Friday, June 2, 2023

Latest Posts

‘ಗನ್ ಪಾಯಿಂಟ್ ಇಡೋ ತಾಕತ್ತು ಯಾರಿಗೂ ಇಲ್ಲ’- ಡಿಕೆಶಿಗೆ ಅತೃಪ್ತ ಶಾಸಕ ತಿರುಗೇಟು

- Advertisement -

ಮುಂಬೈ: ಅತೃಪ್ತ ಶಾಸಕರನ್ನು ಬಿಜೆಪಿ ಗನ್ ಪಾಯಿಂಟ್ ನಲ್ಲಿ ಇರಿಸಿದೆ ಎನ್ನುವ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕೈ ಶಾಸಕ ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ಮುಂಬೈನ ಸೊಫಿಟೆಲ್ ಹೋಟೆಲ್ ನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್, ರಾಜೀನಾಮೆ ನೀಡಿರೋ ನಾವೆಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ. ನಾಯಕರು ನಮ್ಮ ಸಮಸ್ಯೆಗಳನ್ನು ಆಲಿಸದೆ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ರು. ಹೀಗಾಗಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಾವು ದೃಢ ನಿರ್ಧಾರ ತೆಗೆದುಕೊಂಡು ರಾಜೀನಾಮೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ನಾವು ರಾಜೀನಾಮೆ ಹಿಂಪಡೆಯೋ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ರು. ಅಲ್ಲದೆ ನಮಗೆ ಬಿಜೆಪಿಯವರಾಗಲೀ, ಯಾರೇ ಆಗಲಿ ಗನ್ ಪಾಯಿಂಟ್ ಇಡೋ ತಾಕತ್ತಿಲ್ಲ. ಅಂತಹ ಕೆಲಸಗಳನ್ನು ನಾವು ಎಂದೂ ಮಾಡಿಲ್ಲ ಅಂತ ಸೋಮಶೇಖರ್ ಸಚಿವ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.

ಯಾರಾಗ್ತಾರೆ ಮುಂದಿನ ಸಿಎಂ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=Q0csvcKK3qc
- Advertisement -

Latest Posts

Don't Miss