ರಾಜಕೀಯ ಸುದ್ದಿ : ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ತಾವು ಘೋಷಿಸಿರುವ ಗ್ಯಾರಂಟಿಗಳನ್ನು ಕೆಲವನ್ನು ಮಾಡಿ ನುಡಿದಂತೆ ನಡೆದ ಸರ್ಕಾರವೆಂದು ಕಾಂಗ್ರೆಸ್ ನಾಯಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಬಡವರ ದೀನ ದಲಿತರ, ರೈತರ ಪರವಾದ ಸರ್ಕಾರವೆಂದು ಪದೇಪದೇ ನಿರೂಪಿಸುತ್ತಿದೆ.
ಇದರ ಬೆನ್ನಲ್ಲೆ ಸಿದ್ದರಾಮಯ್ಯ ಸರ್ಕಾರ ಈಗ ಮಹಿಳೆಯರಿಗೆ ಅನುಕೂಲವಾಗುವಂತಹ ಯೋಜನೆಯಿಂದುನ್ನು ಜಾರಿ ಮಾಡಿದ್ದು “ಸದೃಢ ರಾಷ್ಟ್ರಕ್ಕಾಗಿ ಸ್ವಸ್ಥ ಸಮಾಜ”ವೆಂಬ ಘೋಷವಾಕ್ಯದಡಿ ಗರ್ಭಿಣಿ ಮಹಿಳೆಯರು ಮತ್ತು ಎಳೆಯ ಮಕ್ಕಳನ್ನು ಬಾಧಿಸುವ ರೋಗಗಳ ವಿರುದ್ಧ ಲಸಿಕಾ ಸಮರ ಸಾರಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಇಂದ್ರಧನುಷ್ ಯೋಜನೆಯಡಿ 0 ಇಂದ 5 ವರ್ಷದೊಳಗಿನ 1,70,265 ಮಕ್ಕಳು ಹಾಗೂ 34,651 ಗರ್ಭಿಣಿಯರಿಗೆ ಲಸಿಕೆ ನೀಡಿ, ಮಾರಕ ಖಾಯಿಲೆಗಳಿಂದ ಮುಕ್ತವಾದ ಬದುಕನ್ನು ಖಾತ್ರಿ ಪಡಿಸಿದ್ದೇವೆ. ನಮ್ಮ ಮೊದಲ ‘100 ದಿನಗಳ’ ಆಡಳಿತದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಗ್ಯಾರಂಟಿಗಳ ಈಡೇರಿಕೆಯ ಜೊತೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ನಮ್ಮೊಂದಿಗೆ ನಿಮ್ಮೆಲ್ಲರ ಸಹಕಾರವಿರಲಿ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Mysore Dasara: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರಿಂದ ದಸರಾ ಉದ್ಘಾಟನೆ…!
Mysore Chamundi devi; ದೇವಿ ಹಾಗೂ ಜನರ ಆಶೀರ್ವಾದದಿಂದ ಗ್ಯಾರಂಟಿ ಯೋಜನೆಗಳು ಯಶಸ್ವಿ ಜಾರಿ:
Instagram: ಪಕ್ಷ ಬದಲಾದರೂ ಇನ್ಸ್ಟಾ ಗ್ರಾಂ ಖಾತೆಯಲ್ಲಿ- ಜಗದೀಶ್ ಶೆಟ್ಟರ್ ಬಿಜೆಪಿ!