ಕರ್ನಾಟಕ ಟಿವಿ : ಸಿಎಂ ಯಡಿಯೂರಪ್ಪ ತವರು ಜಿಲ್ಲೆ ಮಂಡ್ಯಗೆ ಬಂಪರ್ ಕೊಡುಗೆ ನೀಡಿದ್ದಾರೆ. ಸುಮಲತಾ ಮೂರು ಬಾರಿ ಮನವಿ ಹಿನ್ನೆಲೆ ಕೆ.ಆರ್.ಎಸ್ ನಲ್ಲಿ ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಅತೀಶೀಘ್ರದಲ್ಲಿ ಮೈಷುಗರ್ ಕಾರ್ಖಾನೆ, ಪಾಂಡವಪುರ ಪಿಎಸ್ಎಸ್‌ಕೆ ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಲು ಹಣಕಾಸಿನ ನೆರವು ನೀಡಲಿದ್ದೇನೆ. ಕಾರ್ಖಾನೆ ಆರಂಭ ಮಾಡಲು ಹಣಕಾಸಿನ ನೆರವು ಎಷ್ಟಿದೆ ಅನ್ನೋದನ್ನ ಜಿಲ್ಲಾಧಿಕಾರಿಗಳು ನನಗೆ ತಿಳಿಸಿದ್ರೆ ನಾನು ತಕ್ಷಣ ಅಗತ್ಯ ಹಣವನ್ನ ಬಿಡುಗಡೆ ಮಾಡಲಿದ್ದೇನೆ ಅಂತ ಮತ್ತೊಮ್ಮೆ ಕಾರ್ಖಾನೆಗಳು ಮುಚ್ಚಿದೆ ಎಂಬ ಮಾತನ್ನು ನಾವು ಕೇಳಬಾರದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ರು.
ಯಡಿಯೂರಪ್ಪ ಭರವಸೆ ಕೊಟ್ರೆ ಅದು ಬರಿ ಭರವಸೆಯಾಗಲ್ಲ ಕಾರ್ಯರೂಪಕ್ಕೆ ಬರಲಿದೆ
ಮಾತೇ ಸಾಧನೆಯಾಗಬಾರದು, ಸಾಧನೆ ಮಾತಾಡಬೇಕು
ಕಾವೇರಿ ಮುನಿಸಿಕೊಳ್ಳದೆ ಪ್ರತಿ ಇದೇ ರೀತಿ ತುಂಬಿ ತುಳುಕಲಿ ಎಂದು ಪ್ರಾರ್ಥಿಸುತ್ತೇನೆ. ಕೆಲವು ಜಿಲ್ಲೆಗಳಲ್ಲಿ ಬರಗಾಲವಿದ್ರೆ, ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಠಿಯಾಗಿದೆ. ಎರಡು ಸವಾಲುಗಳನ್ನು ಎದುರಿಸಬೇಕಿದೆ. ಕೇಂದ್ರ ಸಹಕಾರ ನೀಡುವ ಭರವಸೆಯನ್ನ ಪ್ರಧಾನಿ ಮೋದಿ ನೀಡಿದ್ದಾರೆ. 7-8ರಂದು ಮೋದಿ ಅವ್ರು ರಾಜ್ಯಕ್ಕೆ ಬರುವ ಸಾಧ್ಯತೆ ಇದೆ ಅಂತ ಸಿಎಂ ತಿಳಿಸಿದ್ರು.