Wednesday, July 24, 2024

Operation BJP

‘ಶಾಸಕರು ಸಗಣಿ ತಿಂದು ಮುಂಬೈ ಸೇರಿದ್ದಾರೆ’- ಕೈಶಾಸಕ ಕಿಡಿ

ದಾವಣಗೆರೆ: ರಾಜ್ಯದಲ್ಲಿ ಆಪರೇಷನ್ ಕಮಲ ಕುರಿತು ಕಾಂಗ್ರೆಸ್ ನ ಹಿರಿಯ ಶಾಸಕ ಕಿಡಿ ಕಾರಿದ್ದಾರೆ. ಬಿಜೆಪಿ ಆಮಿಷಕ್ಕೊಳಗಾಗಿ ಸಗಣಿ ತಿಂದು ಮುಂಬೈಗೆ ಹೋಗಿದ್ದಾರೆ ಅಂತ ಕೈ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಅತೃಪ್ತ ಶಾಸಕರು ಬಿಜೆಪಿ ಆಮಿಷಗಳಿಗೆ ಬಲಿಯಾಗಿದ್ದಾರಾ ಅನ್ನೋ ಪ್ರಶ್ನೆಗೆ...

‘ಕೈ-ಜೆಡಿಎಸ್ ಶಾಸಕರ ತಂಟೆಗೆ ಹೋಗಿಲ್ಲ- ಪಕ್ಷೇತರರ ಬೆಂಬಲ ಮಾತ್ರ ಕೇಳಿದ್ವಿ’- ಮಾಜಿ ಡಿಸಿಎಂ ಅಶೋಕ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಎದುರಾಗಿರುವ ಬಿಕ್ಕಟ್ಟಿಗೆ ಬಿಜೆಪಿ ಕಾರಣ ಅಲ್ಲವೇ ಅಲ್ಲ. ಆದ್ರೆ ಪಕ್ಷೇತರರ ಬೆಂಬಲ ಮಾತ್ರ ಕೇಳಿದೆವು ಅಂತ ಮಾಜಿ ಡಿಸಿಎಂ, ಬಿಜೆಪಿ ಶಾಸಕ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಆಶೋಕ್,ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಡಿಕೆಶಿ ಅತೃಪ್ತರ ಸಮಸ್ಯೆ ಆಲಿಸದೆ ನಿರ್ಲಕ್ಷ್ಯ ಮಾಡಿದ್ದೇ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾಗಲು ಕಾರಣವಾಗಿದೆ....

‘ಮನೇಲಿದ್ರೂ ಪರವಾಗಿಲ್ಲ, ರಾಜೀನಾಮೆ ಹಿಂಪಡೆಯಲ್ಲ’- ಅತೃಪ್ತ ಶಾಸಕ ಭೈರತಿ ಬಸವರಾಜ್ ಪಟ್ಟು

ಬೆಂಗಳೂರು: ತಮ್ಮನ್ನು ದೋಸ್ತಿ ನಾಯಕರು ನಿರ್ಲಕ್ಷ್ಯ ಮಾಡ್ತಿದ್ದಾರೆ. ಇದ್ರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಅಂತ ಆರೋಪಿಸಿ ಅತೃಪ್ತ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜ್, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯೋದಿಲ್ಲ ಅಂತ ಪಟ್ಟುಹಿಡಿದಿದ್ದಾರೆ. ಮುಂಬೈನ ಸೊಫಿಟೆಲ್ ಹೋಟೆಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬೈರತಿ ಬಸವರಾಜ್, ನನ್ನ ಕಷ್ಟಗಳನ್ನು ಹೇಳಿಕೊಂಡರೂ ಸರ್ಕಾರದಿಂದ ಯಾವುದೇ ಸ್ಪಂದನೆ...

