Political News : ಕಾಂಗ್ರೆಸ್ ಪಾಲಯದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ ಸ್ಥಾನಮಾನದ ಚರ್ಚೆ. ಆದರೆ ಸಚಿವರ ಸ್ಥಾನ ಬದಲಾವಣೆಯೋ ಮುಖ್ಯಮಂತ್ರಿ ಸ್ಥಾನ ಬದಲಾವಣೆಯೋ ಅನ್ನೋ ಪ್ರಶ್ನೆ ಇದೀಗ ಎದುರಾಗಿದೆ.
ಆಹಾರ ಸಚಿವ ಮುನಿಯಪ್ಪರಿಂದ ಬಂದ ಈ ಪ್ರಸ್ತಾಪ ಕೇವಲ ಸಚಿವರದ್ದಾ ಅಥವಾ ಸಿಎಂ, ಡಿಸಿಎಂ ಸ್ಥಾನದ ಬದಲಾವಣೆಯ ಪ್ರಸ್ತಾಪವೂ ಮುನಿಯಪ್ಪ ಮಾತಿನ ಹಿಂದೆ ಅಡಗಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಯಾಕಂದ್ರೆ ಸಚಿವ ಮುನಿಯಪ್ಪ, ಸಿಎಂ, ಡಿಸಿಎಂ ಮಾಡುವುದು ಹೈಕಮಾಂಡ್ ಎನ್ನುವ ವಿಚಾರವನ್ನೂ ಹೇಳಿದ್ದಾರೆ.
ಸಿಎಂ, ಡಿಸಿಎಂ ಮಾಡುವುದು ಹೈಕಮಾಂಡ್ ಎನ್ನುವ ಮೂಲಕ ಮುನಿಯಪ್ಪ, ಪರೋಕ್ಷವಾಗಿ ಹೈಕಮಾಂಡ್ ಮುಂದೆ ಬೇರೆ ಯಾರ ಕಸರತ್ತು ಕೂಡ ನಡೆಯಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ. ಕೇವಲ ನಾಲ್ಕು ಗೋಡೆಗಳ ನಡುವೆ ಹೈಕಮಾಂಡ್ ಸಮ್ಮುಖದಲ್ಲಿ ಆಗಿದೆ ಎನ್ನಲಾದ ಮಾತುಕತೆಗೆ ಇದೀಗ ಹಿರಿಯ ಸಚಿವರ ಹೇಳಿಕೆಗಳು ಅಧಿಕಾರ ಹಂಚಿಕೆಯಾಗುವುದು ಸತ್ಯ ಎನ್ನುವ ಮಾತಿಗೆ ರೆಕ್ಕೆ ಪುಕ್ಕಗಳು ಬರುವಂತೆ ಮಾಡಿವೆ.
ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ನಾಯಕ, ಸಚಿವ ಮುನಿಯಪ್ಪ ಸಿಎಂ, ಡಿಸಿಎಂ ಎದುರೇ ಹಿರಿಯ ಸಚಿವರು ಅಧಿಕಾರ ಬಿಟ್ಟುಕೊಡುವ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಇದೀಗ ಪ್ರಶ್ನೆ ಎದುರಾಗಿದೆ.
Basavaraj Bommai: ಕಾಂಗ್ರೆಸ್ ದೇಶವನ್ನು ಒಡೆದಿದೆ, ಈಗ ಭಾರತ ಜೋಡೋ ಯಾತ್ರೆ ಬಗ್ಗೆ ಮಾತನಾಡುತ್ತಿದೆ..!
DK Shivakumar: ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ತಡೆಯಲು ಆಗುವುದಿಲ್ಲ: