Saturday, July 27, 2024

Latest Posts

ನಾನು ಚುನಾವಣೆಗೆ ನಿಂತಾಗ ಕಾಂಗ್ರೆಸ್‌ನವರು ಮೋಸ ಮಾಡಿದ್ದರು: ವೇದಿಕೆಯಲ್ಲೇ ಭಾವುಕರಾದ ನಿಖಿಲ್

- Advertisement -

Ramanagara News: ರಾಮನಗರ: ರಾಮನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, 1985 ರಲ್ಲಿ ಸಿನಿಮಾ ಹಂಚಿಕೆಯಲ್ಲಿ ಬಂದ ದುಡಿಮೆಯಲ್ಲಿ ತಂದೆ ಕೇತಗಾನಹಳ್ಳಿಯಲ್ಲಿ ಜಮೀನು‌ ಖರೀದಿ ಮಾಡಿದರು. ನಮ್ಮ ತಂದೆ ಎಂದೂ ದುಡ್ಡು ಮಾಡಬೇಕು ಅಂತಾ ಹೋಗಲಿಲ್ಲ. ಅವರು ಸಂಪಾದಿಸಿದ ಆಸ್ತಿ ರಾಮನಗರ ಜಿಲ್ಲೆಯ ಜನರ ಪ್ರೀತಿ ಎಂದು ನಿಖಿಲ್ ಹೇಳಿದ್ದಾರೆ.

ಮಂಡ್ಯದಲ್ಲಿ ಸ್ಥಳೀಯ ನಾಯಕತ್ವಕ್ಕೆ ಅವಕಾಶ ಮಾಡಿಕೊಡಲು ಪಕ್ಷ ತೀರ್ಮಾನ ಮಾಡಿತ್ತು. ಆದರೆ 15 ದಿನಗಳ ಹಿಂದೆ ನಡೆದ ಬೆಳವಣಿಗೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಯಾವ ಕೂಗು ಕೇಳಿಬಂತು ಅಂತಾ ನೀವೆಲ್ಲಾ ಗಮನಿಸಿದ್ದೀರಿ. ರಾಮನಗರದಲ್ಲಿ, ರಾಜ್ಯದಲ್ಲಿ ತಂದೆಯವರ, ದೇವೇಗೌಡರ ಹೆಸರಿನಲ್ಲಿ ಬಹಳಷ್ಟು ಜನ ಶಾಸಕರಾಗಿ, ನಾಯಕರಾಗಿ ಹೊರ ಹೊಮ್ಮಿದ್ದಾರೆ. ನಾನು ರಾಮನಗರದಲ್ಲಿ ಸ್ಪರ್ಧೆ ಮಾಡಿದ್ದೆ. ಆದರೆ ಕ್ಷೇತ್ರದ ಜನ ನನ್ನ ಕೈ ಬಿಟ್ಟಿರಲಿಲ್ಲ. ಆದರೆ ಕಾಂಗ್ರೆಸ್ ಮುಖಂಡರು ಮಧ್ಯರಾತ್ರಿ 2 ಗಂಟೆಗೆ ಐದು ಸಾವಿರ ರೂಪಾಯಿ ಟೋಕನ್ ಹಂಚಿ ನನಗೆ ಮೋಸ ಮಾಡಿದರು. ಎರಡು ಬಾರಿ ಸೋಲಾಗಿದೆ, ಒಪ್ಪಿಕೊಳ್ಳುತ್ತೇನೆ, ನೋವಿದೆ. ನನ್ನ ನಡವಳಿಕೆಯಲ್ಲೇನಾದರೂ ಸಮಸ್ಯೆ ಇದ್ಯಾ?. ನಾನು ಚುನಾವಣೆ ಸ್ಫರ್ಧೆ ಮಾಡಿದರೆ ರಾಮನಗರ ಜಿಲ್ಲೆ ಬಿಟ್ಟು ಹೋಗಲ್ಲ ಎಂದು ಹೇಳುತ್ತ, ನಿಖಿಲ್ ಕುಮಾರ್ ವೇದಿಕೆಯಲ್ಲೇ ಭಾವುಕರಾಗಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ಮಾಜಿ ಸಚಿವ ಮುನಿರತ್ನ, ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರಕ್ಕೆ ಅಭ್ಯರ್ಥಿಯಾಗಲು ಮನವೊಲಿಸಲು ಸಾಧ್ಯವೇ ಕುಮಾರಸ್ವಾಮಿಯವರೇ ಎಂದು ಕೇಂದ್ರ ಗೃಹ ಸಚಿವರು ಕೇಳಿದರು. ರಾಜಕಾರಣವೇ ಇಂದು ಮಂಜಣ್ಣ ಅವರನ್ನು ಹುಡುಕಿಕೊಂಡು ಬಂದಿದೆ ಎಂದು ಹೇಳಿದ್ದಾರೆ.

ಒಬ್ಬ ಯುವಕ ಯಾವ ರೀತಿ ಬಲಿಯಾದ. ಚುನಾವಣೆ ಬಂದಾಗ ಕುಕ್ಕರ್ ಹಂಚುವುದು ಕಾಂಗ್ರೆಸ್ ಸಂಸ್ಕೃತಿ. ಕಾಂಗ್ರೆಸ್ ನಾಯಕರು ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ದೇಶವನ್ನು ಎರಡು ಭಾಗ ಮಾಡುವ ಬಗ್ಗೆ ಮಾತಾಡುತ್ತಾರೆ ಅಂದರೆ ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಇಂದು ಎರಡೇ ವಿಷಯ, ಒಂದು ದುಡ್ಡು ಇನ್ನೊಂದು ಮಾನವೀಯತೆ. ಎನ್ ಡಿಎ ಮೈತ್ರಿಗೆ ಪ್ರಮುಖ ಕಾರಣ ಗೋವಾ ಸಿಎಂ ಪ್ರಮೋದ್ ಸಾವಂತ್ ಎಂದು ಮುನಿರತ್ನ ಹೇಳಿದ್ದಾರೆ.

H. D. Kumaraswamy : ಮಂಡ್ಯ : ನಾಮಪತ್ರ ಸಲ್ಲಿಸಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ: ವಿಜಯೇಂದ್ರ ಆಹ್ವಾನದ ಬಳಿಕವೂ ಗೈರಾದ ಪ್ರೀತಂಗೌಡ

ನಾಮಪತ್ರ ಸಲ್ಲಿಕೆ ಬಳಿಕ ಡಿ.ಕೆ.ಸುರೇಶ್ ಕಾರಿಗೆ ಮೈತ್ರಿ ಕಾರ್ಯಕರ್ತರಿಂದ ಮುತ್ತಿಗೆ..

- Advertisement -

Latest Posts

Don't Miss