Hubli News: ಹುಬ್ಬಳ್ಳಿ: ಸಾಮಾನ್ಯವಾಗಿ ಪೊಲೀಸರನ್ನ ಕಂಡಾಗ ಜನರಲ್ಲಿ ಭಯ. ನಡುಕ ಯಾಕಂದ್ರೆ ಆ ಖಾಕಿ ಗತ್ತು. ಆದ್ರೆ ಆ ಖಾಕಿಯಲ್ಲೂ ಒಬ್ಬ ಮಾನವೀಯತೆ ಮನುಷ್ಯತ್ವ ಅಡಿಗಿರುತ್ತೆ ಅನ್ನೋದಕ್ಕೆ ಹುಬ್ಬಳ್ಳಿಯ ಗಣೇಶ್ ಪೇಟ್ ಅವರೇ ಸಾಕ್ಷಿ ನೋಡಿ.
ಅವರೇ ನಮ್ಮ ನೂತನ ಕಮಿಷನರ್ ಶಶಿ ಕುಮಾರ. ಹೀಗೆ ಅವರನ್ನು ತೋರಿಸೋಕು ಕೂಡಾ ಒಂದು ಕಾರಣವಿದ. ಅದೇನಪ್ಪ ಅಂದ್ರೆ, ನಿನ್ನೆ ತಾನೇ ಗಾಂಜಾ ಮಾರಾಟ ಮಾಡ್ತಿದ್ದ ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಡಲು ರಾತ್ರಿವೇಳೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಂಡ್ ಹೋಗಿದ್ರು.
ಆ ವೇಳೆ ಗಣೇಶಪೇಟ್ ಬಳಿಯಲ್ಲಿನ ಪೊಲೀಸ್ OPಗೆ ತೆರಳಿ ಸ್ವಚ್ಛತೆ ಬಗ್ಗೆ ಸೂಚನೆ ಕೊಡ್ತಾಯಿದ್ರು.. ಆಗ ಅಲ್ಲೊಬ್ಬ ಬಿಕ್ಷುಕ ಮಳೆಯಲ್ಲಿ ನೆನೆದು ನಡಗುತ್ತ ಕೂತಿದ್ದ. ಇದು ಕಮಿಷನರ್ ಶಶಿ ಕುಮಾರ ಅವರ ಕಣ್ಣಿಗೆ ಬಿದ್ದಿದ್ದೆ. ಕೂಡಲೇ ತಮ್ಮ ಸಿಬ್ಬಂದಿಗೆ ಸೂಚಿಸಿ, ಆತನಿಗೆ ಕಟಿಂಗ್ ಮಾಡಿ ಹೊಸ ಬಟ್ಟೆಯನ್ನು ಕೊಡಿಸಿ ಆರೋಗ್ಯ ವಿಚಾರಿಸಿ ಎಂದು ಸೂಚನೆ ಕೊಟ್ಟಿದ್ದಾರೆ.
ಕಮಿಷನರ್ ಅವರ ಆದೇಶದ ಮೇರೆಗೆ ಇಸ್ಪೆಕ್ಟರ್’ಗಳಾದ ಮರಳುಸಿದ್ದಪ್ಪ, ತಹಶೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಭಿಕ್ಷುಕನಿಗೆ ಎಲ್ಲ ರೀತಿ ಆರೈಕೆ ಮಾಡಿ,ಹೊಸ ಬಟ್ಟೆ, ಚಪ್ಪಲಿ, ಕೊಡಿಸಿ ಹೊಟ್ಟೆ ತುಂಬಾ ಊಟವನ್ನ ಮಾಡಿಸಿದ್ದಾರೆ. ಅಲ್ಲದೇ ಆ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ಮನೆಗೆ ಮರಳಿಸುವ ಕಾರ್ಯವನ್ನು ಸಿಬ್ಬಂದಿ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಒಟ್ಟಿನಲ್ಲಿ ಖಾಕಿಯಲ್ಲಿ ಮಾನವೀಯತೆ, ಇನ್ನು ಜೀವಂತವಾಗಿದೆ ಅನ್ನೋದಕ್ಕೆ ಕಮಿಷನರ್ ಶಶಿ ಕುಮಾರ ಅವರಂತ ಅಧಿಕಾರಿಗಳೇ ಸಾಕ್ಷಿ.