ಬೆಂಗಳೂರು: ಅತೃಪ್ತ ಶಾಸಕರ ಪೈಕಿ ರಾಮಲಿಂಗಾರೆಡ್ಡಿ ಕಾಂಗ್ರೆಸ್ ನಲ್ಲೇ ಮುಂದುವರಿಯಲು ತೀರ್ಮಾನಿಸಿದ್ದು, ರಾಜೀನಾಮೆ ಪಡೆಯುವ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ರಾಮಲಿಂಗಾರೆಡ್ಡಿ, ನಾನು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯುವೆ. ಇನ್ನು ನನ್ನ ರಾಜೀನಾಮೆ ಹಿಂಪಡೆಯುವ ವಿಚಾರದ ಬಗ್ಗೆ ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ಮಾಧ್ಯಮದ ಮುಖಾಂತರ ನನ್ನ ನಿರ್ಧಾರವನ್ನು ಸ್ಪೀಕರ್ ಗೆ ತಿಳಿಸಿದ್ರೆ ಅದು ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಇಂದು ಅಥವಾ ನಾಳೆ ನಾನು ಸ್ಪೀಕರ್ ರಮೇಶ್ ಕುಮಾರ್ ರನ್ನು ಭೇಟಿ ಮಾಡಿ ನನ್ನ ನಿರ್ಧಾರ ತಿಳಿಸುವೆ ಎಂದರು.
ಇನ್ನು ನಾಳೆ ವಿಶ್ವಾಸಮತ ಯಾಚನೆಗೆ ಹಾಜರಾಗುವ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ನಾನು ನಾಳೆ ಸದನಕ್ಕೆ ಹಾಜರಾಗ್ತೀನಿ ಎಂದರು. ಅಲ್ಲದೆ ನಾನು ಕಾಂಗ್ರೆಸ್ ನಲ್ಲೇ ಮುಂದುವರಿಯಲಿದ್ದೇನೆ ಅನ್ನೋ ಮಾತನ್ನು ನೀವೇ ಅರ್ಥ ಮಾಡಿಕೊಳ್ಳಿ ಅಂತ ತಮ್ಮ ರಾಜೀನಾಮೆ ಹಿಂಪಡೆಯೋ ಬಗ್ಗೆ ರೆಡ್ಡಿ ಇದೇ ವೇಳೆ ಸುಳಿವು ನೀಡಿದ್ದಾರೆ.
ಜು 15ರಂದೇ ಶಾಸಕ ರಾಮಲಿಂಗಾ ರೆಡ್ಡಿ ರಾಜೀನಾಮೆ ವಿಚಾರಣೆಗೆ ಸ್ಪೀಕರ್ ಎದುರು ಹಾಜರಾಗಬೇಕಿತ್ತು. ಆದರೆ ಖುದ್ದು ರಾಮಲಿಂಗಾರೆಡ್ಡಿ ಅಂದು ಗೈರುಹಾಜರಿಯಾಗಿದ್ರು. ಹೀಗಾಗಿ ಇಂದು ಅಥವಾ ನಾಳೆ ಸ್ಪೀಕರ್ ರಾಮಲಿಂಗಾ ರೆಡ್ಡಿ ವಿಚಾರಣೆ ನಡೆಸಲಿದ್ದಾರೆ.
ಬಿಎಸ್ವೈ ಗೇಮ್ ಪ್ಲ್ಯಾನ ಸಕ್ಸಸ್ ಆಗುತ್ತಾ.? ಮಿಸ್ ಮಾಡದೇ ಈ ವಿಡಿಯೋ ನೋಡಿ