‘ಗನ್ ಪಾಯಿಂಟ್ ಇಡೋ ತಾಕತ್ತು ಯಾರಿಗೂ ಇಲ್ಲ’- ಡಿಕೆಶಿಗೆ ಅತೃಪ್ತ ಶಾಸಕ ತಿರುಗೇಟು

ಮುಂಬೈ: ಅತೃಪ್ತ ಶಾಸಕರನ್ನು ಬಿಜೆಪಿ ಗನ್ ಪಾಯಿಂಟ್ ನಲ್ಲಿ ಇರಿಸಿದೆ ಎನ್ನುವ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕೈ ಶಾಸಕ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಮುಂಬೈನ ಸೊಫಿಟೆಲ್ ಹೋಟೆಲ್ ನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್, ರಾಜೀನಾಮೆ ನೀಡಿರೋ ನಾವೆಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ. ನಾಯಕರು ನಮ್ಮ ಸಮಸ್ಯೆಗಳನ್ನು ಆಲಿಸದೆ ನಮ್ಮನ್ನು ನಿರ್ಲಕ್ಷ್ಯ...

ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನ- 102ಕ್ಕಿಳಿದ ದೋಸ್ತಿ ಸಂಖ್ಯಾಬಲ..!

ಬೆಂಗಳೂರು: ಕೈ ಶಾಸಕ ರೋಷನ್ ಬೇಗ್ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನವಾಗಿದೆ. ಹೀಗಾಗಿ ದೋಸ್ತಿಗಳು ಮತ್ತೊಂದು ಸ್ಥಾನ ಕಳೆದುಕೊಂಡು ಸಂಖ್ಯಾಬಲ ಇಳಿಮುಖವಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಹರಿಹಾಯ್ದು ಮುನಿಸಿಕೊಂಡು ಬಂಡಾಯವೆದ್ದಿದ್ದ ಬೆಂಗಳೂರಿನ ಶಿವಾಜಿನಗರ ಶಾಸಕ ರೋಷನ್ ಬೇಗ್ ಇದೀಗ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರದ ಸಂಖ್ಯಾಬಲ...

‘ರಾಜೀನಾಮೆ ವಾಪಸ್ ಪಡೆಯದಿದ್ರೆ ಪರಿಣಾಮ ಎದುರಿಸಿ’- ಅತೃಪ್ತ ಶಾಸಕರಿಗೆ ಸಿದ್ದು ಫೈನಲ್ ವಾರ್ನಿಂಗ್..!

ಬೆಂಗಳೂರು: ರಾಜೀನಾಮೆ ನೀಡಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರಿಗೆ ಸಿಎಲ್ ಪಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ರಾಜೀನಾಮೆ ವಾಪಸ್ ಪಡೆಯಿರಿ ಇಲ್ಲದಿದ್ರೆ ಮುಂದಾಗೋ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಅಂತ ವಾರ್ನಿಂಗ್ ನೀಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಮೈತ್ರಿ ಸರ್ಕಾರವನ್ನು...

‘ಮಂತ್ರಿಗಿರಿ ಕೊಡ್ತೀವಿ, ಬಿಜೆಪಿ ಮಾತ್ರ ಸೇರಬೇಡಿ’- ಅತೃಪ್ತರಲ್ಲಿ ಸಿದ್ದು ಮನವಿ

ಬೆಂಗಳೂರು: ಮೈತ್ರಿ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿ ದೋಸ್ತಿಗಳನ್ನು ಪೇಚಾಟಕ್ಕೆ ಸಿಲುಕಿಸಿರೋ ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭರ್ಜರಿ ಆಫರ್ ನೀಡಿದ್ದಾರೆ. ಬಿಜೆಪಿಯ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ನಿಮಗೆ ಸಚಿವ ಸ್ಥಾನ ನೀಡ್ತೇವೆ ಅಂತ ಅತೃಪ್ತರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಶಾಸಕರು ಮತ್ತು ಸಚಿವರುಗಳಿಗೆ ಉಪಹಾರಕೂಟದ ಹೆಸರಿನಲ್ಲಿ ಆಹ್ವಾನಿಸಿ ಅವರಿಂದ ಸಾಮೂಹಿಕ ರಾಜೀನಾಮೆ...

ರೆಸಾರ್ಟ್ ಸೇರಲಿರುವ ಜೆಡಿಎಸ್ ಶಾಸಕರು..!

