Tuesday, January 21, 2025

Latest Posts

ಪರಿಹಾರ ಸಂಗ್ರಹ ನಿಧಾನ, ಸಂಪುಟ ವಿಸ್ತರಣೆಯೇ ಪ್ರಧಾನ..!

- Advertisement -

ಬೆಂಗಳೂರು : ರಾಜ್ಯದ ನೆರೆಸಂತ್ರಸ್ತರಿಗೆ ಸಾವಿರಾರು ಜನ ಸಹಾಯ ಹಸ್ತ ಚಾಚುತ್ತಿದ್ದಾರೆ. ಸಿಎಂ ನೆರೆ ಪರಿಹಾರ ನಿಧಿಗೆ ಪ್ರತಿ ದಿನವೂ ಕೋಟ್ಯಂತರ ರೂಪಾಯಿ ಹಣ ದಾನಿಗಳಿಂದ ಹರಿದು ಬರ್ತಿದೆ. ಇಂದು ಒಂದೇ ದಿನ 7 ಕೋಟಿ 17 ಲಕ್ಷ ಹಣ ಸಂಗ್ರಹವಾಗಿದೆ.. ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಇಂದು 4 ಕೋಟಿ 73 ಲಕ್ಷದ 68 ಸಾವಿರದ 314 ರೂಪಾಯಿ ಜಮೆಯಾಗಿದ್ರೆ, ಸಿಎಂ ಪರಿಹಾರ ನಿಧಿ ಶಾಖೆಯಲ್ಲಿ 2 ಕೋಟಿ 80 ಲಕ್ಷದ 314 ರೂಪಾಯಿ ಡಿಡಿ ಸ್ವೀಕರಿಸಲಾಗಿದೆ.. ಆಗಸ್ಟ್ 9 ನೇ ತಾರೀಖಿನಿಂದ ಇದುವರೆಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು 16 ಕೋಟಿ46 ಸಾವಿರದ 668 ರೂಪಾಯಿ ಸಂಗ್ರಹವಾಗಿದೆ..

ಇನ್ನು ಸಮರ್ಪಕ ನಿಧಿ ಸಂಗ್ರಹಕ್ಕೆ ಮುಂದಾಗದ ಯಡಿಯೂರಪ್ಪ..!

ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ತಲೆಬಿಸಿಯಲ್ಲೇ ಓಡಾಡ್ತಿದ್ದಾರೆ.. ಸಚಿವ ಸಂಪುಟ ಇಲ್ಲದ ಕಾರಣ ನೆರೆ ಪರಿಹಾರ ನಿಧಿ ಸಂಗ್ರಹ ದೊಡ್ಡ ಮಟ್ಟದಲ್ಲಿ ಆಗ್ತಿಲ್ಲ.. ಸಿಎಂ ಹಾಗೂ ಸಚಿವರು ಇದ್ದಿದ್ದರೆ ಎಲ್ಲರೂ ಒಟ್ಟಿಗೆ ಪರಿಹಾರ ಸಂಗ್ರಹಿಸಲು ಮುಂದಾಗಿದ್ರೆ 500 ಕೋಟಿಗೂ ಅಧಿಕ ಹಣವನ್ನ ಸಂಗ್ರಹ ಮಾಡಬಹುದಾಗಿತ್ತು..

200 ಕೋಟಿ ನೆರವು ನೀಡಿರುವ ಸರ್ಕಾರಿ ನೌಕರರು

ಇನ್ನು ಈಗಾಗಲೇ ಸರ್ಕಾರಿ ನೌಕರರು ಒಂದು ದಿನದ ವೇತನವನ್ನ ಒಟ್ಟುಗೂಡಿಸಿ 200 ಕೋಟಿಯನ್ನ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.. ಮಾಜಿ ಸಚಿವ ಎಂಟಿಬಿ ನಾಗರಾಜ್ ಸಹ 1 ಕೋಟಿ ಹಣವನ್ನ ವೈಯುಕ್ತಿಕವಾಗಿ ನೀಡಿದ್ದಾರೆ.. ಸಿಎಂ ಸಂಪುಟ ವಿಸ್ತರಣೆ ನಂತರ ಸರಿಯಾಗಿ ನಿಧಿ ಸಂಗ್ರಹ ಮಾಡಲು ಮುಂದಾದ್ರೆ ಸಾವಿರಕೋಟಿಯಷ್ಟು ಖಾಸಗಿವಲಯದಲ್ಲೇ ನೆರವು ದೊರಕುವ ಸಾಧ್ಯತೆ ಇದೆ.

- Advertisement -

Latest Posts

Don't Miss