Saturday, July 27, 2024

Latest Posts

ನಾಮಪತ್ರ ಸಲ್ಲಿಕೆ ಬಳಿಕ ಡಿ.ಕೆ.ಸುರೇಶ್ ಕಾರಿಗೆ ಮೈತ್ರಿ ಕಾರ್ಯಕರ್ತರಿಂದ ಮುತ್ತಿಗೆ..

- Advertisement -

Political News: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ. ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಶಾಸಕರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ, ಮುನಿರತ್ನ, ಎಂ. ಕೃಷ್ಣಪ್ಪ ಮತ್ತು ಪತ್ನಿ ಅನುಸೂಯ ಮಂಜುನಾಥ್‌ ಅವರಿಗೆ ಸಾಥ್ ನೀಡಿದ್ದಾರೆ.

ಇನ್ನು ಇದೇ ವೇಳೆ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ.ಕೆ.ಸುರೇಶ್ ಮತ್ತು ಮುನಿರತ್ನ ಮುಖಾಮುಖಿಯಾಗಿದ್ದಾರೆ. ಇವರು ಬದ್ಧ ವೈರಿಗಳು ಎನ್ನಿಸಿಕೊಂಡಿದ್ದರೂ ಕೂಡ ಇಬ್ಬರೂ ಕೈ ಕುಲುಕಿ ವಿಶ್ ಮಾಡಿರುವುದು ವಿಶೇಷ.

ಇನ್ನೊಂದೆಡೆ ಡಿ.ಕೆ.ಸುರೇಶ್ ಇಂದು ಎರಡನೇಯ ಬಾರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಕಚೇರಿಯಿಂದ ಹೊರತೆರಳುವಾಗ, ಬಿಜೆಪಿ, ಜೆಡಿಎಸ್ ಕಾಾರ್ಯಕರ್ತರು ಸುರೇಶ್ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರು ಕೂಡಲೇ ಕ್ರಮ ಕೈಗೊಂಡು, ಮೈತ್ರಿ ಕಾರ್ಯಕರ್ತರನ್ನು ಚದುರಿಸಿ, ಕಾರು ಹೋಗಲು ಅನುವು ಮಾಡಿಕೊಟ್ಟಿದ್ದಾರೆ.

ಇನ್ನು ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಡಿ.ಕೆ.ಸುರೇಶ್,  ಇಂದು ಒಳ್ಳೆದಿನ, ಒಳ್ಳೆ ಗಳಿಗೆ ಅಂತ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದ್ದೇನೆ. ಬಿರು ಬಿಸಿಲಿನ ಕೆಳಗೆ ಚುನಾವಣೆ ನಡೆತಿದೆ. ಸಾಕಷ್ಟು ಅಭ್ಯರ್ಥಿಗಳಿದ್ದಾರೆ. ಮೈತ್ರಿ ಅಭ್ಯರ್ಥಿ ಕೂಡಾ ಸಿಕ್ಕಿದ್ರು ಅವರಿಗೂ ಶುಭಾಶಯ ತಿಳಿಸಿದ್ದೇನೆ‌ ಎಂದರು.

ಇನ್ನು ಮೈತ್ರಿ ಅಭ್ಯರ್ಥಿ ಪರ ಅಮಿತ್ ಶಾ ರೋಡ್ ಶೋ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್,  ಅವರಿಗೆ ಕರ್ನಾಟಕದ ನಾಡಿಮಿಡಿತ ಗೊತ್ತಿಲ್ಲ. ಅದಕ್ಕೆ ಬಂದು ಏನೇನೋ ಹೇಳಿಹೋಗಿದ್ದಾರೆ. ಆದರೆ ನನಗೆ ನಮ್ಮ ಜನರ ನಾಡಿಮಿಡಿತ ಗೊತ್ತು. ನಮ್ಮ ಗೆಲುವು ನಿಶ್ಚಿತ ಎಂದು ಡಿಕೆಸು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

K. S. Eshwarappa : ಈಶ್ವರಪ್ಪಗೆ ಮತ್ತೆ ನಿರಾಸೆ ..! ಅಮಿತ್ ಶಾ ಗೆ ಯಾಕಿಷ್ಟು ಸಿಟ್ಟು..?!

Munirathna : ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು

Kerala : ಕೇರಳ ದಿವಾಳಿ ..! ಸುಪ್ರೀಂ ಛೀಮಾರಿ..!

- Advertisement -

Latest Posts

Don't Miss