Saturday, July 27, 2024

Latest Posts

200 ಕೋಟಿ ಆಸ್ತಿ ದಾನ ಮಾಡಿ ಜೈನ ಮುನಿಯಾದ ಗುಜರಾತ್‌ನ ಉದ್ಯಮಿ..

- Advertisement -

National News: ಎಷ್ಟೋ ಜೈನ ಉದ್ಯಮಿಗಳು, ಉದ್ಯಮಿಗಳ ಮಕ್ಕಳು ಕೋಟಿ ಕೋಟಿ ರೂಪಾಯಿ ಆಸ್ತಿ ತ್ಯಜಿಸಿ, ಜೈನ ಮುನಿಗಳಾಗಿದ್ದಾರೆ. ಸನ್ಯಾಸ ಸ್ವೀಕರಿಸಿದ್ದಾರೆ. ಜೀವನದ ಎಲ್ಲಾ ಖುಷಿಗಳನ್ನು ಅನುಭವಿಸಿ, ಅವೆಲ್ಲವೂ ಶೂನ್ಯ, ಮನಸ್ಸಿನ ನೆಮ್ಮದಿ ಬೇಕಾದ್ರೆ, ದೇವರ ಮೊರೆ ಹೋಗಬೇಕು ಎಂದು ಅರಿತು, ಜೀನೇಂದ್ರನ ಮೊರೆ ಹೋಗಿದ್ದಾರೆ.

ಅದೇ ರೀತಿ ಗುಜರಾತ್‌ನ ಓರ್ವ ಶ್ರೀಮಂತ ಉದ್ಯಮಿ,  200 ಕೋಟಿ ರೂಪಾಯಿ ಆಸ್ತಿ ದಾನ ಮಾಡಿ ಜೈನ ಮುನಿಯಾಗಿದ್ದಾರೆ. ಉದ್ಯಮಿ ಭವೇಷ್ ಭಂಡಾರಿ ಮತ್ತು ಅವರ ಪತ್ನಿ ಲೇಶ್ ದೀಕ್ಷಾ ಅವರಿಬ್ಬರು ಸೇರಿ, ಜೈನ ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದಷ್ಟೇ ಇವರ ಮಗ ಮತ್ತು ಮಗಳು ಇಬ್ಬರೂ ಜೈನ ದೀಕ್ಷೆ ತೆಗೆದುಕೊಂಡಿದ್ದರು. ಇದೀಗ ಪತಿ ಪತ್ನಿ ಇಬ್ಬರೂ ಜೈನ ದೀಕ್ಷೆ ತೆಗೆದುಕೊಳ್ಳುವ ಮೂಲಕ, ಇಡೀ ಸಂಸಾರ ಜೀನೇಂದ್ರನಿಗಾಗಿ ಜೀವನ ಅರ್ಪಿಸಿದೆ.

ಇವರ ಮಕ್ಕಳು 20 ವರ್ಷ ವಯಸ್ಸಿನವರೊಳಗಾಗಿದ್ದು, ಇವರಿಬ್ಬರು ಲಾಕ್‌ಡೌನ್ ಸಮಯದಲ್ಲಿ ಜೈನ ಮುನಿಗಳ ಮಾತನ್ನು ಆಲಿಸುತ್ತಿದ್ದರು. ಹೀಗೆ ಜೈನ ಮುನಿಗಳ ಮಾತನ್ನು ಆಲಿಸುತ್ತಲೇ, ಅವರು ದೀಕ್ಷೆ ಪಡೆಯಲು ನಿರ್ಧರಿಸಿದ್ದರು. ಇದೀಗ ನಾವು ಕೂಡ ಅದೇ ನಿರ್ಧಾರ ಮಾಡಿದ್ದೇನೆ ಎಂದು ಭವೇಷ್ ಭಂಡಾರಿ ಹೇಳಿದ್ದಾರೆ. ಈ ಕಾರಣಕ್ಕಾಗಿ ಅವರು ಈಗಾಗಲೇ ಜೈನ ಮುನಿಗಳ ಬಳಿ ಮಾತನಾಡಿ, ತಮ್ಮ 200 ಕೋಟಿ ರೂಪಾಯಿ ಆಸ್ತಿಯನ್ನು ದಾನ ಮಾಡಿದ್ದಾರೆ.

ಇಬ್ಬರು ಸೇರಿ ಪ್ರಚಾರವನ್ನು ನಿಲ್ಲಿಸಿಬಿಡೋಣ, ಯಾರು ಗೆಲ್ತಾರೆ ನೋಡೋಣ: ಜೋಶಿಗೆ ಲಾಡ್ ಸವಾಲ್‌

ಯಾರು ಏನೇ ತಿಪ್ಪರಲ್ಲಾಗ ಹೊಡೆದರೂ ಪ್ರಹ್ಲಾದ್ ಜೋಶಿ‌ ಗೆಲ್ಲುತ್ತಾರೆ ಮೋದಿ ಪ್ರಧಾನಿಯಾಗುತ್ತಾರೆ: ಅರವಿಂದ್ ಬೆಲ್ಲದ್..

ಧಾರವಾಡ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ತೀವಿ: ಶಾಸಕ ಮಹೇಶ್ ಟೆಂಗಿನಕಾಯಿ

- Advertisement -

Latest Posts

Don't Miss