Sunday, May 26, 2024

Latest Posts

ಕಾಂಗ್ರೆಸ್ ಹೆಣದ ಮೇಲೆ ರಾಜಕಾರಣ ಮಾಡುತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ..

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಕಾಂಗ್ರೆಸ್ ಹೆಣದ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಉಗ್ರರ ವಿಚಾರದಲ್ಲಿ ರಾಜಕಾರಣ ಬಿಡಿ. ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ಆರೋಪಿಗಳನ್ನು ಎನ್ಐಎ ಬಂಧಿಸಿದೆ. ಗುಪ್ತಚರ ಇಲಾಖೆ ಶ್ರಮಪಟ್ಟು ಮಾಹಿತಿ ಸಂಗ್ರಹಿಸಿ ಎನ್ಐಎ ಗೆ ನೀಡಿದೆ. ಬ್ಲಾಸ್ಟ್ ಆದಾಗ ಉಪಮುಖ್ಯಮಂತ್ರಿಗಳು, ಗೃಹ ಸಚಿವರು ಹಾದಿ ತಪ್ಪಿಸುವ ಕೆಲಸ ಮಾಡಿದ್ದರು. ವೈಯಕ್ತಿಕ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂದಿದ್ದರು. ಸಿಲಿಂಡರ್ ಬ್ಲಾಸ್ಟ್ ಇತ್ಯಾದಿ ಹೇಳಿಕೆ ನೀಡಿ ತನಿಖೆಯ ಹಾದಿ ತಪ್ಪಿಸಿದ್ದರು.

ಎನ್ಐಎ ತನಿಖೆಗೆ ತೆಗೆದುಕೊಂಡಿತ್ತು. ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಆರೋಪಿಗಳನ್ನು ಬಂಧಿಸಲಾಗಿದೆ. ಇಂಡಿ ಭಾಗವಾದಂತಹ ಟಿಎಂಸಿ ಆಡಳಿತವಿರೋ ಪಶ್ಚಿಮ ಬಂಗಾಳದಲ್ಲಿ ಆರೋಪಿಗಳು ಅವಿತು ಕುಳಿತಿದ್ದರು. ನಕಲಿ ದಾಖಲೆ ಸೃಷ್ಟಿಸಿ ವಿದೇಶಕ್ಕೆ ಹಾರಲು ಪ್ರಯತ್ನಿಸಿದ್ದರು. ಮುಂಬೈ ಬ್ಲಾಸ್ಟ್ ವೇಳೆಯಲ್ಲಿಯೂ ಬಿಜೆಪಿ ಅತ್ಯಂತ ಸಂಯಮದಿಂದ ವರ್ತಿಸಿದೆ ಎಂದು ಪ್ರಹ್ಲಾದ್ ಜೋಶಿ ಆಕ್ರೋಶ ಹೊರಹಾಕಿದ್ದಾರೆ.

ಆದ್ರೆ ಕಾಂಗ್ರೆಸ್ ಪಕ್ಷ ಜನರ ಜೀವದ ಮೇಲೆ, ಹೆಣದ ಮೇಲೆ ರಾಜಕಾರಣ ಮಾಡಲು ಹೊರಟಿದೆ. ಬಹುಮತ ಎಷ್ಟು ಬೇಕೋ ಅಷ್ಟು ಸ್ಥಾನಗಳಲ್ಲಿಯೂ ಕಾಂಗ್ರೆಸ್ ಸ್ಪರ್ಧಿಸಿಲ್ಲ. ಇಂತಹ ದೈನೀಯ ಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಉಗ್ರರ ಚಟುವಟಿಕೆ ವಿಚಾರದಲ್ಲಿ ರಾಜಕೀಯ ಮಾಡದಿರಲು ಜೋಶಿ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದ ವರ್ತನೆಯಿಂದ ಇಂತಹ ಘಟನೆಗಳಿಗೆ ಕುಮ್ಮಕ್ಕು ಸಿಕ್ತಾ ಇದೆ. ಈಗಲಾದರೂ ಸಿಎಂ ಗುಪ್ತಚರ ಇಲಾಖೆಯನ್ನು ಬಲಪಡಿಸಲಿ ಎಂದು ಜೋಶಿ ಹೇಳಿದ್ದಾರೆ.

ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮುನಿಸು ವಿಚಾರದ ಬಗ್ಗೆ ಮಾತನಾಡಿದ ಜೋಶಿ, ಮೋದಿ ಕಾರ್ಯಕ್ರಮಕ್ಕೆ ಪ್ರಸಾದ್ ಬಾರದೆ ಇರೋ ವಿಚಾರ ಗೊತ್ತಿಲ್ಲ. ಶ್ರೀನಿವಾಸ್ ಪ್ರಸಾದ ನಮ್ಮ ಪಕ್ಷದ ಅತ್ಯಂತ ಹರಿಯ ನಾಯಕರು. ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ಸಿಗೆ ಹೋಗಲಿಕ್ಕೆ ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಶ್ರೀನಿವಾಸ ಪ್ರಸಾದ್ ಅವರಿಗೆ ಹೇಗೆ ಅಪಮಾನ ಮಾಡಿದ್ದರು ಅಂತ ಎಲ್ಲರಿಗೂ ಗೊತ್ತಿದೆ. ಏನಾಗಿದೆ ಅಂತ ತಿಳಿದುಕೊಂಡು ಹೇಳುತ್ತೇನೆ ಎಂದು ಜೋಶಿ ಹೇಳಿದ್ದಾರೆ.

200 ಕೋಟಿ ಆಸ್ತಿ ದಾನ ಮಾಡಿ ಜೈನ ಮುನಿಯಾದ ಗುಜರಾತ್‌ನ ಉದ್ಯಮಿ..

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಜ್ಯೋತಿಷಿ ಎಸ್‌.ಕೆ.ಜೈನ್ ನಿಧನ

ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ, ಆದರೆ ಮಕ್ಕಳ ಫೀಸ್‌ ಕಟ್ಟಲು ದುಡ್ಡಿಲ್ಲ

- Advertisement -

Latest Posts

Don't Miss