ಬೆಂಗಳೂರು: ವಿಶ್ವಾಸ ಮತ ಯಾಚನೆ ಕುರಿತಾಗಿ ಆತುರ ಮಾಡುತ್ತಿರುವ ಬಿಜೆಪಿಯವರ ಬೆನ್ನಿಗೆ ರಾಜ್ಯಪಾಲರು ನಿಂತಿದ್ದಾರೆ ಅಂತ ಆರೋಪಿಸಿ ಸದನದಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು ‘ಗೋ ಬ್ಯಾಕ್ ಗವರ್ನರ್’ ಅಂತ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು.
ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಕುರಿತು ಚರ್ಚೆ ನಿನ್ನೆಗಿಂತಲೂ ಜೋರಾಗಿ ನಡೆದಿದೆ. ಇಂದು ಮಧ್ಯಾಹ್ನ1.30ರೊಳಗೆ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಬೇಕೆಂಬ ರಾಜ್ಯಪಾಲರ ಸೂಚನೆ ಕುರಿತು ಸಚಿವ ಕೃಷ್ಣಭೈರೇಗೌಡ ಆಕ್ಷೇಪ ವ್ಯಕ್ತಪಡಿಸಿದ್ರು ಸಾಂವಿಧಾನಿಕ ಸಂಸ್ಥೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಒಂದು ಸಾಂವಿಧಾನಿಕ ಸಂಸ್ಥೆ ಮತ್ತೊಂದು ಸಾಂವಿಧಾನಿಕ ಸಂಸ್ಥೆಗೆ ಈ ರೀತಿ ಸೂಚನೆ ನೀಡಲು ಬರುವುದಿಲ್ಲ ಅಂತ ಪ್ರತಿಪಾದಿಸುತ್ತಿದ್ದರು. ಅಲ್ಲದೆ ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಅಂತ ಆರೋಪಿಸಿದ ಸದಸ್ಯರು ಗದ್ದಲವೆಬ್ಬಿಸಿದ್ರು. ಇದೇ ವೇಳೆ ‘ಗೋ ಬ್ಯಾಕ್ ಗವರ್ನರ್’ ಅಂತ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಬಿಜೆಪಿ ಮತ್ತು ದೋಸ್ತಿ ಸದಸ್ಯರ ಮಧ್ಯೆ ಗದ್ದಲವುಂಟಾಯಿತು.