ವಿಜಯನಗರ: ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯಿತ ನಾಯಕರನ್ನು ಕಡೆಗಣೆಗೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿರುವ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷನಾದ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಶಾಮನೂರು ಶಿವಶಂಕ್ರಪ್ಪ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಅವರು ಹೇಳಿಕೆ ಕೊಟ್ಟಿದ್ದಾರೆ ಅಂದ್ರೆ ಅವರು ಸುಮ್ಮನೆ ಹೇಳಿಕೆ ಕೊಡೋರಲ್ಲ ಅವರು ಹೇಳಿದ್ದಾರೆ ಅಂದರೆ ಉದ್ದೇಶ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಏನಾಗುತ್ತದೆ ಅನ್ನೋ ವಿಚಾರ ನಂಗೆ ಗೊತ್ತಿಲ್ಲ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯಿತ ಅಧಿಕಾರಿಗಳನ್ನ ಕಡೆಗಣನೆ ಆಗುತ್ತದೆ.
ಈ ವಿಚಾರ ಕುರಿತಾಗಿ ನೀವು ಕಾಂಗ್ರೆಸ್ ಅವರನ್ನ ಕೇಳಿ ಎಂದು ಹೇಳಿದರು. ನಾನು ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ಏನನ್ನು ಹೇಳೊದಿಲ್ಲಶಾಮನೂರು ಶಿವಶಂಕರಪ್ಪನವರು ಸತ್ಯಾಸತ್ಯತೆ ಬಗ್ಗೆ ಮಾತನಾಡುತ್ತಾರೆ ಎಂದು ಬಿವೈ ವಿಜಯೇಂದ್ರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ವಿಪಕ್ಷ ನಾಯಕ ಆಯ್ಕೆ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿದ ಮಾದ್ಯಮದವರಿಗೆ ಉತ್ತರ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ, ವಿಪಕ್ಷ ನಾಯಕರ ಸ್ಥಾನ ಹೈಕಮಾಂಡ್ ಅಂಗಳದಲ್ಲಿದೆ ಶೀಘ್ರದಲ್ಲೇ ತೀರ್ಮಾನ ಮಾಡುತ್ತಾರೆ ಕಾಂಗ್ರೆಸ್ ನಾಯಕರು ಏನೇ ಮಾಡಿದ್ರೂ, ಬಿಜೆಪಿಗೆ ಜನರು ಆಶೀರ್ವಾದ ಮಾಡ್ತಾರೆ. ನಾವು 25 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಇನ್ನು ಎಂಪಿ ಚುನಾವಣೆ ನಿಮ್ಮ ನೇತೃತ್ವದಲ್ಲಿ ನಡೆಯುತ್ತದೆಯಂತೆ ಎನ್ನುವ ಕುರಿತು ನನಗೆ ಗೊತ್ತಿಲ್ಲ ಎಲ್ಲವನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಜನ ಬಿಜೆಪಿಗೆ ಆಶಿರ್ವಾದ ಮಾಡುತ್ತಾರೆ. ಮೂರನೇ ಬಾರಿ ರಾಷ್ಟ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ. ಎಂದು ಭವಿಷ್ಯ ನುಡಿದರು.
ಗೊಂದಲದ ಗೂಡಾದ ಪಾಲಿಕೆ ಸಾಮಾನ್ಯ ಸಭೆ: ಒಂದು ಕಡೆ ಪ್ರತಿಭಟನೆ ಮತ್ತೊಂದು ಕಡೆ ಸಭೆ ಮುಂದೂಡಿಕೆ..!