bengaluru : ರಾಜ್ಯದಲ್ಲಿ ಜನ ಬೆಲೆ ಏರಿಕೆಯ ಬಿಸಿಗೆ ಬೆಂದು ಹೋಗಿದ್ದಾರೆ. ಈಗಾಗಲೇ ಬಸ್ ದರ ಏರಿಕೆಯಿಂದ ಬಸವಳಿದಿರುವ ಜನ ಸಾಮಾನ್ಯರು ಮೆಟ್ರೊ ಪ್ರಯಾಣ ದರದಲ್ಲಿ ಭಾರಿ ಪ್ರಮಾಣದ ಏರಿಕೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಇನ್ನು ಮುಂದೆ ಮೆಟ್ರೋ ಪರಿಷ್ಕೃತ ಪ್ರಯಾಣದರ ಜಾರಿಗೆ ಬಂದಿದ್ದು, ಭಾರಿ ಪ್ರಮಾಣದ ಏರಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು ಕಿಡಿಕಾರಿದ್ದು ದುಬಾರಿಯಾಗಿರುವ ಮೆಟ್ರೊ ರೈಲಿನ ದರವನ್ನು ವಾಪಸ್ ಪಡೆಯುವಂತೆಯೂ ಒತ್ತಾಯಿಸಿದ್ದಾರೆ.
ಈ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿರುವ ಬಿಜೆಪಿಯ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಲು ಸೇರಿದಂತೆ ಹಲವು ವಸ್ತುಗಳ ಬೆಲೆಯನ್ನು ಸರಕಾರವು ಹೆಚ್ಚಳ ಮಾಡಿರುವುದು ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸರಕಾರದ ವಿರುದ್ಧ ನಾರಾಯಣಸ್ವಾಮಿ ಗುಡುಗಿದ್ದಾರೆ.
ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರ ಬಡವರ ತಲೆ ಬೋಳಿಸುವ ಕೆಲಸ ಮಾಡ್ತಿದೆ. ಬಸ್ ದರದ ಜೊತೆ ಪೆಟ್ರೋಲ್, ಡೀಸೆಲ್, ಹಾಲಿನ ದರ ಮತ್ತು ದವಸ ಧಾನ್ಯಗಳ ಬೆಲೆ ಕೂಡ ಗಗನಕ್ಕೇರಿದೆ ಈ ನಡುವೆ ಸರ್ಕಾರ ಮತ್ತೆ ಯಾವ ಬೆಲೆ ಏರಿಕೆ ಮಾಡಬೇಕು ಎಂಬ ಚಿಂತೆ ಮಾಡ್ತಿದೆ ಅಂತ ಟಿಕೆ ಮಾಡಿದ್ದಾರೆ. ಇನ್ನು ಕರ್ನಾಟಕ ಕಾಂಗ್ರೆಸ್ ಸರಕಾರವು ಗ್ಯಾರಂಟಿಗಳಿಗಾಗಿ ಎಲ್ಲದರಲ್ಲೂ ಬೆಲೆ ಏರಿಕೆಯನ್ನು ಮಾಡಿದೆ. ಎಲ್ಲದರಲ್ಲೂ ಏರಿಕೆಯಾದ ಬಳಿಕ ಈಗ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಿಸಿದ್ದಾರೆ. ಗ್ಯಾರಂಟಿಗಳನ್ನು ನಿಲ್ಲಿಸುವಂತೆ ಅವರ ಪಕ್ಷದ ನಾಯಕರೇ ಹೇಳುತ್ತಿದ್ದಾರೆ ಆದರೆ ಸರಕಾರವು ಹಣಕಾಸಿನ ಸಮಸ್ಯೆಯಿಂದಾಗಿ ಸ್ಮಶಾನಕ್ಕೆ ಸೇರುವ ಹಂತಕ್ಕೆ ತಲುಪಿದೆ ಎಂದಿದ್ದಾರೆ.