Tuesday, January 14, 2025

Latest Posts

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಜ್ವರ; ಆಸ್ಪತ್ರೆಗೆ ದಾಖಲು

- Advertisement -

international news

ದೆಹಲಿ (ಮಾ.3): ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ಇದೀಗ ತೀವ್ರ ಜ್ವರದಿಂದ ಇವರನ್ನು ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜ್ವರ ಕಾಣಿಸಿಕೊಂಡ ಬಳಿಕ, ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನುರಿತ ತಜ್ನರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಸ್ಥಿರತೆ ಕಂಡುಬಂದಿದೆ. ಈ ವರ್ಷದಲ್ಲಿ ಸೋನಿಯಾ ಗಾಂಧಿ ಎರಡನೇ ಬಾರಿಗೆ ಆಸ್ಪತ್ರೆ ದಾಖಲಾಗುತ್ತಿದ್ದಾರೆ.

ಇತ್ತೀಚೆಗೆ ಛತ್ತೀಸ್‌ಗಢದ ನಯಾ ರಾಯಪುರದಲ್ಲಿ ನಡೆದ ಪಕ್ಷದ 85ನೇ ಮಹಾಧಿವೇಶನದಲ್ಲಿ ನಿವೃತ್ತಿ ಸುಳಿವು ಕೂಡ ನೀಡಿದ್ದರು. ಸೋನಿಯಾ ಗಾಂಧಿ ತಮ್ಮ ಭಾಷಣದಲ್ಲಿ ಮನಮೋಹನಸಿಂಗ್‌ ಅವರ ಸಮರ್ಥ ನಾಯಕತ್ವ ನನಗೆ ವೈಯಕ್ತಿಕ ತೃಪ್ತಿ ನೀಡಿದೆ. ನನಗೆ ಹೆಚ್ಚು ತೃಪ್ತಿ ನೀಡುವ ಸಂಗತಿ ಯಾವುದೆಂದರೆ, ಕಾಂಗ್ರೆಸ್ಸಿಗೆ ಮಹತ್ತರ ತಿರುವಿನಂತಾಗಿರುವ ಭಾರತ್‌ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್‌್ಸ ಮುಕ್ತಾಯಗೊಳ್ಳಬಹುದು ಎಂಬ ಸಂಗತಿ ಎಂದಿದ್ದರು.

ನಾನು ಮಿನಿಸ್ಟರ್ ಆಗಿ ಕೆಲ್ಸ ಹೋಲ್ಡ್ ಮಾಡಿಲ್ಲ; ಸಚಿವ ಮಾಧುಸ್ವಾಮಿ ಹೇಳಿಕೆ

ಬೆಂಗ್ಳೂರಿಗೆ ಇಂದು ಅಮಿತ್ ಶಾ ಆಗಮನ

 

- Advertisement -

Latest Posts

Don't Miss