ಮೊದಲ ಸರಣಿಯಲ್ಲೇ ಕೋಚ್ ರಾಹುಲ್ ದ್ರಾವಿಡ್ ಸರಣಿ ಕೈವಶ

www.karnatakatv.net: ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಸರಣಿ ಕೈ ವಶ ಪಡೆಸಿಕೊಂಡ ಭಾರತದ ಯುವ ಪಡೆ ಕೋಚ್ ರಾಹುಲ್ ದ್ರಾವಿಡ್ ಗೆ  ಅಭಿನಂದನೆಗಳ ಮಹಾಪುರಾವೆ ಹರಿದುಬರುತ್ತಿದೆ ಈ ಸರಣಿಯಲ್ಲಿ ದ್ರಾವಿಡ್ ತುಂಬಾ ಪ್ರಶಂಸೆಗೆ ಕಾರಣರಗಿದ್ದಾರೆ..

ಎರಡನೇ ಪಂದ್ಯದಲ್ಲಿ ದ್ರಾವಿಡ್ ಕ್ರಿಕೆಟ್ ನ ತಮ್ಮ ಜಾಣತನವನ್ನೆಲ್ಲಾ ಧಾರೆಯೆರೆದು ಪಂದ್ಯ ಗೆಲ್ಲಿಸಿದ್ದರು. ಆಟಗಾರನಾಗಿ ತಂಡಕ್ಕೆ ಸದಾ ಆಪತ್ಬಾಂಧವನಾಗಿರುತ್ತಿದ್ದ ದ್ರಾವಿಡ್ ಒಬ್ಬ ಕೋಚ್ ಹೇಗಿರಬೇಕೆಂದು ಕಲಿಸಿಕೊಟ್ಟಿದ್ದರು

ನಿರ್ಣಾಯಕ ಹಂತದಲ್ಲಿ ಡಗ್ ಔಟ್ ಗೆ ಬಂದು ರಾಹುಲ್ ಚಹರ್ ಬಳಿ ದೀಪಕ್ ಚಹರ್ ಗೆ ಸಂದೇಶ ನೀಡಲು ಹೇಳಿಕೊಟ್ಟಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಗೆಲುವಿನಲ್ಲಿ ಶಿಖರ್ ಧವನ್ ನಾಯಕತ್ವಕ್ಕಿಂತ ದ್ರಾವಿಡ್ ಕೋಚಿಂಗ್ ಶೈಲಿಯೇ ಎಲ್ಲೆಡೆ ಸದ್ದು ಮಾಡುತ್ತಿದೆ.

About The Author