Tuesday, December 24, 2024

Latest Posts

ಕಾಂಗ್ರೆಸ್ ಟಿಕೆಟ್ ಗಾಗಿ ಮಹಿಳಾಮಣಿಯರ ಪೈಪೋಟಿ-ಅದು ಧಾರವಾಡ ಗ್ರಾಮೀಣ ಕ್ಷೇತ್ರ

- Advertisement -

Political news:

ಕರ್ನಾಟಕ ವಿಧಾನಸಭಾ ಚುನಾವಣೆ ಈಗಾಗಲೆ ಮನೆಯ ಅಂಗಳದಲ್ಲಿದ್ದು ಕೆಲವು124 ಕ್ಷೇತ್ರಗಳಲ್ಲಿ ಈಗಾಗಲೆ ಮೊದಲ ಪಟ್ಟಿಯಲ್ಲಿ  ಟಿಕೆಟ್ ಘೋಷಣೆ ಮಾಡಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ ಇನ್ನು ಉಳಿದ ಕ್ಷೇತ್ರಗಳಲ್ಲಿ ಟಿಕೆಟ್ ಬಿಡುಗಡೆಗೆ ಎಡಬಲ ಎಣಿಸುತಿದ್ದಾರೆ. ಏಕೆಂದರೆ ಒಂದೊಂದು ಕ್ಷೇತ್ರದಲ್ಲಿಯೂ ಸಹ ಕಾಂಗ್ರೆಸ್ ಪಕ್ಷದಿಂದ ಎರಡು ಮೂರು ಆಕಾಂಕ್ಷಿಗಳು ಅಭ್ಯರ್ಥಿಗಳ ಸಾಲಿನಲ್ಲಿರುವ ಕಾರಣ ಯರಿಗೆ ಟಿಕೆಟ್ ನೀಡಬೇಕು ಎನ್ನುವುದು ಗೊಂದಲ ಉಂಟು ಮಾಡಿದೆ.

ಇದರ ಮದ್ಯೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಇಷ್ಟುದಿನ ಕಾಂಗ್ರೆಸ್ ಪಕ್ಷದಿಂದ ಕೇವಲ ಒಬ್ಬರು ಮಾತ್ರ ಆಕಾಂಕ್ಷಿಗಳಿದ್ದರು. ಅವರು ಮಾಜಿ ಸಚಿವ ವುನಯ್ ಕುಲಕರ್ಣಿಯವರ ಪತ್ನಿ ಶಿವಲೀಲಾ ಮಾತ್ರ ಆಕಾಂಕ್ಷಿಯಾಗಿದ್ದರು. ಆದರೆ ಇಲ್ಲಿಯೂ ಸಹ ಈಗ ಮತ್ತೊಬ್ಬ ಮಹಿಳಾ ಆಕಾಂಕ್ಷಿ ಟಿಕೆಟ್ ಗಾಗಿ ಮುಂದೆ ಬಂದಿದ್ದಾರೆ. ಅವರು ವೃತ್ತಿಯಲ್ಲಿ ವೈದ್ಯೆಯಅಗಿರುವ ಸೀಮಾ ಸಾದಿಕಾ.

ಇನ್ನು ಸೀಮಾ ಸಾದಿಕಾ ಬಗ್ಗೆ ಹೇಳುವುದಾದರೆ. ಇವರು ನಮ್ಮ ಮಿತ್ರ ಫೌಡೇಶನ್ ಸಮ್ಮುಖದಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಸಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಇವರು ಬದ ಮತ್ತು ನಿರ್ಗತಿಕರಿಗೆ ಆರೋಗ್ಯ ಸುಧಾರಿತ ಸೇವೆಗಳನ್ನು ಒದಗಿಸಿದ್ದಾರೆ.

ಬೀದಿ ದೀಪಗಳು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಹಅಗೂ ಇನ್ನಿತರ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ದಿಸಲು ಮುಂದಾಗಿದ್ದರು, ಆದರೆ  ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ದ ಟಿಕೆಟ್ ಗಿಟ್ಟಿಸಿಕೊಳ್ಳವಲ್ಲಿ ವಿಫಲರಾದರು.

ಈಗ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿರುವ ಕಾರಣ ಮುಂದೆ ಇದೇ ರೀತಿ ಪೈಪೋಟಿ ಮುಂದುವರಿದರೆ ವಿರೋಧ ಪಕ್ಷಗಳು ಇದರ ಲಾಭ ಪಡೆಯುವಲ್ಲಿಎರಡು ಮಾತಿಲ್ಲ ಎಂಬುದು ಸ್ಥಳಿಯರ ಮಾತು.

ಕೊನೆಯಲ್ಲಿ ಈ ಇಬ್ಬರು ಮಹಿಳಾ ಮಣೀಯರಲ್ಲಿ ಕಾಂಗ್ರೆಸ್ ನಾಯಕರು ಯಾರ ತಲೆ ಮೇಲೆ ಕೈ ಇಡಲಿದ್ದಾರೆ, ಯಾರಿಗೆ ಕೈ ಎತ್ತಲಿದ್ದಾರೆ ಎನ್ನುವುದನ್ನುಕಾದು ನೋಡಬೇಕಿದೆ.

ಅಭ್ಯರ್ಥಿಗಳ 2 ನೆ ಪಟ್ಟಿ ಬಿಡುಗಡೆ ಸವಾಲು ಎದುರಿಸುತ್ತಿರುವ ಕಾಂಗ್ರೆಸ್ ನಾಯಕರು

ಒಳ ಮೀಸಾಲಾತಿ ವಿಚಾರದಲ್ಲಿ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ, ಪ್ರತಿಭಟನಾಕಾರರಿಂದ ಪೋಲಿಸರಿಗೆ ಸಣ್ಣ ಪುಟ್ಟ ಗಾಯಗಳು

ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ದಾಳಿ, ಇಬ್ಬರಿಗೆ ಗಂಭೀರ ಗಾಯ..

- Advertisement -

Latest Posts

Don't Miss