ಮಡಿಕೇರಿ: ರಾಜ್ಯದಲ್ಲಿ ನಡೆಯುತ್ತಿರೋ ರಾಜಕೀಯ ಮೇಲಾಟಗಳಿಂದ ದೋಸ್ತಿ ನಾಯಕರು ಹೈರಾಣಾಗಿದ್ದಾರೆ. ಇದೀಗ ನಿಷ್ಠಾವಂತರನ್ನು ತಮ್ಮ ಬಳಿಯೇ ಉಳಿಸಿಕೊಳ್ಳೋದಕ್ಕೆ ಜೆಡಿಎಸ್ ಮುಂದಾಗಿದ್ದು ತನ್ನ ಶಾಸಕರಿಗಾಗಿ ರೆಸಾರ್ಟ್ ನಿಗದಿಪಡಿಸಿದ್ದು, ಈಗಾಗಲೇ ರೂಂಗಳನ್ನು ಕೂಡ ಬುಕ್ ಮಾಡಿದೆ. ತೆರೆ ಮರೆಯಲ್ಲಿ ಬಿಜೆಪಿ ನೆಡೆಸ್ತಿರೋ ಆಪರೇಷನ್ ಕಮಲಕ್ಕೆ ಬೆದರಿದ ಮೈತ್ರಿ ನಾಯಕರು ಇದೀಗ ತಮ್ಮ ಬಳಿಯಿರೋ ಶಾಸಕರನ್ನು ಬಿಜೆಪಿ ಕೈಗೆ ಸಿಗದಂತೆ...

‘ಅಮಿತ್ ಶಾ, ಮೋದಿ ಸೇರಿ ಷಡ್ಯಂತ್ರ ಮಾಡ್ತಿದ್ದಾರೆ’- ಸಿದ್ದು ಆರೋಪ

ಬೆಂಗಳೂರು: ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ. ರಾಜ್ಯ ಸರ್ಕಾರದ ವಿರುದ್ಧ ಅಮಿತ್ ಶಾ ಮತ್ತು ನರೇಂದ್ರ ಮೋದಿ ಸೇರಿ ಷಡ್ಯಂತ್ರ ನಡೆಸ್ತಿದ್ದಾರೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಆನಂದ್ ಸಿಂಗ್ ರಾಜೀನಾಮೆ ನೀಡಿರೋ ಹಿಂದೆ ಬಿಜೆಪಿಯ ಕೈವಾಡ ಇದೆ. ಮೈತ್ರಿ ಸರ್ಕಾರದ ವಿರುದ್ಧ...

ಸದ್ದಿಲ್ಲದೆ ನಡೀತಿದೆ ಆಪರೇಷನ್ ಕಮಲ- ಸಿಎಂ ಕುಮಾರಸ್ವಾಮಿ ಹೊಸ ಬಾಂಬ್..!

ಬೆಂಗಳೂರು: ಮೈತ್ರಿ ಸರ್ಕಾರವನ್ನು ಪತನಗೊಳಿಸೋ ನಿಟ್ಟಿನಲ್ಲಿ ಬಿಜೆಪಿ ಮೈತ್ರಿ ಶಾಸಕರಿಗೆ 10 ಕೋಟಿ ನೀಡುವ ಆಮಿಷವೊಡ್ಡಿ ಸೆಳೆಯಲು ಡೀಲ್ ಮಾಡ್ತಿದೆ ಅಂತ ಸಿಎಂ ಕುಮಾರಸ್ವಾಮಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ರಾತ್ರಿ 11 ಗಂಟೆಗೆ ಬಿಜೆಪಿಯ ಪ್ರಮುಖ ಮುಖಂಡರು ಮೈತ್ರಿ ಶಾಸಕರಿಗೆ ಕರೆ ಮಾಡಿ ಈಗಾಗಲೇ ಮೈತ್ರಿ ಪಕ್ಷದ 10...
- Advertisement -spot_img

Latest News

ಕೇಂದ್ರ ಬಜೆಟ್ ಮಂಡನೆ: ಕನ್ನಡಿಗರಿಗೆ ಮತ್ತದೇ ಚೊಂಬು ಕೊಟ್ಟಿದ್ದಾರೆಂದ ಸಿಎಂ ಸಿದ್ದರಾಮಯ್ಯ

Political News: ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಬಿಜೆಪಿ ರಾಜ್ಯದ ಜನತೆಗೆ ಚೊಂಬು ನೀಡಿದೆ ಎಂದು ಸಿಎಂ...
- Advertisement -spot_img