ಬೆಂಗಳೂರು: ರಾಜ್ಯ ಸರ್ಕಾರದ ಮನಸ್ಥಿತಿ ಏನು ಎಂಬುದು ಈಗಿನ ಬದಲಾವಣೆ ಪಠ್ಯಪುಸ್ತಕದಲ್ಲಿ ತೋರಿಸುತ್ತಿದೆ. ಆದ್ರೇ.., ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಹಾಕಬೇಕು. ಹಳೇ ಪಠ್ಯದಲ್ಲೇ ಶಿಕ್ಷಣ ಮುಂದುವರಿಯ ಬೇಕು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನ ಶಿಲ್ಪಿ, ಅವರ ತಂದೆ, ಹುಟ್ಟಿದ ಊರು ಎಲ್ಲಾ ತೆಗೆಯಲಾಗಿದೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾತ್ತೇವೆ. ಇಂದು ಭಾರತದ ಪುಣ್ಯ ಭೂಮಿಗೆ ಮಾಡಿದ ಅಪಮಾನವಾಗಿದೆ. ಅಂಬೇಡ್ಕರ್ ಈ ದೇಶದ ಆಸ್ತಿ ಎಂದು ಹೇಳಿದರು.
ಬಸವಣ್ಣನವರ ವಿಚಾರಗಳನ್ನ ತಿರುಚಲು ಸಾಧ್ಯವೇ? ಬಸವಣ್ಣನವರ ವಿಚಾರ ಗಮನ ಹರಿಸುವುದಾಗಿ ಸಿಎಂ ಹೇಳಿದ್ದಾರೆ. ಬಸವಣ್ಣನವರ ವಿಚಾರಗಳನ್ನ 8-9ನೇ ತರಗತಿಯ ಪಠ್ಯದಲ್ಲಿ ಜನಿವಾರ ವಿಚಾರ ಬರ್ತಿದೆ. ಅನೇಕ ಮಹತ್ವದ ಅಂಶಗಳನ್ನು ತಗೆದು, ತಿರುಚಿ ಅಭಿಪ್ರಾಯ ಬರುವಂತೆ ಮಾಡಲಾಗಿದೆ. ಏನೇನೋ ಮಾಡಲಾಗಿದೆ ಎಂದು ಕಿಡಿಕಾರಿದರು.
ಕುವೆಂಪುರವರ ಗೀತೆಯನ್ನ ಪ್ರತಿ ಕಾರ್ಯಕ್ರಮದಲ್ಲಿ ಹಾಡಲಾಗ್ತಿದೆ. ಬಿಜೆಪಿಯವರ ಮನಸ್ಥಿತಿ ಸರಿ ಇಲ್ಲ. ನಾರಾಯಣ ಗುರು ಸ್ಥಬ್ದ ಚಿತ್ರ ತೆಗೆದಾಗ ಯಾರೂ ಮಾತಾಡಲಿಲ್ಲ. ಗೌತಮ ಬುದ್ಧ, ಮಹಾವೀರರ ಬಗ್ಗೆ ಏಕವಚನ ಬಳಸಲಾಗಿದೆ. ಈ ಹಿನ್ನಲೆಯಲ್ಲಿಯೇ ಜೂನ್ 9ರಂದು ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿಯಲ್ಲಿ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.