Saturday, July 27, 2024

Vote of Confidence

ಬಿಜೆಪಿ ವಿಶ್ವಾಸಮತ ಯಾಚನೆಗೆ ಕಾಂಗ್ರೆಸ್-ಜೆಡಿಎಸ್ ಆಕ್ಷೇಪ

ಬೆಂಗಳೂರು: ಬಿಜೆಪಿ ವಿಶ್ವಾಸಮತ ಯಾಚನೆ ಸಲುವಾಗಿ ಇಂದು ವಿಧಾಸಭಾ ಅಧಿವೇಶನ ನಡೆಯುತ್ತಿದೆ. ಆದರೆ ಆಡಳಿತ ಯಂತ್ರ ಕುಸಿದಿದೆ, ಸ್ಥಗಿತಗೊಂಡಿದೆ ಅದನ್ನು ಸರಿ ಮಾಡಬೇಕು ಅಂತ ಹೇಳುತ್ತಿರುವ ಬಿಜೆಪಿಗೆ ಜನಾದೇಶವೇ ಇಲ್ಲ. ಹೀಗಾಗಿ ವಿಶ್ವಾಸಮತ ಯಾಚನೆಗೆ ನಮ್ಮ ವಿರೋಧವಿದೆ ಅಂತ ಕಾಂಗ್ರೆಸ್-ಜೆಡಿಎಸ್ ಆಕ್ಷೇಪಿಸಿವೆ. ಸದನದಲ್ಲಿ ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಮೈತ್ರಿ ಪಕ್ಷಗಳು ಕಾಮನ್ ಮಿನಿಮಮ್...

ಬೆಂಗಳೂರಿನಲ್ಲಿ 2 ದಿನಗಳ ಕಾಲ ನಿಷೇಧಾಜ್ಞೆ…!

ಬೆಂಗಳೂರು: ಇನ್ನೇನು ಕೆಲವೇ ಹೊತ್ತಿನಲ್ಲಿ ವಿಶ್ವಾಸಮತ ಯಾಚನೆ ಪೂರ್ಣಗೊಳ್ಳಲಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬದಲಾಗೋ ಎಲ್ಲಾ ಲಕ್ಷಣಗಳೂ ಈಗಾಗಲೇ ಗೋಚರಿಸುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಲು ಇನ್ನೇನು ಕೆಲ ಹೊತ್ತಲ್ಲೇ ನೆಡಯಲಿದೆ. ಹೀಗಾಗಿ ಈಗಾಗಲೇ...

‘ಸಂತೋಷದಿಂದ ಸಿಎಂ ಸ್ಥಾನ ತ್ಯಜಿಸಲು ಸಿದ್ಧ- ಪದೇ ಪದೇ ವಚನಭ್ರಷ್ಟ ಎನ್ನಬೇಡಿ’- ಸಿಎಂ ಕುಮಾರಸ್ವಾಮಿ

ಬೆಂಗಳೂರು: ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಸಿಎಂ ಎಚ್.ಡಿ ಕುಮಾರಸ್ವಾಮಿ ಸದನದಲ್ಲಿ ತಮ್ಮ ಕೊಡುಗೆ, ಯೋಜನೆಗಳ ಕುರಿತಾಗಿ ಮಾತನಾಡಿದ್ದಾರೆ. ಈ ಮಧ್ಯೆ ಕಳೆದ ಬಾರಿ 20-20 ಸರ್ಕಾರದ ಕುರಿತಾಗಿ ಮಾತನಾಡಿದ ಎಚ್ಡಿಕೆ, ಪದೇ ಪದೇ ನನ್ನನ್ನು ವಚನಭ್ರಷ್ಟ ಎನ್ನಬೇಡಿ ಅಂತ ಪ್ರತಿಪಕ್ಷ ಬಿಜೆಪಿಗೆ ಮನವಿ ಮಾಡಿದ್ದಾರೆ. ಸದನದಲ್ಲಿ ತಾವು ರಾಜ್ಯದ ಜನತೆಗೆ ನೀಡಿದ ಯೋಜನೆಗಳ...

‘ವಿಶ್ವಾಸಮತ ಯಾಚನೆಗೆ ಇನ್ನು ತಡ ಮಾಡಲು ಆಗೋದಿಲ್ಲ’- ಸ್ಪೀಕರ್ ಸ್ಪಷ್ಟನೆ

ಬೆಂಗಳೂರು: ವಿಶ್ವಾಸಮತ ಯಾಚನೆ ಕುರಿತಾಗಿ ತಮ್ಮನ್ನು ಭೇಟಿಯಾಗಿದ್ದ ಸಿಎಂ ನಿಯೋಗಕ್ಕೆ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಇನ್ನು ವಿಳಂಬ ಮಾಡೋದಕ್ಕೆ ಆಗೋದಿಲ್ಲ ಅಂತ ಖಡಕ್ ಉತ್ತರ ನೀಡಿದ್ದಾರೆ. ಹೀಗಾಗಿ ಇಂದು ವಿಶ್ವಾಸಮತ ಯಾಚನೆ ನಡೆಯಲಿದೆಯಾ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ವಿಧಾನಸಭಾ ಕಲಾಪದ ಮಹತ್ವದ ದಿನವಾದ ಇಂದು, ಸಿಎಂ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ, ಎಚ್.ಡಿ ರೇವಣ್ಣ...

