Tuesday, September 23, 2025

Latest Posts

ಹಿಂದೂ ಧರ್ಮ ಒಡೆಯುವ ಹುನ್ನಾರ

- Advertisement -

ಜಾತಿಗಣತಿ ಆರಂಭವಾದ್ರೂ ಟೀಕೆ-ಟಿಪ್ಪಣಿಗಳು ಮಾತ್ರ ನಿಂತಿಲ್ಲ. ಜಾತಿಗಣತಿ ನೆಪದಲ್ಲಿ ಹಿಂದೂ ಧರ್ಮವನ್ನು ಒಡೆಯುವ ಕೆಲಸಕ್ಕೆ, ರಾಜ್ಯ ಕಾಂಗ್ರೆಸ್‌ ಮುಂದಾಗಿದೆ. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಶರನ್ನವರಾತ್ರಿ ಧರ್ಮ ಸಮ್ಮೇಳನದಲ್ಲಿ, ರಾಜ್ಯ ಸರ್ಕಾರದ ವಿರುದ್ಧ ಬಿವೈವಿ ಕಿಡಿಕಾರಿದ್ದಾರೆ.
ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನ ಕಾಂಗ್ರೆಸ್ ಸರ್ಕಾರ‌ ಮಾಡುತ್ತಿದೆ.
ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ.

ರಾಜ್ಯದ ಜನ ಬುದ್ಧಿ ಕಲಿಸ್ತಾರೆ. ಯಾವ ರಾಜ್ಯದಲ್ಲೂ ಇಂತಹ ವಾತಾವರಣ ಇಲ್ಲ. ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ‌ ಮಾಡುವ ಅಧಿಕಾರವಿಲ್ಲ. ಸಮೀಕ್ಷೆ ನೆಪದಲ್ಲಿ ಹಿಂದೂ ಧರ್ಮವನ್ನು, ಒಡೆಯುವ ಕೆಲಸಕ್ಕೆ ಮುಂದಾಗ್ತಿದ್ದಾರೆ. ಜಾತಿ ಜಾತಿಗಳನ್ನ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಆದವರು ರಾಜ್ಯದ ಅಭಿವೃದ್ಧಿಯತ್ತ ಚಿಂತನೆ‌ ಮಾಡ್ಬೇಕು. ಅಭಿವೃದ್ಧಿ ಮರೆತು ಗೊಂದಲ ಸೃಷ್ಟಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಧರ್ಮಸ್ಥಳ ಬುರಡೆ ರಹಸ್ಯ ಪ್ರಕರಣ, ದಸರಾ ವಿಚಾರದಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಅಂತಾ ವಿಜಯೇಂದ್ರ ಆರೋಪಿಸಿದ್ರು.

ಇನ್ನು, ಸಮ್ಮೇಳನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಬಿ.ವೈ. ವಿಜಯೇಂದ್ರ, ಜಿಎಸ್‌ಟಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವಿರೋಧಕ್ಕೂ ಟಾಂಗ್‌ ಕೊಟ್ಟಿದ್ದಾರೆ. ಪ್ರಧಾನಿಯವರ ಪ್ರತಿಯೊಂದು ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಗಾಂಧಿ ಕುಟುಂಬಕ್ಕೆ ಹಿಂದುಳಿದ ವರ್ಗದ ವ್ಯಕ್ತಿ ಪ್ರಧಾನಿ ಆಗಿರುವುದನ್ನು ಸಹಿಸಲು ಆಗುತ್ತಿಲ್ಲ. ಆದ್ರೆ, ಮೋದಿಯವರ ನಾಯಕತ್ವವನ್ನ ಜನ ಒಪ್ಪಿದ್ದಾರೆ. ರಾಜಕೀಯಕ್ಕಾಗಿ ಕಾಂಗ್ರೆಸ್‌ನವರು ಪ್ರಧಾನಿಯನ್ನ ವಿರೋಧಿಸುತ್ತಿದ್ದಾರೆ ಅಂತಾ ಜರಿದಿದ್ದಾರೆ.

- Advertisement -

Latest Posts

Don't Miss