Sunday, September 8, 2024

Latest Posts

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಂಸದೆ ಸುಮಲತಾ ಅಸಮದಾನ; ಕಾಂಗ್ರೆಸ್ ಸೇರ್ಪಡೆ ಖಚಿತ..!

- Advertisement -

ಮಂಡ್ಯ: ಲೋಕಸಭೆ ಚುನಾವಣೆಯ ಪ್ರಚಾರ ರಾಜ್ಯದಲ್ಲಿ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಈಗಾಗಲೆ ವಿರೋಧ ಪಕ್ಷದ ಸಾಕಷ್ಟು ಮಾಜಿ ಶಾಸಕರು ಮತ್ತು ಸಚಿವರು, ಸಂಸದರು ಪಕ್ಷ ಬದಲಾವಣೆ ಮಾಡುವಲ್ಲಿ ನಿರತರಾಗಿದ್ದಾರೆ, ಅದೇ ರೀತಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಾಂಗ್ರೆಸ್ ಸೇರುವುದು ಖಚಿತವಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ  ಸ್ಪರ್ಧೆ ಮಾಡಿ ಜೆಡಿಎಸ್ ಪಕ್ಷದ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ದ ಗೆದ್ದು ಅಧಿಕಾರ ನಡೆಸಿದರು. ಆದರೆ ಈಗ ಅದೇ ಸುಮಲತಾ ಬಿಜೆಪಿ ಜೆಡಿಎಸ್ ಮೈತ್ರಿಯಾದ ಕಾರಣ ಇದು ಸುಮಲತಾಗೆ ಇಷ್ಟವಿಲ್ಲ. ಈಗಾಗಲೆ ಮಂಡ್ಯದಿಂದ ಬಿಜೆಪಿ ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ ಎಸ್ ಪುಟ್ಟರಾಜ್ ಅವರನ್ನು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿರುವ ಕಾರಣ ತಮ್ಮ ರಾಜಕೀಯ ಅಸ್ಥಿತ್ವವನ್ನು ಕಾಯ್ದುಕೊಳ್ಳಲು ಸುಮಲತಾ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಈಗಾಗಲೆ ಕಾಂಗ್ರೆಸ್ನ ಹಲವು ನಾಯಕರನ್ನು ಭೇಟಿಯಾಗಿರುವ ಸುಮಲತಾ ಸಿಎಂ ಸಿದ್ದರಾಮಯ್ಯ ಸೇರು ಹಲವು ನಾಯಕರನ್ನು ಭೇಟಿಯಾಗಿದ್ದಾರೆ.

2019 ರಂತೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಹ ಮಂಡ್ಯ  ಕ್ಷೇತ್ರ  ಹೈ ವೋಲ್ಟೇಜ್ ಕಣವಾಗಲಿದೆ . ತನ್ನ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್ ಗೆ ಟಾಂ ಕೊಡಲು ಲೋಕಸಭೆ ಚುನಾವಣೆಗೆಯಲ್ಲಿ ಕಾಂಗ್ರೆಸ್ ನಾಯಕರ ಜೊತೆ ಕೈ ಜೋಡಿಸಲಿದ್ದಾರೆ.

ರಸ್ತೆಯ ಮಧ್ಯೆ ಎತ್ತಿನಗಾಡಿ ನಿಲ್ಲಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಕೈಗೊಂಡ ರೈತರು..!

ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ; ಅಡಿಕೆ ಬೆಳೆಗಾರರ ಅಳಲು

Bigg Boss : ಬಿಗ್ ಬಾಸ್ ಗೆ ಬರ್ತಾರಾ ಡಾಕ್ಟರ್ ಬ್ರೋ ..?

- Advertisement -

Latest Posts

Don't Miss