ಕುಮಾರಸ್ವಾಮಿ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ. ಪರಮೇಶ್ವರ್ ಜಾಗದಲ್ಲಿ ಡಿಸಿಎಂ ಇದ್ದಾರೆ. ಡಿಸಿಎಂ ಅವರೇ ಸಿದ್ದರಾಮಯ್ಯಗೆ ಮಗ್ಗುಲ ಮುಳ್ಳು ಆಗಿದ್ದರೆ.
ಸಿದ್ದರಾಮಯ್ಯ ಒಂದು ವೇಳೆ ಕಾಂಗ್ರೆಸ್‌ನಿಂದ ಆಚೆ ಹೋದರೆ ಪರಿಣಾಮ ಏನಾಗುತ್ತದೆ ಅನ್ನುವುದು ಅವರ ನಾಯಕರಿಗೇ ಗೊತ್ತಿಲ್ಲ ಅನ್ಸುತ್ತೆ . ಅವರ ಜೊತೆ ನಾನು ಐದು ವರ್ಷ ಕೆಲಸ ಮಾಡಿದ್ದೇನೆ. ಅವರ ಮನಸ್ಥಿತಿ ನಂಗೆ ಗೊತ್ತಿದೆ. ಅವರ ಶಕ್ತಿಯನ್ನೂ ನಾನು ನೋಡಿದ್ದೇನೆ. ಸಿದ್ದರಾಮಯ್ಯ 2 ಗಂಟೆಗೆ ಭಾಷಣಕ್ಕೆ ಬರುತ್ತಾರೆ ಅಂದ್ರೆ 6 ಗಂಟೆಯವರೆಗೆ ಜನ ಕಾಯುತ್ತಾರೆ. ಅವರ ಒಂದು ಕರೆಗೆ 10 ಲಕ್ಷ ಜನ ಸಾಗರ ಹರಿದು ಬರುತ್ತೆ. ಅಂತಹ ಶಕ್ತಿ ಕಾಂಗ್ರೆಸ್‌ನಲ್ಲಿ ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ.
ಸಿದ್ದರಾಮಯ್ಯ ಹೊರತಾಗಿ ಕಾಂಗ್ರೆಸ್ ಶೂನ್ಯ ಇದ್ದಂತೆ. ಈಗಿನ ರಾಜಕಾರಣದಲ್ಲಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಮುಡಾ ಹಗರಣವನ್ನು ಸಿಬಿಐಗೆ ಕೊಟ್ಟರೆ ಸಾಕು, ಸಿದ್ದರಾಮಯ್ಯ ಅವರನ್ನು ಸಿಲುಕಿಸಿದರೆ ಸಾಕು, ಅಂತಾ ಕಾಯ್ತಾ ಇರುವವರು ಕಾಂಗ್ರೆಸ್‌ನಲ್ಲಿ ತುಂಬಾ ಜನ ಇದ್ದಾರೆ. ಕೇಜ್ರಿವಾಲ್ ರೀತಿ ಸಿದ್ದರಾಮಯ್ಯ ಬಂಧನಕ್ಕೆ ಒಳಗಾದರೆ, ತಾವು ಮುಖ್ಯಮಂತ್ರಿ ಆಗಬಹುದು ಎಂದು ಹಲವಾರು ಕನಸು ಕಾಣುತ್ತಿದ್ದಾರೆ ಅದು ಕನಸಾಗಿಯೇ ಇರುತ್ತೆ ನನಸಾಗಲ್ಲ.
ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿದ್ರೆ ಮಾತ್ರ 135 ಸೀಟು ಇರುತ್ತೆ , ಆಚೆ ಹೋದ್ರೆ ಸೊನ್ನೆ ಆಗುತ್ತೆ . ಸಿದ್ದರಾಮಯ್ಯ ಅವರನ್ನು ಮುಖ್ಯಮತ್ರಿ ಸ್ಥಾನದಿಂದ ಇಳಿಸಿದರೆ ಆರೇ ತಿಂಗಳಿಗೆ ಚುನಾವಣೆ ಬರುತ್ತೆ. ಹಾಗಾಗಿ ನಮ್ಮ ಪಕ್ಷದಲ್ಲಿ ಎಲ್ರೂ ಒಗ್ಗಟ್ಟಾಗಬೇಕು. ಕಾಂಗ್ರೆಸ್ (Congress) ನಲ್ಲಿ ಸಿದ್ದರಾಮಯ್ಯ ಇಳಿಸೋ ಪ್ರಯತ್ನ ಒಳಸಂಚು ನಡೀತಿದೆ ಎಂದಿದ್ದಾರೆ.