ಬೀಸೋ ದೊಣ್ಣೆಯಿಂದ ಪಾರಾದ ದೋಸ್ತಿ- ಅಹೋರಾತ್ರಿ ಧರಣಿಗೆ ಬಿಜೆಪಿ ನಿರ್ಧಾರ..!

ಬೆಂಗಳೂರು: ಇಂದು ನಿಗದಿಯಾಗಿದ್ದ ಸದನದ ಕಲಾಪದಲ್ಲಿ ಕೊನೆಗೂ ವಿಶ್ವಾಸಮತ ಯಾಚನೆಯಾಗದೇ ಮುಂದೂಡಿಕೆಯಾಗಿದೆ. ಇಂದು ಬೆಳಗ್ಗಿನಿಂದ ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿ ಹೈಡ್ರಾಮಾಕ್ಕೆ ಸಾಕ್ಷಿಯಾಗಿದ್ದ ವಿಧಾನಸಭಾ ಕಲಾಪ ಮೈತ್ರಿ ಸರ್ಕಾರದ ಅಳಿವು-ಉಳಿವು ನಿರ್ಧರಿಸಲಾಗಲಿಲ್ಲ. ವಿಶ್ವಾಸಮತ ಯಾಚನೆ ಮಾಡಿದ್ರೆ ಮೈತ್ರಿ ಸರ್ಕಾರಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ ಅಂತ ಅರಿತಿದ್ದ ದೋಸ್ತಿಗಳೂ ಕೊನೆಗೂ ಇಂದಿನ ಸದನವನ್ನು ಮುಂದೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು...

ಬಿಜೆಪಿಗೆ ಸ್ಪಂದಿಸಿದ ರಾಜ್ಯಪಾಲರು- ಇಂದು ವಿಸ್ವಾಸಮತ ಯಾಚನೆ ಪೂರ್ಣಗೊಳಿಸುವಂತೆ ಸೂಚನೆ

ಬೆಂಗಳೂರು: ವಿಶ್ವಾಸಮತ ಯಾಚನೆ ಕುರಿತು ಸದನದಲ್ಲಿ ಉಂಟಾಗಿರುವ ಗದ್ದಲ ರಾಜ್ಯಪಾಲರ ಬಾಗಿಲು ಬಡಿಸಿತು. ಕಾಂಗ್ರೆಸ್-ಜೆಡಿಎಸ್ ವಿಶ್ವಾಸಮತ ಯಾಚನೆ ಮುಂದೂಡಿಕೆ ಮಾಡಬೇಕೆಂದು ಸ್ಪೀಕರ್ ಗೆ ಮನವಿ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಇದಕ್ಕೆ ಸ್ಪಂದಿಸಿರೋ ರಾಜ್ಯಪಾಲರು ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಲು ಸೂಚನೆ ನೀಡಿದ್ದಾರೆ. ಅತೃಪ್ತ ಶಾಸಕರು ವಿಪ್ ಉಲ್ಲಂಘನೆ...

ವಿಶ್ವಾಸಮತ ಯಾಚನೆಗೆ ಪಟ್ಟು- ರಾಜ್ಯಪಾಲರ ಮೊರೆಹೋದ ಬಿಜೆಪಿ

ಬೆಂಗಳೂರು: ಅತೃಪ್ತ ಶಾಸಕರ ವಿಪ್ ಉಲ್ಲಂಘನೆ ವಿಚಾರವಾಗಿ ನಿರ್ಧಾರ ಕೈಗೊಳ್ಳುವವರೆಗೂ ವಿಶ್ವಾಸಮತ ಯಾಚನೆ ಪ್ರಸ್ತಾಪ ಮುಂದೂಡಿಕೆ ಮಾಡಿ ಅನ್ನೋ ದೋಸ್ತಿ ಮನವಿಗೆ ಬಿಜೆಪಿ ಸಿಡಿದೆದ್ದಿದೆ. ಇಂದೇ ವಿಶ್ವಾಸಮತ ಯಾಚನೆಯಾಗಬೇಕು ಅಂತ ಪಟ್ಟು ಹಿಡಿದಿರೋ ಬಿಜೆಪಿ, ಇದೀಗ ರಾಜ್ಯಪಾಲರ ಮೊರೆ ಹೋಗಿದೆ. ಇವತ್ತು ವಿಶ್ವಾಸಮತ ಯಾಚನೆಯಲ್ಲಿ ದೋಸ್ತಿಗಳಿಗೆ ಹಿನ್ನಡೆ ಫಿಕ್ಸ್ ಅಂತ ಬೀಗುತ್ತಿದ್ದ ಬಿಜೆಪಿ...

