Wednesday, January 22, 2025

Latest Posts

ಡ್ರಗ್ಸ್ ಮುಕ್ತ ನಗರಕ್ಕೆ ಕಮೀಷನರೇಟ್ ನಿರ್ಧಾರ: ಪಾಲಕರ ಸಮ್ಮುಖದಲ್ಲಿಯೇ ಸ್ಪೆಷಲ್‌ ಡ್ರೈವ್

- Advertisement -

Hubli News: ಹುಬ್ಬಳ್ಳಿ: ಗಾಂಜಾ ಘಾಟು ಹಾಗೂ ಮಾದಕ ವಸ್ತುಗಳ ಹಾವಳಿ ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರನ್ನು ನಿದ್ದೆಗೆಡಿಸಿದ್ದು, ಮಾತ್ರವಲ್ಲದೆ ಉಸಿರುಗಟ್ಟಿಸುವಂತೆ ಮಾಡಿತ್ತು. ಇಂತಹ ಅವ್ಯವಸ್ಥೆಯನ್ನು ಚಾಲೆಂಜ್ ಆಗಿ ತೆಗೆದುಕೊಂಡ ಕಮೀಷನರೇಟ್ ಈಗ ಸ್ಪೆಷಲ್‌ ಡ್ರೈವ್ ಮೂಲಕ ಅವಳಿನಗರವನ್ನು ಗಾಂಜಾ ಮುಕ್ತ ನಗರವನ್ನಾಗಿ ಮಾಡಲು ಮುಂದಾಗಿದೆ.

ಹೌದು..ಹುಬ್ಬಳ್ಳಿ ಧಾರವಾಡ ಅವಳಿನಗರದ ಒಟ್ಟು ಹದಿನಾರು ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಬಳಕೆದಾರರ ಸ್ಪೆಷಲ್‌ ಡ್ರೈವ್ ನಡೆಸಿರುವ ಕಮೀಷನರೇಟ್ ಒಟ್ಟು 467 ಜನರನ್ನು ತಪಾಸಣೆಗೆ ಒಳಪಡಿಸಿದ್ದು, 251 ಕೇಸ್ ಪಾಸಿಟಿವ್ ಬಂದಿವೆ. 216 ನೆಗೆಟಿವ್ ಬಂದಿದ್ದು, 45 ಎಫ್ ಐ ಅರ್ ದಾಖಲು ಮಾಡಲಾಗಿದೆ. ಈ ನಿಟ್ಟಿನಲ್ಲಿ ಪಾಸಿಟಿವ್ ಬಂದಿರುವವರನ್ನು 251 ಹಾಗೂ ಕಳೆದ ವಾರದ 259 ಪಾಸಿಟಿವ್ ಬಂದವರನ್ನು ಆರ್.ಎನ್.ಶೆಟ್ಟಿ ಕಲ್ಯಾಣಮಂಟಪದಲ್ಲಿ ವೈದ್ಯಕೀಯ ಕೌನ್ಸಿಲಿಂಗ್ ಮಾಡುವ ಮೂಲಕ ಜಾಗೃತಿ ಮೂಡಿಸುವ ಮತ್ತು ಅವಳಿನಗರವನ್ನು ಮಾದಕ ವಸ್ತುಗಳ ಮುಕ್ತವಾಗಿಸಲು ಮುಂದಾಗಿದ್ದಾರೆ.

ಇನ್ನೂ ಪಾಸಿಟಿವ್ ಬಂದಿರುವ ಪಾಲಕರನ್ನು ಕೂಡ ಕರೆಸಿದ್ದು, ಪಾಲಕರ ಸಮ್ಮುಖದಲ್ಲಿಯೇ ಎಚ್ಚರಿಕೆ ನೀಡಲಾಯಿತು. ಅಲ್ಲದೇ ನೂರಾರು ಜನ ಪಾಲಕರು ಆಗಮಿಸಿದ್ದು, ಮಕ್ಕಳ ವ್ಯವಸ್ಥೆ ನೋಡಿ ಕಣ್ಣೀರು ಹಾಕಿದರು.

- Advertisement -

Latest Posts

Don't Miss