ಬೆಂಗಳೂರು: ಬಿಜೆಪಿ ವಿಶ್ವಾಸಮತ ಯಾಚನೆ ಸಲುವಾಗಿ ಇಂದು ವಿಧಾಸಭಾ ಅಧಿವೇಶನ ನಡೆಯುತ್ತಿದೆ. ಆದರೆ ಆಡಳಿತ ಯಂತ್ರ ಕುಸಿದಿದೆ, ಸ್ಥಗಿತಗೊಂಡಿದೆ ಅದನ್ನು ಸರಿ ಮಾಡಬೇಕು ಅಂತ ಹೇಳುತ್ತಿರುವ ಬಿಜೆಪಿಗೆ ಜನಾದೇಶವೇ ಇಲ್ಲ. ಹೀಗಾಗಿ ವಿಶ್ವಾಸಮತ ಯಾಚನೆಗೆ ನಮ್ಮ ವಿರೋಧವಿದೆ ಅಂತ ಕಾಂಗ್ರೆಸ್-ಜೆಡಿಎಸ್ ಆಕ್ಷೇಪಿಸಿವೆ.
ಸದನದಲ್ಲಿ ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಮೈತ್ರಿ ಪಕ್ಷಗಳು ಕಾಮನ್ ಮಿನಿಮಮ್ ಪ್ರೋಗ್ರಾಂನನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಅಲ್ಲದೆ ನಾನು ಸಿಎಂ ಆಗಿದ್ದಾಗಿನಿಂದಲೂ ಯಾವ ಯೋಜನಗಳು ಜಾರಿಯಲ್ಲಿದ್ದವೋ ಅದು ಸಮ್ಮಿಶ್ರ ಸರ್ಕಾರಾವಧಿಯಲ್ಲೂ ಮುಂದುವರಿಸಿಕೊಂಡು ಬಂದಿದ್ದೆವು. ರೈತರಿಗೆ ಬಡವರಿಗೆ, ಸಾಮಾನ್ಯ ವರ್ಗದವರಿಗೆ ನ್ಯಾಯ ಒದಗಿಸೋ ಉದ್ದೇಶದಿಂದ ಆಡಳಿತ ನಡೆಸಿದೆವು.14 ತಿಂಗಳು ಯಶಸ್ವಿ ಆಡಳಿತ ನಡೆಸಿದ್ದೆವು ಹೀಗಾಗಿ ಆಡಳಿತ ಯಂತ್ರ ಕೆಟ್ಟು ನಿಂತಿಲ್ಲ ಅಂತ ಪ್ರತಿಕ್ರಿಯಿಸಿದ್ರು.
ಇನ್ನು ನೇಕಾರರ ಸಾಲವನ್ನೂ ಕೂಡ ನಮ್ಮ ಸರ್ಕಾರಾವಧಿಯಲ್ಲೇ ಮನ್ನಾ ಮಾಡಿದೆವು. ನೇಕಾರರು ರೈತರಿಗೆ ನನ್ನ ಕೊನೆಯ ಬಜೆಟ್ ನಲ್ಲಿ ರೈತ ಬೆಳಕು ಅನ್ನೋ ಯೋಜನೆ ಜಾರಿಗೆ ತಂದಿದ್ದೆ, ಹಾಗೇ ನೇಕಾರರ ಸಾಲ ಮನ್ನವನ್ನೂ ಮಾಡಿದ್ದೆ. ಆದರೆ ಬಿಜೆಪಿ ಮತ್ತೆ ಅದೇ ಯೋಜನೆಯನ್ನು ಪುನರುಚ್ಚಾರಗೊಳಿಸಿದ್ದೀರಿ. ಇದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಅಂತ ಸದನದಲ್ಲಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ರು. ಇನ್ನು ಜನರ ಆಶೋತ್ತರಗಳಿಗೆ ತಕ್ಕಂತೆ ಸರ್ಕಾರ ರಚಿಸಿದ್ದೇವೆ ಅಂತ ಹೇಳುತ್ತಿರೋ ಬಿಜೆಪಿಗೆ ಜನಾದೇಶವೇ ಇಲ್ಲ. ನಾನು ಮತ್ತು ಬಿಎಸ್ವೈ ರಾಜಕೀಯದಲ್ಲಿ ಸಮಕಾಲೀನರು. ಆದರೆ ಇವರಿಗೆ ಒಂದು ಬಾರಿಯೂ ಜನಾದೇಶ ಸಿಕ್ಕಿಲ್ಲ. ವಿಶ್ವಾಸ ಮಂಡನೆಗೆ ನಾನು ಆಕ್ಷೇಪಿಸುತ್ತೇನೆ ಅಂತ ಸಿದ್ದರಾಮಯ್ಯ ತಿಳಿಸಿದ್ದಾರೆ.