- Advertisement -
Dharwad News: ಧಾರವಾಡ: ಧಾರವಾಡದಲ್ಲಿ ಮಾತನಾಡಿದ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಸಿಎಂ ರಾಜೀನಾಮೆ ನೀಡುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮುಡಾದಲ್ಲಿ ಪಡೆದಿರುವ ಸೈಟ್ ಗಳ ಅಕ್ರಮವಾಗಿದೆ ಅನ್ನೋದು ರಾಜ್ಯಕ್ಕೆ ಗೊತ್ತಿರುವ ವಿಚಾರ. ಇವತ್ತು ರಾಜ್ಯಪಾಲರು ಪ್ರಾಶುಕ‌್ಯೂಶನ್ ಗೆ ಅನುಮತಿ ಕೊಟ್ಟಿದ್ದಾರೆ. ಅವರು ನೈತಿಕತೆ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ತನಿಖೆಗೆ ಸಹಕಾರ ಕೊಡಬೇಕು ಅವರು ತಪ್ಪಿತಸ್ಥ ಅಲ್ಲ ಅನ್ನೋದು ಕಾನೂನಾತ್ಮಕವಾಗಿ ಕ್ಲಿಯರ್ ಆದ ಮೆಲೆ ಅವರು ಮತ್ತೆ ಸಿಎಂ ಆಗಲಿ. ಇಗಾಗಲೆ ಬೆಂಗಳೂರಿನಿಂದ ಮೈಸೂರಿನವರಗೆ ಪಾದಯಾತ್ರೆ ಮಾಡಲಾಗಿದೆ. ಸಿ ಎಂ ಅವರು ಸ್ವತಹ ವಕೀಲರು ಆಗಿದ್ದರು. ಅವರು ಕಾನೂನಿಗೆ ತಲೆಬಾಗಬೇಕು ಎಂದು ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.
- Advertisement -