Monday, January 6, 2025

Latest Posts

‘ಶಾಸಕರು ಸಗಣಿ ತಿಂದು ಮುಂಬೈ ಸೇರಿದ್ದಾರೆ’- ಕೈಶಾಸಕ ಕಿಡಿ

- Advertisement -

ದಾವಣಗೆರೆ: ರಾಜ್ಯದಲ್ಲಿ ಆಪರೇಷನ್ ಕಮಲ ಕುರಿತು ಕಾಂಗ್ರೆಸ್ ನ ಹಿರಿಯ ಶಾಸಕ ಕಿಡಿ ಕಾರಿದ್ದಾರೆ. ಬಿಜೆಪಿ ಆಮಿಷಕ್ಕೊಳಗಾಗಿ ಸಗಣಿ ತಿಂದು ಮುಂಬೈಗೆ ಹೋಗಿದ್ದಾರೆ ಅಂತ ಕೈ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಅತೃಪ್ತ ಶಾಸಕರು ಬಿಜೆಪಿ ಆಮಿಷಗಳಿಗೆ ಬಲಿಯಾಗಿದ್ದಾರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ್ರು. ಶಾಸಕರು ಸಗಣಿ ತಿಂದು ಮುಂಬೈಗೆ ಹೋಗಿದ್ದಾರೆ. ಇನ್ನು ಅವರೆಲ್ಲರೂ ವಾಪಸ್ ಬರ್ತಾರೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಅತೃಪ್ತ ಶಾಸಕರು ವಾಪಸ್ ಬಂದರೆ ಸೋಮವಾರ ನಡೆಯಲಿರೋ ವಿಶ್ವಾಸಮತ ಯಾಚನೆಯಲ್ಲಿ ಗೆಲ್ಲುತ್ತೇವೆ. ಬರಲಿಲ್ಲವೆಂದರೆ ನಾವು ಸೋಲುತ್ತೇವೆ ಎಂದರು.

ಇನ್ನು ಸರ್ಕಾರಕ್ಕೆ ಬಹುಮತವಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪದೇ ಪದೇ ಹೇಳಿಕೆ ನೀಡುತ್ತಿರುವ ಬಗ್ಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ದುಡ್ಡು ಕೊಟ್ಟು ನಮ್ಮ ಶಾಸಕರನ್ನು ಕೂಡಿಹಾಕಿಕೊಂಡಿರೋದ್ರಿಂದ ಬಿಜೆಪಿಯವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ನಮಗೆ ಮೋಸ ಮಾಡಿರುವ ಅತೃಪ್ತ ಶಾಸಕರು ಒಂದು ದಿನ ಬಿಜೆಪಿಯವರಿಗೂ ಮೋಸ ಮಾಡೇ ಮಾಡ್ತಾರೆ ಅಂತ ಇದೇ ವೇಳೆ ಶಾಸಕ ಶಾಮನೂರು ಇದೇ ವೇಳೆ ಭವಿಷ್ಯ ನುಡಿದಿದ್ದಾರೆ.

- Advertisement -

Latest Posts

Don't Miss