Mandya News: ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದಿಶಾ ಸಭೆ ನಡೆಸಿದ್ದು, ಜಿಲ್ಲೆಯ ಕೇಂದ್ರ ಪುರಸ್ಕೃತ ಅಭಿವೃದ್ಧಿ ಕಾರ್ಯಕ್ರಮ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ಶಾಸಕರಾದ ಗಣಿಗ ರವಿಕುಮಾರ್, ಹೆಚ್.ಟಿ.ಮಂಜು, ಡಿಸಿ ಡಾ.ಕುಮಾರ, ಎಸ್ಪಿ ಡಾ.ವಿಜೆ.ಶೋಭಾರಾಣಿ, ಸಿಇಓ ಕೆ.ಆರ್.ನಂದಿನಿ, ಎಡಿಸಿ ಶಿವಾನಂದ ಮೂರ್ತಿ, ಪರಿಷತ್ತ್ ಸದಸ್ಯ
, ಮಾಜಿ ಸಚಿವ ಸಿಎಸ್.ಪುಟ್ಟರಾಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿ ಅಧಿಕಾರಿಗಳು ಭಾಗಿಯಾಗಿದ್ದರು.
ಇನ್ನು ಸಭೆಗೂ ಮುನ್ನ ಸಾರ್ವಜನಿಕರು ತಮ್ಮ ಕೆಲಸದ ಬಗ್ಗೆ ಕೇಂದ್ರ ಸಚಿವರ ಬಳಿ ಮನವಿ ಮಾಡಿದ್ದು, ಕುಮಾರಸ್ವಾಮಿ ಜನರ ಅಹವಾಲು ಸ್ವೀಕಾರ ಮಾಡಿದ್ದಾರೆ.
ಇನ್ನು ಇದೇ ವೇಳೆ ಕಾಂಗ್ರೆಸ್ ಶಾಸಕರು ಅಸಹಕಾರ ಚಳುವಳಿ ಮುಂದುವರಿಸಿದ್ದು, ಸಭೆಗೆ ಗೈರಾಗಿದ್ದಾರೆ. ಮಂಡ್ಯ ಶಾಸಕ ಗಾಣಿಗ ರವಿ ಕುಮಾರ್ ಬಿಟ್ಟು ಉಳಿದೆಲ್ಲ ಶಾಸಕರು ಸಭೆಗೆ ಬರಲಿಲ್ಲ. ಈ ಹಿಂದಿನ 4 ದಿಶಾ ಸಭೆಯಿಂದಲೂ ಕಾಂಗ್ರೆಸ್ ಶಾಸಕರು ಗೈರಾಗುತ್ತಿದ್ದು, ಜೆಡಿಎಸ್- ಕಾಂಗ್ರೆಸ್ ವಾರ್ ಮುಗಿದಂತೆ ಕಾಣುತ್ತಿಲ್ಲ.
ಈ ಹಿಂದೆ ಸುಮಲತಾ ಸಭೆ ನಡೆಸುತ್ತಿದ್ದಾಗ ಜೆಡಿಎಸ್ ಶಾಸಕರು ಗೈರಾಗುತ್ತಿದ್ದರು. ಇದೀಗ ಕುಮಾರಸ್ವಾಮಿ ನೇತೃತ್ವದ ಸಭೆಗೆ ಕಾಂಗ್ರೆಸ್ ಶಾಕರು ಅದೇ ನಡೆ ಮುಂದುವರೆಸಿದ್ದು, ಕಾಂಗ್ರೆಸ್ ಶಾಸಕರು ಸಭೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ.




