Hubli News: ಹುಬ್ಬಳ್ಳಿ: ಹುಬ್ಬಳ್ಳಿ ಹೊಸೂರು ಬಳಿಯ ಪರಿಜಾತ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ, ಸಿಸಿಬಿರೇಡ್ ಬಗ್ಗೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಮಾಹಿತಿ ನೀಡಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಲಾಡ್ಜ್ ಮೇಲೆ ರೇಡ್ ಮಾಡಿದ್ದಾರೆ. ಮೈಸೂರು ಮೂಲದ ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ಪಾರಿಜಾತ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ಮಾಹಿತಿ ಹಿನ್ನಲೆ ಸಿಸಿಬಿಯವರು ದಾಳಿ ಮಾಡಿದ್ದಾರೆ. ದಾಳಿಯ ವೇಳೆ 18 ವರ್ಷ ಮೇಲ್ಪಟ್ಟ ಐದು ಜನ ಹೆಣ್ಮಕ್ಕಳ ವಶಕ್ಕೆ ಪಡೆಯಲಾಗಿದೆ. ಇಬ್ಬರು ಕಲ್ಕತ್ತಾ, ಓರ್ವ ಮಹಿಳೆ ಬೆಂಗಳೂರು ಹಾಗೂ ಇನ್ನಿಬ್ಬರು ಮಹಿಳೆಯರು ದಾವಣಗೆರೆ ಮೂಲದವರಾಗಿದ್ದಾರೆ.
ಓರ್ವ ಪುರುಷ ಕ್ಲೈಂಟ್ ಸಿಕ್ಕಿದ್ದಾರೆ. ಈಗ ಹೊಟೇಲ್ ಓನರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತದೆ. ಲಾಡ್ಜನಲ್ಲಿ ವೇಶ್ಯಾವಾಟಿಕೆ ನಡೆಸಲು ವ್ಯವಸ್ಥಿತವಾಗಿ ಬಾಥರೂಮನಲ್ಲಿ ಕಿಡಕಿ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ವೇಶ್ಯಾವಾಟಿಕೆಯ ಹಿಂದಿರುವವರನ್ನು ಆದಷ್ಟು ಬೇಗ ಬಂಧನ ಮಾಡಲಾಗುತ್ತದೆ ಎಂದು ಶಶಿಕುಮಾರ್ ಹೇಳಿದ್ದಾರೆ.