ಕೈ ಶಾಸಕನನ್ನು ಅಪಹರಿಸಿ ಬಿಜೆಪಿ ಆಸ್ಪತ್ರೆಗೆ ಸೇರಿಸಿದೆ- ದೋಸ್ತಿ ಆರೋಪ

ಬೆಂಗಳೂರು: ನಿನ್ನೆ ರಾತ್ರಿ ವರೆಗೂ ಆರೋಗ್ಯವಾಗಿದ್ದ ಕಾಗವಾಡದ ಕಾಂಗ್ರೆಸ್ ಶಾಸಕ ಆರೋಗ್ಯದ ನೆಪವೊಡ್ಡಿ ಮುಂಬೈನಲ್ಲಿ ಪ್ರತ್ಯಕ್ಷವಾದ ಘಟನೆ ಇದೀಗ ಮತ್ತೊಂದು ತಿರುವು ಪಡೆದಿದೆ. ಇದರ ಹಿಂದೆ ಬಿಜೆಪಿ ಕೈವಾಡ ನಡೆಸಿ ಶಾಸಕರನ್ನು ಬಲವಂತದಿಂದ ಕರೆದೊಯ್ದಿದೆ ಅಂತ ದೋಸ್ತಿ ಆರೋಪಿಸಿದ್ದಾರೆ. ಇಂದಿನ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರಕ್ಕೆ ಹಿನ್ನಡೆಯುಂಟು ಮಾಡುವ ಉದ್ದೇಶದಿಂದ ಕಾಗವಾಡದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲರನ್ನು...

ವಿಶ್ವಾಸಮತ ಯಾಚನೆ ಮುಂದೂಡಲು ಮನವಿ- ಕೊನೇ ಕ್ಷಣದಲ್ಲಿ ದೋಸ್ತಿ ಗೇಮ್ ಪ್ಲ್ಯಾನ್…!

ಬೆಂಗಳೂರು: ಸರ್ಕಾರದ ಅಳಿವು ಉಳಿವು ನಿರ್ಧಾರ ಮಾಡುವ ಇಂದಿನ ವಿಶ್ವಾಸಮತ ಯಾಚನೆಯಿಂದ ತಪ್ಪಿಸಿಕೊಳ್ಳಲು ದೋಸ್ತಿ ಇನ್ನಿಲ್ಲದ ಕಸರತ್ತು ನಡೆಸಿದೆ. ಬೆಳಗ್ಗೆಯಿಂದ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಕಾದು ಕುಳಿತ ಬಿಜೆಪಿಗೆ ಇದೀಗ ದೋಸ್ತಿ ಶಾಕ್ ನೀಡಲು ತಂತ್ರ ಹೆಣೆದಿದೆ. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಕುರಿತ ಕ್ರಿಯಾ ಲೋಪದ ಬಗ್ಗೆ ಇಂದು ಸದನದಲ್ಲಿ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ....

ವಿಪ್ ವಿಚಾರವಾಗಿ ಬಿಎಸ್ವೈ ಗೊಂದಲ- ಡಿಕೆಶಿ ಕೆಂಡಾಮಂಡಲ- ತಬ್ಬಿಬ್ಬಾದ ಯಡಿಯೂರಪ್ಪ..!

ಬೆಂಗಳೂರು: ಅತೃಪ್ತ ಶಾಸಕರ ಅರ್ಜಿ ಕುರಿತ ಸುಪ್ರೀಂಕೋರ್ಟ್ ಆದೇಶದ ಕ್ರಿಯಾಲೋಪದ ಬಗ್ಗೆ ಸದನದಲ್ಲಿ ಚರ್ಚೆ ಜೋರಾಗಿ ನಡೆದಿದೆ. ಕ್ರಿಯಾಲೋಪ ವಿಚಾರವಾಗಿ ಕಾಂಗ್ರೆಸ್ ಶಾಸಕರು ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಶಾಸಕರಿಗೆ ಜಾರಿಮಾಡಲಾಗಿರುವ ವಿಪ್ ಕುರಿತು ಗೊಂದಲದ ಹೇಳಿಕೆ ನೀಡಿ ಬೆಸ್ತು ಬಿದ್ದ ಪ್ರಸಂಗ ನಡೆಯಿತು. ಸದನದಲ್ಲಿ ವಿಶ್ವಾಸಮತಯಾಚನೆ ಕುರಿತಾಗಿ ಮೈತ್ರಿ ಪಕ್ಷ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img