ನಮ್ಮ ರಾಜ್ಯದ ಬೊಕ್ಕಸವನ್ನು ಕಾಂಗ್ರೆಸ್ ಖಾಲಿ ಮಾಡಿದ್ದು ,ಈಗ ಅದು ಖಾಲಿ ಟ್ರಂಕ್ ನಂತಾಗಿದೆ: ತೇಜಸ್ವಿ ಸೂರ್ಯ

Political News: ಇಂದು ಮೆಟ್ರೋ ದರ ಏರಿಕೆ ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ ಸೇರಿ, ಕೆಲವರು ಪ್ರತಿಭಟನೆ ನಡೆಸಿದ್ದು, ಅವರನ್ನೆಲ್ಲ ಕೆಲ ಕಾಲ ಪೋಲೀಸರು ಬಂಧಿಸಿದ್ದರು.

ತೇಜಸ್ವಿ ಸೂರ್ಯ ಅವರು ಖಾಲಿ ಟ್ರಂಕ್ ಹಿಡಿದು ಇದು ರಾಜ್ಯ ಸರ್ಕಾರ ಎಂಬ ರೀತಿ ಪ್ರತಿಭಟಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಕಾರಣಕ್ಕೆ ಅವರನ್ನು ಬಂಧಿಸಲಾಯಿತು. ಬಳಿ ಬಿಡುಗಡೆ ಮಾಡಲಾಯಿತು.

ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿದ್ದ ತೇಜಸ್ವಿ ಸೂರ್ಯ, ನಮ್ಮ ರಾಜ್ಯದ ಬೊಕ್ಕಸವನ್ನು ಕಾಂಗ್ರೆಸ್ ಖಾಲಿ ಮಾಡಿದ್ದು ,ಈಗ ಅದು ಖಾಲಿ ಟ್ರಂಕ್ ನಂತಾಗಿದೆ. ಸಿಎಂ ಮತ್ತು ಡಿಸಿಎಂ ಅವರು BMRCL ಗೆ ನೀಡುತ್ತಿದ್ದ ಬೆಂಬಲವನ್ನು ಹಿಂಪಡೆದು, ಉದ್ದೇಶಪೂರ್ವಕವಾಗಿ ಮೆಟ್ರೋ ಪ್ರಯಾಣಿಕರಿಗೆ ದಂಡ ವಿಧಿಸುತ್ತಿದ್ದಾರೆ. ಸಿಎಂ, ಡಿಸಿಎಂ ಅವರೇ, ಜನರ ಕಿವಿ ಮೇಲೆ ಹೂವ ಇಟ್ಟಿದ್ದು ಸಾಕು. ಮುಂಬರುವ ಬಜೆಟ್‌ನಲ್ಲಿ ‘ಶ್ಯಾಡೋ ಕ್ಯಾಶ್ ಸಪೋರ್ಟ್’ ಅನ್ನು ಪುನಃ ಜಾರಿಗೆ ತನ್ನಿ. ಕೂಡಲೇ ನೂತನ ದರ ನಿಗದಿ ಸಮಿತಿ ರಚನೆ ಮಾಡಿ ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಅಸಹಾಯಕತೆಯನ್ನು ನೋಡಿ, ಬರಿಗೈಲಿ ಮೆಟ್ರೋ ಹತ್ತಲು ಪ್ರಯತ್ನಿಸಿದ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕಂಡು ಬೆದರುತ್ತಿರುವ ಈ ಸರ್ಕಾರ ಒಂದು #ಖಾಲಿಟ್ರಂಕ್‌ಸರ್ಕಾರ (#KhaliTrunkSarkara). ಇವರ ಆದ್ಯತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಇಂತಹ ಬೆದರಿಕೆ ತಂತ್ರಗಳ ಬದಲಿಗೆ, ರಾಜ್ಯ ಸರ್ಕಾರವು ಮೆಟ್ರೋಗೆ ನೀಡುತ್ತಿದ್ದ ‘ಶ್ಯಾಡೋ ಕ್ಯಾಶ್ ಸಪೋರ್ಟ್’ (Shadow Cash Support) ಅನ್ನು ಪುನಃ ಆರಂಭಿಸಬೇಕು, ದರ ನಿರ್ಧರಣಾ ಸಮಿತಿಯನ್ನು ಪುನಾರಚಿಸಬೇಕು ಮತ್ತು ಸಾಮಾನ್ಯ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ಕೈಗೆಟುಕುವಂತೆ ಮಾಡಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

About The Author