ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507
ಶಿವಮೊಗ್ಗದಲ್ಲಿ ನಡೆದಿದ್ದ ರೈತ ಮಹಾಪಂಚಾಯತ್‌ಗಳಲ್ಲಿ ರಾಕೇಶ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಭಾಷಣ ಮಾಡುವ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಭರದಲ್ಲಿ, ರೈತರು ದೆಹಲಿಗೆ ಬರುವುದು ಬೇಡ. ಬೆಂಗಳೂರನ್ನೇ ದೆಹಲಿಯನ್ನಾಗಿಸಿ, ನಾಲ್ಕು ಬದಿಯಿಂದ ದಿಗ್ಭಂಧನ ಹಾಕಿ, ಟ್ರ್ಯಾಕ್ಟರ್‌ನ್ನೇ ಅಸ್ತ್ರವನ್ನಾಗಿಸಿಕೊಳ್ಳಿ ಎಂದು ಹೇಳಿದ್ದರು. ಈ ಕಾರಣಕ್ಕೆ ಶಿವಮೊಗ್ಗ ಮತ್ತು ಹಾವೇರಿಯಲ್ಲಿ ರಾಕೇಶ್ ವಿರುದ್ಧ ದೂರು ದಾಖಲಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗ, ಹಾವೇರಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಅವರ ಮೇಲಿದೆ. ರೈತರ ಧ್ವನಿ ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳಿವು. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ನಿಜಕ್ಕೂ ಕೇಸು ದಾಖಲಿಸುವುದೇ ಆದರೆ ಬಿಜೆಪಿಯ ಎಷ್ಟು ನಾಯಕರ ಮೇಲೆ ಎಷ್ಟೆಷ್ಟು ಪ್ರಕರಣ ದಾಖಲಾಗಬೇಕಿತ್ತು?
“ಹೋರಾಟ ಮಾಡಲು ರೈತರು ದೆಹಲಿಗೇ ಬರಬೇಕಿಲ್ಲ, ದೆಹಲಿಯಂತೆ ಇಲ್ಲೇ ಹೋರಾಟ ಮಾಡಿ,” ಎಂಬ ಟಿಕಾಯತ್ ಹೇಳಿಕೆಯಲ್ಲಿ ಪ್ರಚೋದನೆ ಏನೂ ಇಲ್ಲ. ಇದರಲ್ಲಿ ತಪ್ಪು ಕಂಡವರದ್ದು ಗ್ರಹಿಕೆ ದೋಷವಷ್ಟೇ. ಹೋರಾಟ, ಹೋರಾಟಕ್ಕೆ ಕರೆ ನೀಡುವುದು ಸಂವಿಧಾನ ಬದ್ಧ. ಅವರು ಕೊಚ್ಚಿ ಎನ್ನಲಿಲ್ಲ, ಕೊಲ್ಲಿರಿ ಎನ್ನಲಿಲ್ಲ. ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507