ಪ್ರವಾಹ ಹಾಗೂ ಭೂಕುಸಿತದಿಂದ ಹಿಮಾಚಲ ಪ್ರದೇಶ ನಲುಗಿ ಹೋಗಿದೆ. ಹಾಗಾಗಿ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ನಿಧಿಗೆ ಕರ್ನಾಟಕ ಸರ್ಕಾರ ₹5 ಕೋಟಿ ಹಣ ಬಿಡುಗಡೆ ಮಾಡಿದೆ. ಇದರಿಂದಾಗಿ ವಿರುದ್ಧ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನಿರಂತರ ಮಳೆ, ಪ್ರವಾಹ, ಮತ್ತು ಭೂಕುಸಿತದಿಂದ ಹಿಮಾಚಲ ಪ್ರದೇಶದಲ್ಲಿ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ನೆರವನ್ನು ಘೋಷಿಸಿದೆ. ಆದರೆ, ಈ ನಿರ್ಧಾರ ಸರಿನಾ ಅಂತ ರಾಜ್ಯ ಬಿಜೆಪಿ ಪ್ರಶ್ನಿಸಿದೆ. ಈ ನೆರವು ನೀಡಿರುವ ಕ್ರಮವನ್ನು ನಾಡ ವಿರೋಧಿ ಕಾಂಗ್ರೆಸ್ ಸರ್ಕಾರ ಬಿಜೆಪಿ ಟಿಕೆ ಮಾಡುತ್ತಿದೆ.
ಸಾಮಾಜಿಕ ಜಾಲತಾಣ X ನಲ್ಲಿ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ. ಸಿಎಂ ಸಿದ್ದರಾಮಯ್ಯನವರ ವಿರುದ್ಧ ನೇರ ಆಕ್ರೋಶ ಹೊರಹಾಕಿದೆ. ಇದು ನ್ಯಾಯವೇ ಸಿದ್ದರಾಮಯ್ಯನವರೇ? ಹಿಮಾಚಲ ನೆರೆಗೆ ₹5 ಕೋಟಿ,
ಕೇರಳ ಆನೆ ದುರಂತಕ್ಕೆ ₹15 ಲಕ್ಷ, ವಯನಾಡಿಗೆ ₹10 ಕೋಟಿ ನೆರವು ನೀಡಿದ್ದೀರಿ.
ದೂರದ ಹಿಮಾಚಲ ಪ್ರದೇಶಕ್ಕೆ ಇಷ್ಟು ದೊಡ್ಡ ನೆರವು ಘೋಷಿಸಿ, ರಾಜ್ಯದ ನಾಡಿನ ನೆರೆ ಸಂತ್ರಸ್ತರನ್ನು ನಡು ನೀರಲ್ಲೇ ಕೈಬಿಟ್ಟ ಸರ್ಕಾರ ನಿಮ್ಮದು.
ಮಾನವೀಯತೆ ಮೆಚ್ಚಿಸಲು ಹೈಕಮಾಂಡ್‌ಗೆ ಸುಮ್ಮನೆ ಸಿಗ್ನಲ್ ಕೊಡ್ತಾ ಇದ್ದೀರಾ? ಅಥವಾ ಕುರ್ಚಿ ಉಳಿಸಿಕೊಳ್ಳೋ ತಂತ್ರವೇ? ಅಂತ ಟೀಕಿಸಿದೆ.
ಬಿಜೆಪಿ ಇನ್ನೊಂದು ಪ್ರಮುಖ ಅಂಶವನ್ನೂ ಎತ್ತಿ ಹಿಡಿದಿದೆ. ರಾಜ್ಯದಲ್ಲಿ ಪ್ರವಾಹದಿಂದ ಭಾದೆಗೊಂಡ ಸಾವಿರಾರು ಕುಟುಂಬಗಳು ಇನ್ನೂ ನೆರವಿನ ನಿರೀಕ್ಷೆಯಲ್ಲಿವೆ. ಹೆಚ್ಚಿನ ಭಾಗಗಳಲ್ಲಿ ಪರಿಹಾರ ಕಾರ್ಯ ನಿಧಾನವಾಗಿದೆ.
ಹಾಸನ ಜಿಲ್ಲೆಯ ಇತ್ತೀಚಿನ ದುರಂತದಲ್ಲಿ ಅಮಾಯಕ ಮಕ್ಕಳು ಮೃತಪಟ್ಟ ಘಟನೆಗೆ ಸರಿಯಾದ ಪರಿಹಾರವನ್ನೇ ಸರ್ಕಾರ ನೀಡಿಲ್ಲ ಎಂದು ಗುಡುಗಿದ ಬಿಜೆಪಿ, ಅವರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿದೆ.
ವರದಿ : ಲಾವಣ್ಯ ಅನಿಗೋಳ