Political News: ಬಹುಸಂಖ್ಯಾತ ಹಿಂದೂ ದೇಶದಲ್ಲಿ ಅಲ್ಪ ಸಂಖ್ಯಾತರ ಅಣತಿಯಂತೆ ನಮ್ಮ ಗಣೇಶ ವಿಸರ್ಜನಾ ಕಾರ್ಯಕ್ರಮ ಮಾಡುವ ಹಂತಕ್ಕೆ ನಾವು ತಲುಪಿದ್ದೇವೆ. ಪೊಲೀಸರು ಯಾರ ನಿರ್ದೇಶನದ ಮೇಲೆ ಈ ರೀತಿ ಮಾಡುತಿದ್ದರೆ ಎಂದು ವಿವರಿಸಿ ಹೇಳಬೇಕಾಗಿಲ್ಲ. ಹಿಂದೂಗಳ ಧಾರ್ಮಿಕ ಹಕ್ಕನ್ನು ಸಂಪೂರ್ಣವಾಗಿ ಈ ಕಾಂಗ್ರೆಸ್ ಸರ್ಕಾರ ಕಸಿದಿದೆ. ಗಣಪತಿ ಮೆರವಣಿಗೆ ಮಸೀದಿ ಇರುವ ರಸ್ತೆಯಲ್ಲಿ, ಬಡಾವಣೆಯಲ್ಲಿ ಹೋಗಬಾರದು ಎಂದು ಯಾವ ನಿಯಮಾವಳಿ ಇದೆ ? ಎಂದು ಬಿಜೆಪಿ ಉಚ್ಛಾಟ್ಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಅನ್ಯ ಕೋಮಿನ ಹಬ್ಬಗಳಂದು ಪ್ರಾಣಿಗಳನ್ನು ಬಲಿ ಕೊಟ್ಟು ರಸ್ತೆಯಲ್ಲ ರಕ್ತ ಹರಡುವಾಗ, ಗೋಮಾತೆಗೆ ಹಿಂಸೆ ಕೊಟ್ಟಾಗ ಪೊಲೀಸರು ತಪ್ಪಿತಸ್ಥರಿಗೆ ಏನು ಮಾಡಿದರು ? ಈ ರೀತಿಯಾದ ಹಿಂದೂ ವಿರೋಧಿ ನೀತಿಗೆ ಧಿಕ್ಕಾರ. ನಮ್ಮ ಹಬ್ಬಗಳಿಗೆ ಈ ರೀತಿಯಾದ ನಿರ್ಬಂಧಗಳು, ಅಡಚಣೆಗಳು ಮಾಡುವುದು ಸರ್ಕಾರದ ತುಷ್ಟೀಕರಣ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಯತ್ನಾಳ್ ಅಭಿಪ್ರಾಯ ಪಟ್ಟಿದ್ದಾರೆ.
ಸ್ವಾಭಿಮಾನಿ ಹಿಂದೂಗಳು ಸರ್ಕಾರದ ಈ ನಡೆಯನ್ನು ಸೂಕ್ಶ್ಮವಾಗಿ ಗಮನಿಸುತ್ತಿದ್ದಾರೆ. ಬಾಗಲಕೋಟೆ, ಕಲ್ಬುರ್ಗಿ, ಮದ್ದೂರು ಈ ಮಧ್ಯ ಕರ್ನಾಟಕದಲ್ಲೂ ಕಾಂಗ್ರೆಸ್ ನಮ್ಮ ಹಬ್ಬಗಳನ್ನು ಸ್ವಚ್ಛಂದವಾಗಿ ಆಚರಿಸಲು ಬಿಡದೆ ಇರುವುದರ ಪರಿಣಾಮವನ್ನು ಸ್ವಾಭಿಮಾನಿ ಹಿಂದೂಗಳು ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.