ರಾಜಕೀಯ ಸುದ್ದಿ: ರಾಜ್ಯ ರಾಜಕಾರಣದಲ್ಲಿ ಯೋಜನೆ ಮತ್ತು ಸಾಂಖಿಕ ಸಚಿವ ಡಿ.ಸುಧಾಕರ್ ಮೇಲೆ ದಲಿತರ ದೌರ್ಜನ್ಯ ಮಾಡಿರುವ ಬಗ್ಗೆ ಆರೋಪ ಕೇಳಿಬರುತ್ತಿದ್ದು ಇದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ.
ದಲಿತರ ಮೇಲಿನ ದೌರ್ಜನ್ಯ ಕುರಿತು ಆರೋಪ ಯಾಕೆ ಮಾಡಿದ್ದಾರೆ ಅನ್ನೋ ಮಾಹಿತಿ ಕಾನೂನು ಅಧಿಕಾರಿಗಳಗೆ ಇರುತ್ತದೆ ಅದಕ್ಕೆಲ್ಲ ಕಾನೂನು ಇದೆ, ನೋಡಿಕೊಳ್ಳುತ್ತೆ ಆದರೆ ಕಾನೂನು ಎದುರಿಸುವುದು ಅವರ ಕರ್ತವ್ಯ, ಎಲ್ಲಾದಕ್ಕೂ ರಾಜಿನಾಮೆ ಒಂದೇ ಪರಿಹಾರ ಅಲ್ಲ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು ಆದರೆ ಯಾರು ರಾಜಿನಾಮೆ ಕೊಡಲಿಲ್ಲ ಗಂಭೀರ ಇದ್ರೆ ಕೊಡಬಹುದು ಎಂದು ಮಾತನ್ನು ತಳ್ಳಿಹಾಕಿದರು.
ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕ ಸ್ಥಾನ ಗೆಲ್ಲಬೇಕು ಎಂದು ಪಣ ತೊಟ್ಟಿರುವ ಬಗ್ಗೆ ಸಚಿವ ಜಾರಕಿಹೊಳಿ ಅವರು ಯಾರೇ ಸೇರಿದರು ನಾವು ಸಮರ್ಥವಾಗಿ ಹೆಚ್ಚು ಸೀಟು ಗೆಲ್ಬೇಕು ಗೆಲ್ತಿವಿ ಎಂದು ಹೇಳಿದರು.
ಇನ್ನು ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ನೀಡಿರುವ ಅವಹೇಳನಕಾರಿ ಹೇಳಿಕೆ ಕುರಿತು ಮಾತನಾಡಿದ ಜಾರಕಿಹೊಳಿ ಸನಾತನ ಧರ್ಮದ ವಿಚಾರ, ಸ್ಫೋಟ ಆಗಿದ್ದು ತಮಿಳುನಾಡಲ್ಲಿ ಕರ್ನಾಟಕಕ್ಕೇನು ಸಂಬಂಧ ಎಂದರು ಪ್ರಶ್ನಿಸಿದರು.
Satish jarakiholi: ಬಿ.ಕೆ ಹರಿಪ್ರಸಾದ್ ಮಾತಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ..!
Hospital: ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಪರದಾಟ..!
DKS: ಸುಧಾಕರ್ ವಿರುದ್ಧ ಸುಳ್ಳು ಕೇಸ್ ದಾಖಲು, ರಾಜೀನಾಮೆ ಅಗತ್ಯವಿಲ್ಲ:ಡಿಕೆಶಿ