- Advertisement -
www.karnatakatv.net : ರಾಯಚೂರು : ಸಿ ಎಂ ಆರಂಭದಲ್ಲಿ ಎಡವಿದ್ದಾರೆ ಎಂದು ಧ್ರುವ ನಾರಾಯಣ ಅಸಮಧಾನ ವೇಕ್ತಪಡಿಸಿದರು . ಇಂದು ರಾಯಚೂರು ನ ಕಾಂಗ್ರೆಸ್ ಕಾರ್ಯಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಸಿಎಂ ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ಮೊದಲಿಗೆ ಎಡವಿದ್ದಾರೆ , ೧೩ ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಿದ್ದಾರೆ ಎಂದರು .ಮೈಸೂರು ಭಾಗದಲ್ಲಿ ನಾಲ್ಕು ಬಾರಿ ಶಾಸಕರು ಆಗಿದ್ದರು ಸಹಾ ಸಚಿವ ಸ್ಥಾನ ನೀಡಿಲ್ಲ . ಪಕ್ಷ ಉಳಿಯುವುದು ಬಹಳ ಕಷ್ಟ ಎಂದರು.
ಇಂದು ಮಸ್ಕಿ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸಾರ್ವಜನಿಕರು ಬೆಂಬಲ ನೀಡಿದರು . ನಮ್ಮ ಅಭ್ಯರ್ಥಿಯನ್ನು ಗೆಲಿಸಿದ್ದಾರೆ. ಮಸ್ಕಿ ವಿಧಾನ ಸಭಾ ಕ್ಷೇತ್ರದ ಜನರಿಗೆ ಧನ್ಯವಾದ ತಿಳಿಸಲು ಬಂದಿದೆ ಎಂದರು.
- Advertisement -