political news
ಇಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನಿವಾಸದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಜನರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು . ಡಿ ಕೆ ಶಿವಕುಮಾರ್ ಅವರು ಎಲ್ಲಾ ಕಾರ್ಯಕರ್ತರನ್ನು ಕಾಂಗ್ರೆಸ್ ಶಾಲು ಹಾಕುವ ಮೂಲಕ ಪಕ್ಷಕು ಸೇರಿಸಿಕೊಂಡರು .
ಎಲ್ಲಾ ಕಾರ್ಯಕರ್ತರು ನಮ್ಮ ಪಕ್ಷವನ್ನು ಮತ್ತು ನಮ್ಮ ಯೋಜನೆಗಳನ್ನು ಒಪ್ಪಿಕೊಂಡು ಸ್ವ ಇಚ್ಚೆಯಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನು ಬೇರೆ ಪಕ್ಷಗಳ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಸೇರ್ಪಡೆ ಆಗಲಿದ್ದಾರೆ.
ರಾಜ್ಯದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ.ಹಳೆ ಮೈಸೂರು ಭಾಗದಿಂದಾನೂ ಬಂದು ಸೇರ್ಪಡೆಯಾಗುತ್ತಿದ್ದಾರೆ.
ಕೋವಿದ್ ಸಂದರ್ಭದಲ್ಲಿ ಹಲವಾರು ಬಡಜನರು ಸಂಕಷ್ಟಕ್ಕೆ ಸಿಲುಕಿದ್ದರು .ಅನಾದಿ ಕಾಲದಿಂದಲೂ ಕುಲಕಸುಬನ್ನು ಮುಂದುವರಿಸಿಕೊಂಡು ಬಂದವರಿಗೆ ಪರಿಹಾರವನ್ನು ಒಂದೊಂದು ಕುಟುಂಬಕ್ಕೆ ನೀಡಿ 10000ಸಾರವಿರ ಸಹಾಯ ಧನ ನೀಡಿ ಎಂದು ಮನವಿ ಮಾಡಿದ್ದೆವು ಅದನ್ನೂ ಸಹ ಬಿಜೆಪಿ ಪಕ್ಷ ಕೊಡಲಿಲ್ಲ.ಅದೇರೀತಿ ದಿನಬಳಕೆಯ ವಸ್ತುಗಳು ಅಡುಗೆ ಎಣ್ಣೆ, ಗ್ಯಾಸ್ ಇನ್ನೂ ಇತ್ಯಾದಿ ವಸ್ತುಗಳ ಬೆಲೆ ಏರಿಕೆಯಿಂದ ಜನ ನರಳುತಿದ್ದಾರೆ. ಹಾಗಾಗಿ ಇನ್ನು ಮುಂದೆ ರಾಜ್ಯದ ಜನ ನೆಮ್ಮದಿಯಿಂದ ಜೀವನ ನಡೆಸಲಿ ಎನ್ನುವ ದೃಷ್ಟಿಯಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕುಟುಂಬದ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ 2000ದಂತೆ ಪ್ರತಿ ತಿಂಗಳು ನೀಡುತ್ತೇವೆ. ಹಾಗೂ ಸಂಕಷ್ಟದಲ್ಲಿ ಇರುಜನರ ಜೀವನದಲ್ಲಿ ಕತ್ತಲು ಕವಿದಿದೆ ,ಅವರು ಬಾಳಲ್ಲಿ ಬೆಳಕು ನೀಡಲು ತಿಂಗಳಿಗೆ 200ಯುನೀಟ್ನಂತೆ ಪ್ರತಿ ಮನೆಗೆ ನೀಡುತ್ತೇವೆ ಹಾಗೂ ರಾಜ್ಯದ ಜನರ ಹಸಿವನ್ನು ನೀಗಿಸಲು 10ಕೆಜಿ ಅಕ್ಕಿಯನ್ನು ಕೊಡಲಾಗುವುದು.ಎಂದು ಘೋಷಣೆ ಮಾಡಿದ್ದೇವೆ.