Sunday, December 22, 2024

Latest Posts

ಮುಖ್ಯಮಂತ್ರಿಗಳನ್ನು ಬಹಿರಂಗ ಸಭೆಗೆ ಆಹ್ವಾನಿಸಿದ ಡಿಕೆಶಿ

- Advertisement -

political news

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತಿದ್ದಂತೆ ಹಲವಾರು ಪಕ್ಷಗಳು ಪ್ರಣಾಳಿಕೆಯಲ್ಲಿ ಹೊಚ್ಚ ಹೊಸ ಯೋಜನೆಗಳನ್ನು ಬಿಡುಗೆಡಗೊಳಿಸುತ್ತಿದೆ. ಅದೇ ರೀತಿ ಕಾಂಗ್ರೆಸ್ ಗ್ಯಾರೆಂಟಿ ಎನ್ನುವ ಹೆಸರಿನಲ್ಲಿ  ಪ್ರತಿಮನೆಗೆ ಪ್ರತಿ ತಿಂಗಳು 200ಯುನಿಟ್ ಉಚಿತ ವಿದ್ಯುತ್ ಯೋಜನೆ , ಮನೆಯ ಬಿಪಿಎಲ್ ಪಡಿತರ ಹೊಂದಿರುವ ಮನೆಯ ಯಜಮಾನಿಗೆ 2000 ರೂ , ಹಾಗೂ ಬಿಪಿಎಲ್ ಕಾರ್ಡುದಾರರಿಗೆ 10 ಕೆಜಿ ಅಕ್ಕಿ ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷ ತಿರುಗೇಟು ಎಂಬಂತೆ ಮುಖ್ಯುಮಂತ್ರಿ ಬೊಮ್ಮಾಯಿಯವರು ಪ್ರತಿಮನೆಗೆ ತಿಂಗಳಿಗೆ 60 ರಿಂದ 70 ಯುನೀಟ್ ವಿದ್ಯುತ್ ಮಾತ್ರ ಸಾಕು 200 ಯುನಿಟ್ ಘೋಷಣೆ ಮಾಡಿರುವುದು ಬೋಗಸ್ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಮತ್ತುಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಗಳನ್ನು ಬಹಿರಂಗ ಚರ್ಚಗೆ ಆಹ್ವಾನ ಮಾಡಿದ್ದಾರೆ.   ಗೃಹ ಬಳಕೆ ವಿದ್ಯುತ್​​​​ 60-70 ಯುನಿಟ್​​ಗಿಂತ್​ ಹೆಚ್ಚಾಗಿ ಬಳಕೆಯೇ ಆಗುವುದಿಲ್ಲ. ಹೀಗಿದ್ದರೂ 200 ಯುನಿಟ್​ವರೆಗೆ ಉಚಿತ ಎಂದು ಹೇಳುವುದು ಜನರಿಗೆ ಏಮಾರಿಸಿದಂತೆ ಅಲ್ಲವೇ? ಎಂದು ಪ್ರಶ್ನಿಸಿದ್ದರು”. ಈ ಸಂಬಂಧ ಇಂದು (ಮಾ.7) ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ನಾವು ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡಲಿಲ್ಲ ಅಂದರೆ, ರಾಜ್ಯದ ಜನರ ಮುಂದೆ ಹೋಗಿ ರಾಜಕಾರಣ ಮಾಡುವುದಿಲ್ಲ. ಜನರಿಗೆ ನಾವು ಶಪಥ ಮಾಡಿದ್ದೇವೆ. ಸಿಎಂ ಅವರೇ, ನಾನು ಬಹಿರಂಗ ವೇದಿಕೆಯ ಚರ್ಚೆಗೆ ತಯಾರಿದ್ದೇನೆ, ನೀವು ಯಾವುದೇ ವೇದಿಕೆಗಾದರೂ ಬನ್ನಿ, ವಿದ್ಯುತ್ ಬಗ್ಗೆ ಚರ್ಚೆ ಮಾಡೋಣ, ನಾನು ತಯಾರಿದ್ದೇನೆ ಎಂದು ಆಹ್ವಾನ ನೀಡಿದ್ದಾರೆ.

ಮಡಾಳರನ್ನು ಬಂದಿಸದಿದ್ದಕ್ಕೆ ಕೈ ನಾಯಕರು ಗರಂ

ಮಡಾಳರನ್ನು ಬಂದಿಸದಿದ್ದಕ್ಕೆ ಕೈ ನಾಯಕರು ಗರಂ

ಕಾಂಗ್ರೆಸ್ ಸೇರಲಿದ್ದಾರೆ ಬಿಜೆಪಿಯ ಮತ್ತೊಬ್ಬ ನಾಯಕ

ಸಚಿವ ಸುನೀಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ಆರೋಪ !

- Advertisement -

Latest Posts

Don't Miss