Dharwad News: ಧಾರವಾಡ: ಧಾರವಾಡದಲ್ಲಿ ಇತ್ತೀಚಿಗೆ ಮೀಟರ್ ಬಡ್ಡಿ ವ್ಯವಹಾರ ಸಾಲ ತೀರಿಸಲಾಗದೆ . ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮನೆಗೆ ಭೇಟಿ ನೀಡಿ. ಹುಬ್ಬಳ್ಳಿ ಧಾರವಾಡ ಕಮಿಷನರ್ ಶಶಿಕುಮಾರ್ ಸಂತಾಪ ಸೂಚಿಸಿದರು .
ಇದೇ ವೇಳೆ ಎಲ್ಲರಿಗೆ ಎಚ್ಚರಿಕೆ ನೀಡಿ, ಯಾವುದೇ ಕಾರಣಕ್ಕೂ ಬಡ್ಡಿ ವ್ಯವಹಾರ ಮಾಡಬೇಡಿ. ಎಲ್ಲಾದರೂ ಬಡ್ಡಿ ವ್ಯವಹಾರ ಮಾಡಿದ್ದರೆ ನಿಮಗೆ ಸಾಲ ತೀರಿಸಲು ಪಡಿಸುತ್ತಿದ್ದರೆ. ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಹಾಕಿ ಕೊಡಿ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿ. ಸಣ್ಣ ಮಕ್ಕಳಿಗೆ ಯಾವುದೇ ಕೆಲಸಕ್ಕೆ ಕಳಿಸಬೇಡಿ ಎಂದು ಶಶಿಕುಮಾರ್ ಹೇಳಿದ್ದಾರೆ.
ಇಲ್ಲಿಂದ ಹೆಚ್ಚಿನ ಯುವಕರು ಬಡ್ಡಿ ವ್ಯವಹಾರ ಮಾಡುತ್ತಿರುವುದು ವಿಷಯ ಗೊತ್ತಾಗಿದೆ . ಯಾರಾದರೂ ಹಾಗೆ ಮಾಡ್ತಾ ಇದ್ರೆ ಕೂಡಲೇ ಬಂದ್ ಮಾಡಬೇಕು. ಯಾವುದೇ ಅನೈತಿಕ ಚಟುವಟಿಕೆ ತೊಡಗಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಇದೇ ವೇಳೆ DCP LAW ನಂದಗಾವಿ ಸರ್. ACP ಪ್ರಶಾಂತ್ ಸಿದ್ದನಗೌಡ.cpi ಕಾಡದೇವರ. ಸಿಪಿಐ .ದಯಾನಂದ ಶೇಗುಣಸ .cpi ಸಂಗಮೇಶ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.