Monday, December 23, 2024

Latest Posts

ಕಾರಿನಲ್ಲಿ ಕೋಬ್ರಾ ಬಹುದೂರ ಸಂಚಾರ..!

- Advertisement -

Kerala News:

ಕೇರಳದಲ್ಲಿ ಚಾಲಕನೋರ್ವ  ತನ್ನ  ಕಾರಿನಲ್ಲಿ  ಸಂಚಾರ ಮಾಡುತ್ತಿರುವಾಗ ಬಹುದೂರದ ವರೆಗೂ ಕೋಬ್ರಾ ಜೊತೆಯಾಗಿದೆ. ಮಳೆಗಾಲದಲ್ಲಿ  ಬೆಚ್ಚಗಿರಲು ಕೋಬ್ರಾ ಈ  ಪ್ರಯಾಣ ಮಾಡೋ  ಯೋಜನೆ  ಹಾಕಿದಂತಿದೆ.

ಹೌದು ಕಾರು ಏರಿ ಬೆಚ್ಚಗೆ ಕುಳಿತ ಹಾವೊಂದು ಸುಮಾರು 200 ಕಿಲೋ ಮೀಟರ್ ದೂರ ಕಾರಲ್ಲೇ ಸಾಗಿದೆ. ಕಾರು ಏರಿದ ಹಾವು ಸುಮಾರು ಒಂದು ವಾರದ ಕಾಲ ಅದರ ಇಂಜಿನ್ ಮೇಲೆ ಮುದುಡಿ ಮಲಗಿತ್ತು. ಅಲ್ಲದೇ 200 ಕಿಲೋ ಮೀಟರ್ ದೂರ ಪ್ರಯಾಣಿಸಿತ್ತು. ಈ ಹಾವನ್ನು ಕೇರಳದ ಅರಣ್ಯ ಸಿಬ್ಬಂದಿ ಕಡೆಗೂ ರಕ್ಷಿಸಿದ್ದಾರೆ. ಕೇರಳದ ಅರ್ಪೂಕರದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ 10 ಅಡಿ ಉದ್ದದ ಈ ಹಾವನ್ನು ವ್ಯಕ್ತಿಯೊಬ್ಬರ ಕಾಂಪೌಂಡ್‌ನಿಂದ ರಕ್ಷಣೆ ಮಾಡಿ ನಂತರ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಆಗಸ್ಟ್ 2 ರಂದು  ಅರ್ಪೂಕರ ನಿವಾಸಿ ಸುಜಿತ್ ಎಂಬುವವರು ಮಲಪ್ಪುರಂಗೆ ಹೋಗಿದ್ದಾಗ ಅವರ ಕಾರಿಗೆ ಈ ವಿಷಕಾರಿ ಸರೀಸೃಪವು ಹತ್ತಿಕೊಂಡಿದೆ ಎಂದು ನಂಬಲಾಗಿದೆ. ಸುಜಿತ್ ತಮ್ಮ ಕಾರನ್ನು ವಜಿಕಡವು ಎಂಬಲ್ಲಿ ಚೆಕ್‌ಪೋಸ್ಟ್ ಸಮೀಪ ನಿಲ್ಲಿಸಿದ್ದರು. ಅಲ್ಲಿ ಕೆಲವು ಸ್ಥಳೀಯರು ಹಾವೊಂದು ಕಾರಿಗೆ ಏರಿರುವುದನ್ನು ನೋಡಿರುವುದಾಗಿ ಸುಜಿತ್ ಅವರಿಗೆ ಮಾಹಿತಿ ನೀಡಿದರು. ಆದರೆ ಆಹ್ವಾನಿಸದೇ ಆಗಮಿಸಿದ ಈ ಅತಿಥಿ ಆ ಸಮಯದಲ್ಲಿ ಅವರ ಕಣ್ಣಿಗೆ ಕಾಣಿಸಿರಲಿಲ್ಲ.

ಇದಾದ ನಡುವೆ ಭಾನುವಾರದಂದು ಅವರಿಗೆ ಕಾರಿನಲ್ಲಿ ನೇತಾಡುತ್ತಿದ್ದ ಹಾವಿನ ಚರ್ಮ ಕಾಣಿಸಿದ್ದು, ಇದರಿಂದ ಹಾವು ಇಂಜಿನ್‌ ಬಿಸಿಗೆ ಸಿಲುಕಿ ಕರಗಿ ಹೋಗಿರಬೇಕು ಎಂದು ಅವರು ಭಾವಿಸಿದ್ದು, ಇದು ಅವರ ಕುಟುಂಬ ಸದಸ್ಯರಲ್ಲಿ ಆತಂಕದ ಭಾವನೆಯನ್ನು ಮೂಡಿಸಿತ್ತು. ಆದಾಗ್ಯೂ ಕಾರನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು ಇವರಿಗೆ ಹಾವು ಮಾತ್ರ ಪತ್ತೆಯಾಗಿಲ್ಲ. ಆದರೆ ಕೆಲ ಸಮಯದ ಬಳಿಕ ಈ ಹಾವು ಮನೆಯ ಕಾಂಪೌಂಡ್‌ ಒಳಗೆಯೇ 500 ಮೀಟರ್ ದೂರದಲ್ಲಿ ಕಾಣಿಸಿಕೊಂಡಿತ್ತು.

ತನ್ನ ಕಾರಿನಲ್ಲಿ ಹಾವು ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ  ಸುಜಿತ್ ಅವರ ನೆರೆಹೊರೆಯವರು  ವನ್ಯಜೀವಿ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಸಾಮನ್ಯವಾಗಿ ಆ ಪ್ರದೇಶದಲ್ಲಿ ನಾಗರಹಾವು ಕಾಣಿಸುವುದು ಅಪರೂಪವಾಗಿದ್ದರಿಂದ ಇದು ಜನರಲ್ಲಿ ಕುತೂಹಲ ಮೂಡಿಸಿತ್ತು. ಬಹುಶಃ ಈ ಹಾವು ವಾಹನದ ಕೆಳಭಾಗದಲ್ಲಿ ಸುರಕ್ಷಿತವಾಗಿ ಆಗಮಿಸಿರಬೇಕು ಎಂದು ಅರಣ್ಯ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಂತರ ಈ ಹಾವನ್ನು ಜೋಪಾನವಾಗಿ ಸೆರೆ ಹಿಡಿದ ಅರಣ್ಯ ಸಿಬ್ಬಂದಿ ಬಳಿಕ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

ಬಸವರಾಜ್ ದಂಪತಿಗೆ ಜಾಮೀನು ಮಂಜೂರು ಮಾಡಿದ ಕೋರ್ಟ್

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೇ ಅವೈಜ್ಞಾನಿಕ ಕಾಮಗಾರಿಯಿಂದಲೇ ರಾಮನಗರ ಜಿಲ್ಲೆಯಲ್ಲಿ ಪ್ರವಾಹ – HDK

ಬೆಂಗಳೂರು: ಕ್ಷೇಮವನ ಉದ್ಘಾಟಿಸಿದ ಯೋಗಿ ಆದಿತ್ಯನಾಥ್

- Advertisement -

Latest Posts

Don't Miss