ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಇಂದು ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಕುತೂಹಲದ ಸಂಗತಿ ಎಂದರೆ, ದೇವಸ್ಥಾನದೊಳಗೆ ಎಂಟ್ರಿಕೊಡ್ತಿದ್ದಂತೆ ಸಿಎಂ ಹಣೆಗೆ ಅರ್ಚಕರು ಕುಂಕುಮ ಹಚ್ಚಿದ್ರು. ಸಿದ್ದರಾಮಯ್ಯ ಬೇಡ ಎನ್ನದೇ ಕುಂಕುಮವನ್ನು ಹಚ್ಚಿಸಿಕೊಂಡರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಇದರ ವಿರುದ್ಧ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿರುವ ಸಿಎಂ, ರಾಜ್ಯಪಾಲರ ವಿರುದ್ಧ ಕಾನೂನು ಸಮರ ನಡೆಸ್ತಿದ್ದಾರೆ. ಇದರ ನಡುವೆಯೇ ಸೋಮವಾರ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿಕೊಟ್ಟಿದ್ದ ಸಿಎಂ, ಇಂದು ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ. ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಗಣಪತಿ, ಆಂಜನೇಯ ಸೇರಿದಂತೆ ಇತರೆ ದೇವರುಗಳಿಗೆ ಪ್ರಾರ್ಥಿಸಿದ್ರು.
ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯಅವರು, ದೇವಸ್ಥಾನದಲ್ಲಿ ಆವರಣದಲ್ಲಿ ಈಡುಗಾಯಿ ಒಡೆದಿದ್ದು ವಿಶೇಷವಾಗಿತ್ತು. ಧಾರ್ಮಿಕ ನಂಬಿಕೆಯನ್ನು ಅಷ್ಟಾಗಿ ನಂಬದ ಸಿಎಂ, ಇಂದು ಹಣೆಗೆ ಕುಂಕುಮ ಹಚ್ಚಿಸಿಕೊಂಡು ಬಳಿಕ ಈಡುಗಾಯಿ ಒಡೆದಿದ್ದು ಪಕ್ಕದಲ್ಲಿದ್ದ ಸ್ನೇಹಿತರನ್ನೂ ಅಚ್ಚರಿಗೊಳ್ಳುವಂತೆ ಮಾಡಿತು.
ಮುಡಾ ಕೇಸ್ನ ಟೆನ್ಶನ್ ಇದ್ರೂ ಕೂಡ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡಿಬೆಟ್ಟದಲ್ಲಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡ್ರು.
ಒಟ್ನಲ್ಲಿ ಮಡಾ ಹಗರಣದ ಸಂಕಷ್ಟದ ಬಳಿಕ ಸಿದ್ದರಾಮಯ್ಯ ಅವರು ಸಾಲು ಸಾಲು ದೇವಸ್ಥಾನಗಳಿಗೆ ಭೇಟಿ ಕೊಡ್ತಿರೋದು, ಧಾರ್ಮಿಕ ನಂಬಿಕೆಯನ್ನು ಹೆಚ್ಚಿಸಿದಂತಿದೆ. ಅದ್ರಲ್ಲೂ 23 ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.